ಕಾಡಲ್ಲಿ ಅನಾಥವಾಗಿ ಸಿಕ್ಕ ಬೆಕ್ಕಿನ ಮರಿ : 100 ವರ್ಷಗಳ ಬಳಿಕ ಗೊತ್ತಾಯ್ತು ಪ್ರಭೇದ; ವಿಜ್ಞಾನಿಗಳಿಗೇ ಶಾಕ್

Wild Cat: ಈ ಭೂಮಿ ಮೇಲೆ ಅದೆಷ್ಟೋ ಪ್ರಾಣಿಗಳಿವೆ. ಕೆಲವು ನೋಡುವುದಕ್ಕೆ ಒಂದೇ ರೀತಿ ಕಾಣಬಹುದು. ಆದರೆ ಪ್ರಭೇದ ಬೇರೆ ಬೇರೆ ಆಗಿರುತ್ತದೆ. ಕೆಲವೊಂದು ಪ್ರಾಣಿಗಳು ಈ ಭೂಮಿ ಮೇಲೆ ಇವೆ ಎನ್ನುವುದು ಕೂಡಾ ನಮಗೆ ಗೊತ್ತೇ ಇರಲ್ಲ. ವಿಜ್ಞಾನಿಗಳಿಗೂ ಕೆಲವು ಪ್ರಾಣಿಗಳನ್ನ ನೋಡಿ ಆಶ್ಚರ್ಯ ಪಟ್ಟದ್ದು ಇದೆ. ಇನ್ನು ಕೆಲವನ್ನ ಬರೀ ಝೂನಲ್ಲಿ ನೋಡುತ್ತೇವೆ. ಇದೀಗ ಇಂಥದ್ದೇ ಒಂದು ಪ್ರಾಣಿ ಬೆಳಕಿಗೆ ಬಂದಿದೆ.

Wild Cat Found In Forest New Species Wild Cat Discovered Scientist Named Leopardus Tilcayo Guinness Record

ಲೆಪರ್ಡ್ ಟಿಲ್ಕಾಯೊ ಪ್ರಭೇದ :

ಬೊಲಿವಿಯಾದ ಕಾಡಿನಲ್ಲಿ (forest) ಒಂದು ಸಣ್ಣ ಬೆಕ್ಕಿನ ಮರಿ ಸಿಕ್ಕಿದೆ. ಮೊದಲು ಈ ಬೆಕ್ಕಿನ ಮರಿಯನ್ನು ನೋಡಿ ಇದೊಂದು ಕಾಡು ಬೆಕ್ಕು ಅನ್ನೋ ನಿರ್ಧಾರಕ್ಕೆ ಬರಲಾಯಿತು. ಆರಂಭದಲ್ಲಿ, ಇದು ಸಾಮಾನ್ಯ ಕಾಡು ಬೆಕ್ಕಿನ ರೀತಿಯೇ ಕಾಣುತ್ತಾ ಇತ್ತು ಕೂಡಾ. ಆದರೆ, ತುಂಬಾ ವರ್ಷಗಳ ಸಂಶೋಧನೆಯ ನಂತರ, ಇದು ಕಾಡು ಬೆಕ್ಕಲ್ಲ ಬೇರೆಯೇ ಪ್ರಭೇದ ಎನ್ನುವುದನ್ನು ಕಂಡು ಹಿಡಿಯಲಾಗಿದೆ. ಇದಕ್ಕೆ ಲೆಪರ್ಡ್ ಟಿಲ್ಕಾಯೊ (Leopardus tilcayo) ಎಂದು ಹೆಸರಿಸಲಾಗಿದೆ. ಈ ಹೊಸ ಜಾತಿಯ ಬೆಕ್ಕಿನ ಕೆಲವು ಫೋಟೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಇನ್ಸ್ಟಾಗ್ರಾಮ್ ಅಕೌಂಟಿನಲ್ಲಿ ಶೇರ್ ಮಾಡಲಾಗಿದೆ.

ಹೊಸ Wild Cat :

ಫೋಟೋ ಜೊತೆಗೆ ಈ ಬೆಕ್ಕಿನ ಹೊಸ ಜಾತಿಯ ಬಗ್ಗೆ ಕೆಲವು ಮಾಹಿತಿ ಕೂಡಾ ಶೇರ್ ಮಾಡಲಾಗಿದೆ. ಈ ಆವಿಷ್ಕಾರದ ಕಥೆ 2017ರಲ್ಲಿ ಪ್ರಾರಂಭವಾಯಿತು. ಅಲ್ಲಿ ಬೊಲಿವಿಯಾದ ಯುಂಗಾಸ್ ಪ್ರದೇಶದ ಕಾಡಿನ ಬಳಿ ಒಬ್ಬ ವ್ಯಕ್ತಿಗೆ ಒಂದು ಸಣ್ಣ ಬೆಕ್ಕಿನ ಮರಿ ಸಿಕ್ಕಿತು. ಅವನು ಆ ಬೆಕ್ಕಿನ ಮರಿಯನ್ನು ತನ್ನೊಟ್ಟಿಗೆ ತೆಗೆದುಕೊಂಡು ಮನೆಗೆ ಹೋಗಿದ್ದಾನೆ. ಇದಾದ ನಂತರ ಸುಮಾರು ಒಂದು ವರ್ಷ ಮನೆಯಲ್ಲಿ ಇಟ್ಟುಕೊಂಡು ಸಾಕಿದ್ದಾನೆ. ಆರಂಭದಲ್ಲಿ, ಇದನ್ನು ಸಾಮಾನ್ಯ ಸಾಕು ಬೆಕ್ಕು ಅಂತನೇ ಅಂದುಕೊಂಡಿದ್ದರು. ಆದರೆ ಬೆಕ್ಕು ಬೆಳೆಯುತ್ತಾ ಹೋದ ಹಾಗೆ ಅದರ ನೋಟ ಮತ್ತು ದೇಹದ ರಚನೆ ನೋಡಿ, ವ್ಯಕ್ತಿಗೆ ಅನುಮಾನ ಬಂದಿದೆ. ಇದು ಯಾವ ರೀತಿಯ ಬೆಕ್ಕು ಎನ್ನುವುದು ಅರ್ಥವಾಗಲಿಲ್ಲ. ಅಂತಿಮವಾಗಿ, ಈ ಪ್ರಾಣಿಯನ್ನು ಬೊಲಿವಿಯಾದ ಸೆಂಡಾ ವರ್ಡೆ ವನ್ಯಜೀವಿ ಕೇಂದ್ರಕ್ಕೆ ಕರೆದೊಯ್ದರು.

ಟೈಗರ್ ಕ್ಯಾಟ್ ಎನ್ನುವ ಅನುಮಾನ :

ಈ ವಿಶಿಷ್ಟ ಬೆಕ್ಕಿನ ಬಗ್ಗೆ ತಿಳಿದ ನಂತರ, ಜೀವಶಾಸ್ತ್ರಜ್ಞ ಡಾ.ಪಾವೊಲಾ ನೊಗಾಲೆಸ್-ಅಸ್ಕರುಂಜ್ ಅದರ ಬಗ್ಗೆ ತನಿಖೆ ಮಾಡಲು ಪ್ರಾರಂಭಿಸಿದರು. ಅವರು ಬೊಲಿವಿಯಾದಲ್ಲಿ ಕಾಡು ಬೆಕ್ಕುಗಳ ಬಗ್ಗೆ ಸಂಶೋಧನೆ (research) ನಡೆಸಿದ್ದಾರೆ. ಮೊದಲ ನೋಟದಲ್ಲಿ, ಇದು ಟೈಗರ್ ಕ್ಯಾಟ್ ಎನ್ನುವ ಕಾಡು ಬೆಕ್ಕು ಪ್ರಭೇದವಾಗಿರಬಹುದು ಎಂದೇ ಭಾವಿಸಿದ್ದರು. ಅದರ ದುಂಡಗಿನ ಮುಖ, ಸಣ್ಣ ಕಿವಿ, ಉದ್ದವಾದ ಮೀಸೆ ಮತ್ತು ದೇಹದ ಮೇಲಿನ ಕಲೆ ನೋಡುತ್ತಿದ್ದ ಹಾಗೆಯೇ ಅದು ಕಾಡು ಬೆಕ್ಕು ಕುಟುಂಬಕ್ಕೆ ಸೇರಿದೆ ಅಂದುಕೊಂಡಿದ್ದರು. ಆದರೆ ಕೆಲವು ವರ್ಷಗಳ ನಂತರ, ಮತ್ತೆ ಈ ಬೆಕ್ಕಿನ ಹಳೆಯ ಫೋಟೋ ನೋಡಿದಾಗ, ಅವೆರಡು ಬೇರೆ ಬೇರೆ ಎನ್ನುವುದು ಗೊತ್ತಾಗಿದೆ. ಅದರ ದೇಹದ (body) ಮೇಲಿನ ಗುರುತು ಈ ಹಿಂದೆ ಗುರುತಿಸಲಾದ ಟೈಗರ್ ಕ್ಯಾಟಿನೊಂದಿಗೆ ಹೊಂದಿಕೆಯಾಗಲಿಲ್ಲ. ಹಾಗಾಗಿ ಈ ವಿಶಿಷ್ಟ ಪ್ರಾಣಿಯ ಆಳವಾದ ತನಿಖೆ ಇಲ್ಲಿಂದಲೇ ಪ್ರಾರಂಭವಾಯಿತು.

ಏಳು ವರ್ಷಗಳ ಸಂಶೋಧನೆಯ ನಂತರ ರಹಸ್ಯ ಬಹಿರಂಗ :

ಈ ಬೆಕ್ಕಿನ ಗುರುತನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ವಿವಿಧ ಸಂಶೋಧನೆ ನಡೆಸಿದ್ದಾರೆ. ಇದು ಅನುವಂಶಿಕ ಪರೀಕ್ಷೆಯನ್ನು ಕೂಡಾ ಒಳಗೊಂಡಿತ್ತು. ಸಂಶೋಧನೆಯ ಡೇಟಾ ವಿಜ್ಞಾನಿಗಳಿಗೆ ಇದು ಈಗಾಗಲೇ ಗುರುತಿಸಲಾದ ಬೆಕ್ಕಿನ ಸಾಮಾನ್ಯ ವಿಧವಲ್ಲ. ಇದೊಂದು ಪ್ರತ್ಯೇಕ ಪ್ರಭೇದ ಎನ್ನುವುದು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಅಕ್ಟೋಬರ್ 5ಕ್ಕೆ ವೈಜ್ಞಾನಿಕ ಜರ್ನಲ್ ಕರೆಂಟ್ ಬಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಹೊಸ ಪ್ರಭೇದಕ್ಕೆ ಲೆಪರ್ಡ್ ಟಿಲ್ಕಾಯೊ ಎಂದು ಹೆಸರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+