ರೂಪಾಂತರದ ಕೊರೊನಾ ಸೋಂಕು; ಈಗಿರುವ ಲಸಿಕೆಗಳು ಪರಿಣಾಮಕಾರಿಯೇ?

ಬ್ರಿಟನ್, ಡಿಸೆಂಬರ್ 24: ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರದ ಕೊರೊನಾ ಸೋಂಕಿನ ವ್ಯಾಪ್ತಿ ಹಿಗ್ಗುತ್ತಿದ್ದು, ಇದೀಗ ಉತ್ತರ ಐರ್ಲೆಂಡ್ ನಲ್ಲೂ ಸೋಂಕಿನ ಪ್ರಕರಣಗಳು ಕಂಡುಬರುತ್ತಿವೆ. ಇಸ್ರೇಲ್ ನಲ್ಲಿ ಬ್ರಿಟನ್ ನಿಂದ ಹಿಂದಿರುಗಿದ ನಾಲ್ವರಲ್ಲಿ ಸೋಂಕಿನ ಪ್ರಕರಣ ಪತ್ತೆಯಾಗಿದೆ.

ಇದೇ ಸಂದರ್ಭ, ದಕ್ಷಿಣ ಆಫ್ರಿಕಾದಲ್ಲಿ ಬ್ರಿಟನ್ ನ ಹೊಸ ರೂಪಾಂತರದ ವೈರಸ್ ಗಿಂತಲೂ ಬಲಿಷ್ಠ ವೈರಸ್ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅತಿ ವೇಗವಾಗಿ ಹರಡಬಲ್ಲ ಈ ವೈರಸ್ ದಕ್ಷಿಣ ಆಫ್ರಿಕಾದಿಂದ ಬ್ರಿಟನ್ ಗೆ ಬಂದ ಇಬ್ಬರಲ್ಲಿ ಗುರುವಾರ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದಿಂದ ಬರುವ ವಿಮಾನಗಳನ್ನು ಬ್ರಿಟನ್ ರದ್ದುಪಡಿಸಿದೆ.

ಆದರೆ ಈ ಹೊಸ ರೂಪಾಂತರಗಳಿಂದ ಭೀತಿ ಪಡುವ ಅಗತ್ಯವಿಲ್ಲ ಎಂದು ಲಸಿಕಾ ಅಭಿವೃದ್ಧಿ ಸಂಸ್ಥೆಗಳು ತಿಳಿಸಿವೆ. ಕೊರೊನಾ ವೈರಸ್ ರೂಪಾಂತರಗಳಿಗೂ ಈಗ ಅಭಿವೃದ್ಧಿಗೊಂಡಿರುವ ಲಸಿಕೆಗಳು ಪರಿಣಾಮಕಾರಿಯಾಗಿವೆ ಎಂದು ಮಾಡೆರ್ನಾ ಲಸಿಕೆ ತಯಾರಿಕಾ ಸಂಸ್ಥೆ ಭರವಸೆ ನೀಡಿದೆ. ವೈರಸ್ ನ ಯಾವುದೇ ರೂಪಾಂತರದ ಮೇಲೆ ಲಸಿಕೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಪರೀಕ್ಷೆ ನಡೆಸುವ ತಯಾರಿಯಲ್ಲಿರುವುದಾಗಿ ತಿಳಿಸಿದೆ. ಮಾಡೆರ್ನಾ ಜೊತೆಗೆ ಫೈಜರ್, ಆಸ್ಟ್ರಾಜೆನೆಕಾ ಲಸಿಕೆಗಳು ಕೂಡ ಈ ರೂಪಾಂತರದ ಸೋಂಕಿಗೆ ಪರಿಣಾಮಕಾರಿಯಾಗುವ ಭರವಸೆ ವ್ಯಕ್ತಪಡಿಸಿವೆ.

Will Present Vaccines Effective On New Variants Of Coronavirus

ಜೊತೆಗೆ ಈ ಹೊಸ ವೈರಸ್ ಪತ್ತೆ ಹಚ್ಚುವುದರಲ್ಲಿ ಯಾವುದೇ ಭಿನ್ನತೆಯಿಲ್ಲ. ಸೋಂಕಿನ ಪರೀಕ್ಷಾ ವಿಧಾನದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಬ್ರಿಟನ್ ನ ಆರೋಗ್ಯ ಸಂಸ್ಥೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+