ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಕಾನ್ ವ್ಯಾಲಿಯಲ್ಲಿ ಮೋದಿ ಮಾಡಿದ ಸಿಡಿಲಿನಂಥ ಭಾಷಣ ಕೇಳಿ

By Mahesh
|
Google Oneindia Kannada News

ಕ್ಯಾಲಿಫೋರ್ನಿಯಾ, ಸೆ.27: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ವಿಶ್ವದ ಅಗ್ರಗಣ್ಯ ಸಂಸ್ಥೆಗಳ ಸಿಇಒಗಳನ್ನು ಉದ್ದೇಶಿಸಿ ಮಾಡಿದ ಭಾಷಣದ ಪೂರ್ಣ ಪಾಠ ಇಲ್ಲಿದೆ.

ಡಿಜಿಟಲ್ ಇಂಡಿಯಾ ಹಾಗೂ ಭಾರತದಲ್ಲಿ ಸ್ಟಾರ್ ಅಪ್ ಕಂಪನಿಗಳಿಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಮೋದಿ ಅವರು ತಮ್ಮ ಭಾಷಣದಲ್ಲಿ ಹೆಚ್ಚಿನ ಒತ್ತು ನೀಡಿದರು.[ಸಿಲಿಕಾನ್ ವ್ಯಾಲಿಯಲ್ಲಿ ಮೋದಿ, ಡಿಜಿಟಲ್ ಇಂಡಿಯಾ ಮೋಡಿ]

ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗಬೇಕು. ಎಲ್ಲರಿಗೂ ಸ್ಥಳೀಯ ಭಾಷೆಯಲ್ಲೇ ಲಭ್ಯವಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಭಾರತದಲ್ಲಿ ಮೇಕ್ ಇನ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ ಯೋಜನೆ ಸಾಕಾರಕ್ಕೆ ಸಹಕರಿಸುವಂತೆ ಮೋದಿ ಅವರು ನೀಡಿದ ಆಹ್ವಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಮೆರಿಕದ ಕ್ಯಾಲಿಪೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ಉದ್ಯಮಿಗಳು ಹಾಗೂ ಸಾಫ್ಟ್‌ವೇರ್ ದಿಗ್ಗಜರನ್ನುದ್ದೇಶಿಸಿ ಮಾತನಾಡಿದ ಅವರು, ಐಟಿ ದಿಗ್ಗಜರಾದ ಶಂತನು, ಜಾನ್, ಸತ್ಯಾ, ಪಾಲ್, ಸುಂದರ್ ಹಾಗೂ ವೆಂಕಟೇಶ್ ಅವರಿಗೆ ಧನ್ಯವಾದ ಅರ್ಪಿಸಿ ಮಾತು ಶುರು ಮಾಡಿದರು.

ಭಾರತ-ಯುಎಸ್ ಡಿಜಿಟಲ್ ಆರ್ಥಿಕತೆಗೆ ಉತ್ತಮ ವೇದಿಕೆ ಇಲ್ಲಿ ಕಾಣುತ್ತಿದೆ ಎಲ್ಲರಿಗೂ ಗುಡ್ ಇವನಿಂಗ್!

What PM Narendra Modi said at Digital India Dinner in San Jos

ಒಂದೇ ಸೂರಿನಲ್ಲಿ ವಿಶ್ವದ ದಿಕ್ಕು ಬದಲಿಸಬಲ್ಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರನ್ನು ಇಲ್ಲಿ ಕಾಣುತ್ತಿದ್ದೇನೆ. ನಿಮ್ಮಲ್ಲಿ ಹಲವಾರು ಮಂದಿಯನ್ನು ದೆಹಲಿ ಹಾಗೂ ನ್ಯೂಯಾರ್ಕ್, ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ಮೂಲಕ ಭೇಟಿ ಮಾಡಿದ್ದೇನೆ. ಅದರೆ, ಇಲ್ಲಿ ಹೊಸ ಬೆಳಕನ್ನು ಕಾಣುತ್ತಿದ್ದೇನೆ. ಫೇಸ್ಬುಕ್ ಏನಾದರೂ ದೇಶವಾಗಿದ್ದರೆ ವಿಶ್ವದ ಮೂರನೇ ಅತಿ ಹೆಚ್ಚು ಬಳಕೆದಾರರ ದೇಶವಾಗುತ್ತಿತ್ತು.[ವಿಶ್ವಸಂಸ್ಥೆಯಲ್ಲಿ ಮೋದಿ ಮಾಡಿದ ಭಾಷಣದ 10 ಅತ್ಯುತ್ತಮ ಉಲ್ಲೇಖ]

ಗೂಗಲ್ ಇಂದು ಜಗತ್ತಿಗೆ ಗುರುವಾಗಿದೆ. ಸಾಫ್ಟ್‌ವೇರ್ ತಂತ್ರಜ್ಞನ ಕಂಪನಿಗಳಿಂದ ಇಂದು ವಿಶ್ವವೇ ಬದಲಾಗಿದೆ. ಟ್ವಿಟ್ಟರ್ ಎಲ್ಲರನ್ನು ವರದಿಗಾರರನ್ನಾಗಿಸಿದೆ. ಟ್ರಾಫಿಕ್ ಸಿಗ್ನಲ್ ಗಳು ಸಿಸ್ಕೋ ರೂಟರ್ ಗಳಿಂದ ಸಮರ್ಪಕವಾಗಿ ಸಂಚಾರಕ್ಕೆ ಕಾರಣವಾಗಿದೆ.

ನಾವು ಎದ್ದಿರುತ್ತೇವೆ, ಮಲಗಿರುತ್ತೇವೆ ಎಂಬುದು ಇಂದು ಮುಖ್ಯವಾಗುತ್ತಿಲ್ಲ. ಆನ್‌ಲೈನ್, ಆಫ್‌ಲೈನ್ ಇರುತ್ತದೆ ಎಂಬುದು ಈಗ ಮುಖ್ಯವಾಗಿದೆ ಎಂದರು. ಆಡಳಿತದ ಗುಣಮಟ್ಟ ಹೆಚ್ಚಿಸಲು ತಂತ್ರಜ್ಞಾನ ಬಳಕೆ ಅತ್ಯಾವಶ್ಯಕವೆಂದು ಪ್ರತಿಪಾದಿಸಿದ ಅವರು, ಭಾರತದಲ್ಲೂ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದರು.

ದೇಶದಲ್ಲಿರುವ ಹಲವಾರು ಸಮಸ್ಯೆಗಳನ್ನು ನಿವಾರಿಸುವಲ್ಲಿ ತಂತ್ರಜ್ಞಾನ ಬಳಕೆಯಾಗಬೇಕು ಎಂದು ಒತ್ತಿ ಹೇಳಿದ ಪ್ರಧಾನಿ ಮೋದಿ ಅವರು, ಇದರಿಂದ ಅಭಿವೃದ್ಧಿ ತಂತ್ರಜ್ಞಾನ ಬೆಳೆಯಲು ಹೆಚ್ಚಿನ ಹಾಯಕಾರಿಯಾಗುವುದು ಎಂದರು.

Modi

ಭಾರತದಲ್ಲಿ ವಿಮೆ, ಬ್ಯಾಂಕ್ ಪಿಂಚಣಿ ಇತರೆ ಯೋಜನೆಗಳಲ್ಲಿ ಬಳಕೆಯನ್ನು ಉಲ್ಲೇಖಿಸಿದರು. ಬ್ರಾಡ್‌ಬಾಂಡ್ ಮೂಲಕ ಪ್ರತಿಗ್ರಾಮದ ಶಾಲಾ-ಕಾಲೇಜುಗಳಲ್ಲಿ ಸಂಪರ್ಕ ಕಲ್ಪಿಸುವುದಾಗಿ ಹೇಳಿದರು. ಮೊಬೈಲ್ ಆಡಳಿತ ನಮ್ಮನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಇದರಿಂದ ನಾಗರಿಕರ ಜೀವನಮಟ್ಟ ಸುಧಾರಿಸುತ್ತಿದೆ ಎಂದ ಅವರು, ಇಂದು ಗ್ರಾಮೀಣ ಜನರೂ ಸಹ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ ಎಂದರೆ ಎಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆಯುತ್ತಿದೆ ಎಂಬುದು ಅರ್ಥವಾಗುತ್ತದೆ ಎಂದರು.

ಸ್ಥಳೀಯ ಭಾಷೆಗೆ ಆದ್ಯತೆ ಕೊಡಿ: ರೈತರಿಗೆ ಮಾರುಕಟ್ಟೆ ದರ, ಹವಾಮಾನ ಮಾಹಿತಿ ಲಭ್ಯ್, ಹರ್ಯಾಣದ 'ಸೆಲ್ಫಿ ವಿಥ್ ಡಾಟರ್' ಅಭಿಯಾನ, ಜನಧನ ಯೋಜನೆ, ಮಹಾರಾಷ್ಟ್ರ ಸರ್ಕಾರದ ವಾಟ್ಸಪ್ ಗ್ರೂಪ್ ಗಳನ್ನು ಉಲ್ಲೇಖಿಸಿದರು.

ಭಾರತದ 22 ಅಧಿಕೃತ ಭಾಷೆಯಲ್ಲಿ ತಂತ್ರಜ್ಞಾನ ಲಭ್ಯವಾಗುವುದು ಮುಖ್ಯವಾಗಿದೆ. ಇದರಿಂದಲೇ ಗ್ರಾಮಗಳು ಸ್ಮಾರ್ಟ್ ಎಕಾನಾಮಿಕ್ ಹಬ್ ಎನಿಸಲು ಸಾಧ್ಯ. ರೈತರಿಗೆ ಸುಸ್ಥಿರ ಮಾರುಕಟ್ಟೆ ಸಿಗಲಿದೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಡಿಸೈನ್ ಇನ್ ಇಂಡಿಯಾ ಯೋಜನೆಗಳ ಮುಖ್ಯ ಉದ್ದೇಶವೂ ಇದೆ ಆಗಿದೆ.

Modi dinner with CEOs
ಇಂಟರ್‌ನೆಟ್ ಇಂದು ಇಡೀ ವಿಶ್ವವನ್ನೇ ವ್ಯಾಪಿಸಿದೆ. ಮನೆಯಲ್ಲೇ ಕುಳಿತುಕೊಂಡು ವಿಶ್ವದ ಆಗುಹೋಗುಗಳನ್ನು ತಿಳಿದುಕೊಳ್ಳುವಂತಹ ವ್ಯವಸ್ಥೆ ನಿರ್ಮಾಣವಾಗಿರುವುದು ಶ್ಲಾಘನೀಯ ಎಂದರು. ಭಾರತದಲ್ಲೂ ಉಚಿತ ಇಂಟರ್‌ನೆಟ್ ಸೇವೆ ನೀಡಲು ಚಿಂತನೆ ನಡೆದಿದೆ. ಇಂದು ವಿಶ್ವದ ಅಭಿವೃದ್ಧಿಗಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಅಭಿವೃದ್ಧಿಯೊಂದೇ ನಮ್ಮ ಏಕೈಕ ಗುರಿಯಾಗಿರಬೇಕು ಎಂದರು.

ಅಮೆರಿಕ ಭಾರತ ಭೇಟಿ ಇಂದು ನಿನ್ನೆಯದಲ್ಲ. ಸುದೀರ್ಘ ಸಂಬಂಧ ಭಾಗವಾಗಿ ನಾನು ಇಲ್ಲಿಗೆ ಬಂದು ನಿಮ್ಮನ್ನುದ್ದೇಶಿಸಿ ಮಾತನಾಡುವಂತಾಗಿದೆ. ಈ ಸುಂದರ ಕ್ಷಣಗಳನ್ನು ಮರೆಯುವಂತಿಲ್ಲ. ಅಮೆರಿಕ ಭಾರತ ಎಕಾನಮಿಗೆ ಸ್ಪಷ್ಟ ಚಿತ್ರಣವಿದೆ. ಇಂದು ಸಾಫ್ಟವೇರ್ ಕಂಪೆನಿಗಳಿಂದ ವಿಶ್ವವೇ ನಡೆಯುತ್ತಿದೆ. ಇದು ಸಾಮಾನ್ಯ ಸಂಗತಿಯಲ್ಲ. ಫೇಸ್‌ಬುಕ್‌ನಿಂದ ಇಂದು ಜನರ ಜೀವನ ಆರಂಭವಾಗುತ್ತಿದೆ. ತಂತ್ರಜ್ಞಾನ ಇಂದು ಇಡೀ ಪ್ರಪಂಚವನ್ನೇ ಆವರಿಸಿದೆ ಎಂದು ಮೋದಿ ಹೇಳಿದರು.

ಸರ್ಕಾರದ ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಕೆ ಸಹಾಯಕಾರಿಯಾಗಿದೆ. ಇದು ಗುಣಮಟ್ಟ ಹೆಚ್ಚಿಸಲು ಸಹಾಯಕಾರಿಯಾಗುವುದು, ಬಡತನದ ವಿರುದ್ಧ ಹೋರಾಡಲು ತಂತ್ರಜ್ಞಾನ ಬಳಕೆ ಅತ್ಯಗತ್ಯವಾಗಿದೆ ಎಂದ ಅವರು, ಇಂತಹ ಸಂದರ್ಭದಲ್ಲಿ ಸಿಲಿಕಾನ್ ವ್ಯಾಲಿನ ಭೇಟಿ ನೀಡುತ್ತಿರುವುದು ನೆಮ್ಮದಿ ಮೂಡಿಸಿದೆ ಎಂದು ಹೇಳಿದರು.

ಭಾರತದ 500ಕ್ಕೂಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಗೂಗಲ್ ಸೇವೆ ನಡೆಯುತ್ತಿದೆ ಎಂದ ಅವರು, ವಿಶ್ವದ ತಂತ್ರಜ್ಞಾನ ಅಭಿವೃದ್ಧಿಗೆ ಪಕ್ಷಬೇಧ ಭಾವ ಮರೆತು ನಾವೆಲ್ಲರೂ ಶ್ರಮಿಸಬೇಕಾದ ಅಗತ್ಯ ಇದೆ. ಇದು ನಮ್ಮೆಲ್ಲರ ದೊಡ್ಡ ಜವಾಬ್ದಾರಿಯೂ ಆಗಿದೆ ಎಂದು ತಿಳಿಸಿದರು. ಸದೃಢ ವಿಶ್ವ ರೂಪಿಸುವುದು ನಮ್ಮೆಲ್ಲರ ಗುರಿ. ತಂತ್ರಜ್ಞಾನದ ಸಹಾಯದಿಂದ ವಿಶ್ವ ವೇಗವಾಗಿ ಬೆಳೆಯಲಿ ಎಂದು ಹಾರೈಸಿದರು. ಯುವಶಕ್ತಿ, ತಂತ್ರಜ್ಞಾನ ಹಾಗೂ ಪರಿಶೋಧನೆಯ ಅಭಿವೃದ್ಧಿ ಈಗ ಡಿಜಿಟಲ್ ಏಜ್ ನ ಮುಖ್ಯ ಮಂತ್ರವಾಗಬೇಕಿದೆ ಎಂದು ಹೇಳಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಟೆಸ್ಲಾ, ಫೇಸ್​ಬುಕ್, ಗೂಗಲ್, ಕ್ವಾಲ್ ಕಾಮ್ ​ನಂಥ ಐಟಿ ದಿಗ್ಗಜ ಸಂಸ್ಥೆಗಳ ಸಿಇಒಗಳ ಜತೆ ವಿಚಾರ ವಿನಿಮಯ, ಮಹತ್ವದ ಡಿನ್ನರ್ ಕಾರ್ಯಕ್ರಮವನ್ನು ಮೋದಿ ಅವರು ಯಶಸ್ವಿಯಾಗಿ ಪೂರೈಸಿ, ಭಾರತದ ಮಹತ್ವದ ಯೋಜನೆಗಳಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು. ಭಾಷಣದ ಪೂರ್ಣ ಪಾಠವನ್ನು ಕೇಳಿಸಿಕೊಳ್ಳಿ.

English summary
While continuing his charm with his excellent oratory skills, Prime Minister Narendra Modi delivered an electrifying and an inspirational speech at the Digital India Dinner at San Jose, California, popularly known as Silicon Valley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X