Russia & Ukraine: ಪುಟಿನ್ ಶತ್ರು ಸಾವಿನ ಸುತ್ತ ಅನುಮಾನದ ಹುತ್ತ!

ರಷ್ಯಾ ಆಂತರಿಕ ಬೆಂಕಿಯಲ್ಲಿ ಧಗಧಗಿಸುತ್ತಿದೆ. ರಷ್ಯಾ ಅಧ್ಯಕ್ಷ & ಪವರ್ ಫುಲ್ ಲೀಡರ್ ಅಂತಾ ಕರೆಸಿಕೊಳ್ಳುವ ವ್ಲಾದಿಮಿರ್ ಪುಟಿನ್‌ಗೆ ಸಾಲುಸಾಲು ಸವಾಲುಗಳು ಎದುರಾಗಿವೆ. ಹೀಗೆ ಎಲ್ಲಾ ಕೈಮೀರಿ ಹೋಗುತ್ತಿರುವ ಸಂದರ್ಭದಲ್ಲೇ ಪುಟಿನ್ ಶತ್ರಗಳಿಗೂ ಕಂಟಕ ಎದುರಾಗಿದೆ. ಇದಕ್ಕೆ ಪುಟಿನ್ ಅವರೇ ಕಾರಣ ಎಂದು ಅಮೆರಿಕ ಆರೋಪಿಸುತ್ತಿದ್ದು, ಅವರೆಲ್ಲರ ಸಾವಿನ ಹಿನ್ನೆಲೆ ಕೂಡ ಅನುಮಾನದ ಸುನಾಮಿ ಸೃಷ್ಟಿಸಿದೆ.

ವ್ಲಾದಿಮಿರ್ ಪುಟಿನ್ ಹೆಸರು ಕೇಳಿದರೆ ಅಮೆರಿಕ ಒಂದು ಕ್ಷಣ ನಡುಗುವ ಸ್ಥಿತಿ ಇದೆ. ಯಾಕಂದ್ರೆ ಜಗತ್ತಿನಲ್ಲಿ ಈಗಿನ ಸಮಯಕ್ಕೆ ಅಮೆರಿಕದ ವಿರುದ್ಧ ಮುಂಚೂಣಿಯಲ್ಲಿ ನಿಂತ ಲೀಡರ್ ಪುಟಿನ್ ಮಾತ್ರ. ಆದ್ರೆ ಪುಟಿನ್ ವಿರುದ್ಧ ಗಂಭೀರ ಆರೋಪಗಳಿದ್ದು, ತಮ್ಮ ಶತ್ರುಗಳನ್ನ ಪುಟಿನ್ ಹತ್ಯೆ ಮಾಡಿಸುತ್ತಾರೆ ಅಂತಿದೆ ಅಮೆರಿಕ. ಈಗ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಸಾವು ಕೂಡ ಇಂತಹದ್ದೇ ಆರೋಪ ಹೊತ್ತು ತಂದಿದ್ದು, ಪ್ರಿಗೊಝಿನ್ ಸಾವಿಗೆ ವ್ಲಾದಿಮಿರ್ ಪುಟಿನ್ ಕಾರಣ ಎಂಬ ಆರೋಪ ಸಂಚಲನ ಸೃಷ್ಟಿಸಿದೆ.

russian-wagner-group-chief-death

ಒಂದೇ ವಿಮಾನ.. 10 ಜನ ಉಡೀಸ್?

ಇದೇ ಬುಧವಾರ ಸಂಭವಿಸಿದ್ದ ವಿಮಾನ ಅಪಘಾತಕ್ಕೆ ಕಾರಣವಾಗಿರುವ ಅಂಶದ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ರಷ್ಯಾದ ಟ್ವೆರ್ ಪ್ರಾಂತ್ಯದಲ್ಲಿ ಖಾಸಗಿ ವಿಮಾನ ಪತನವಾಗಿ, ಪ್ರಿಗೊಝಿನ್ & ಆತನ ಜೊತೆಗೆ ಇದ್ದ 10 ಜನ ಮೃತಪಟ್ಟಿದ್ದರು. ಈ ಘಟನೆ ಸಂಬಂಧ ಅಮೆರಿಕ ಸೇರಿದಂತೆ ಪುಟಿನ್ ವಿರೋಧಿಗಳು ಗಂಭೀರ ಆರೋಪ ಮಾಡುತ್ತಿದ್ದಾರೆ. ಪುಟಿನ್ ಕೈವಾಡ ಇಲ್ಲದೆಯೇ ಯೆವ್ಗೆನಿ ಪ್ರಿಗೊಝಿನ್ ಹತ್ಯೆ ಸಾಧ್ಯವಿಲ್ಲ. ಹೀಗಾಗಿ ರಷ್ಯಾ ಸರ್ಕಾರವೇ ಹತ್ಯೆಯ ಹಿಂದಿನ ಸೂತ್ರದಾರಿ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಖಡಕ್ ಪ್ರತಿಕ್ರಿಯೆ ಕೊಟ್ಟ ರಷ್ಯಾ, ಕೃತ್ಯದಲ್ಲಿ ತನ್ನ ಪಾತ್ರವಿದೆ ಎಂಬ ವದಂತಿಯನ್ನ ತಳ್ಳಿಹಾಕಿದೆ. ಅಲ್ಲದೆ ಶತ್ರುಗಳ ವಿರುದ್ಧ ಗುಡುಗಿದೆ.

ಪುಟಿನ್ ಬುಡಕ್ಕೆ ಖಾಸಗಿ ಸೇನೆ ಬೆಂಕಿ?

ಇಡೀ ಜಗತ್ತಿಗೇ ಗೊತ್ತಿರುವಂತೆ ವ್ಲಾದಿಮಿರ್ ಪುಟಿನ್ ಈಗ ರಷ್ಯಾದ ಪ್ರಶ್ನಾತೀತ ನಾಯಕ. ಹೀಗಾಗಿ ಪುಟಿನ್ ವಿರುದ್ಧ ಯಾರೂ ಧ್ವನಿ ಎತ್ತು ಧೈರ್ಯ ಮಾಡಲ್ಲ. ಆದರೆ ಇತ್ತೀಚೆಗಷ್ಟೆ ಕಣ್ಣು ಬಿಟ್ಟಿರುವ ರಷ್ಯಾ ಖಾಸಗಿ ಸೇನೆ ಪುಟಿನ್ ಆಡಳಿತದ ವಿರುದ್ಧ ಷಡ್ಯಂತ್ರ ನಡೆಸಿರುವ ಆರೋಪ ಇತ್ತು. ಅದರಲ್ಲೂ ವ್ಲಾದಿಮಿರ್ ಪುಟಿನ್‌ ಅವರ 23 ವರ್ಷದ ಆಡಳಿತಕ್ಕೆ ಕೂಡ ಸವಾಲು ಎದುರಾಗಿತ್ತು. ಉಕ್ರೇನ್‌ ಸೇರಿ ಆಫ್ರಿಕಾ & ಸಿರಿಯಾದಲ್ಲೂ ಆತಂಕ ಎದುರಾಗಿತ್ತು. ಈ ಹೊತ್ತಲ್ಲೇ ರಷ್ಯಾ ವಿರುದ್ಧವೇ ದಂಗೆ ಎದ್ದು, ಜೂನ್ ತಿಂಗಳಲ್ಲಿ ರಷ್ಯಾದ ಅಸ್ತಿತ್ವಕ್ಕೂ ಬೆಂಕಿ ಇಡುವ ಕೆಲಸ ಮಾಡಿದ್ದ. ಹೀಗಾಗಿಯೇ ಪ್ರಿಗೊಝಿನ್ ಹತ್ಯೆ ಮಾಡಲಾಗಿದೆ ಅಂತಾ ಆರೋಪ ಮಾಡಲಾಗುತ್ತಿದೆ.

russian-wagner-group-chief-death

ಶತ್ರು ಸಾವಿಗೆ ಪುಟಿನ್ ಕಂಬನಿ!

ನಿನ್ನೆ ಅಮೆರಿಕ ಅಧ್ಯಕ್ಷರು ರಷ್ಯಾ ಖಾಸಗಿ ಸೇನೆ ಮುಖ್ಯಸ್ಥನ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ರು. ರಷ್ಯಾದಲ್ಲಿ ಪುಟಿನ್ ಹಿಂದೆ ನಿಲ್ಲದವರದ್ದು ಅಲ್ಲಿ ಏನು ನಡೆಯಲ್ಲ ಆದ್ರೆ ಉತ್ತರ ಸ್ಪಷ್ಟವಾಗಿಲ್ಲ ಎಂದು ಬೈಡನ್ ಪರೋಕ್ಷವಾಗಿ ಪುಟಿನ್‌ಗೆ ತಿರುಗೇಟು ಕೊಟ್ಟಿದ್ದರು. ಇದೇ ಹೊತ್ತಲ್ಲಿ ಪುಟಿನ್ ಕೂಡ ಪ್ರಿಗೊಝಿನ್ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿ, 'ಜಾಣ ವ್ಯಕ್ತಿ, ಆದರೆ ತಪ್ಪು ಮಾಡಿದ್ದ' ಎಂದು ಹೇಳಿದ್ದರು. ಈ ಮೂಲಕ ರಷ್ಯಾ ಖಾಸಗಿ ಸೇನೆಯ ಮುಖ್ಯಸ್ಥನ ಎಡವಟ್ಟಿನ ಬಗ್ಗೆ ಪುಟಿನ್ ಪ್ರಸ್ತಾಪಿಸಿದ್ದರು, ಹಾಗೇ ಸಂತಾಪ ಸೂಚಿಸಿದ್ದರು.

ಪುಟಿನ್ ಬೆನ್ನಿಗೆ ಪ್ರಿಗೊಝಿನ್ ಚೂರಿ?

ವ್ಯಾಗ್ನರ್ ಗುಂಪು ಅಥವಾ ರಷ್ಯಾ ಖಾಸಗಿ ಸೈನಿಕ ಪಡೆ ರಷ್ಯಾದ ಸರ್ಕಾರಿ ಸೇನೆಯಷ್ಟೇ ಪ್ರಬಲ. ಪುಟಿನ್‌ ಅಧಿಕಾರ ಅವಧಿಯಲ್ಲಿ ಖಾಸಗಿ ಸೇನೆ ಸ್ಥಾಪನೆ ಆಗಿತ್ತು. ಯೆವ್ಗೆನಿ ಪ್ರಿಗೊಝಿನ್ ಅಂದ್ರೆ ಹಲವು ದಶಕಗಳಿಂದ ವ್ಲಾದಿಮಿರ್ ಪುಟಿನ್ ಜೊತೆ ಇರುವ ಈ ವ್ಯಕ್ತಿ ಖಾಸಗಿ ಸೇನೆ ಮುಖ್ಯಸ್ಥ. 2014ರಲ್ಲಿ ವ್ಲಾದಿಮಿರ್ ಪುಟಿನ್ ಪರ್ಮಿಷನ್ ಪಡೆದು ರಷ್ಯಾದಲ್ಲಿ ಖಾಸಗಿ ಸೇನೆ ಸ್ಥಾಪಿಸಿದ್ದ ಈ ಪ್ರಿಗೊಝಿನ್. ಆದರೆ ಇತ್ತೀಚೆಗೆ ಉಕ್ರೇನ್ ವಿರುದ್ಧ ಯುದ್ಧ ವಿಚಾರದಲ್ಲಿ ಪ್ರಿಗೊಝಿನ್‌ ಮತ್ತು ರಷ್ಯಾ ರಕ್ಷಣಾ ಸಚಿವನ ನಡುವೆ ಫೈಟ್ ಆಗಿತ್ತು. ಕಿತ್ತಾಟವು ಜೋರಾಗಿ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದರು.

russian-wagner-group-chief-death

ಒಟ್ನಲ್ಲಿ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥನ ಸಾವು ಸಾಕಷ್ಟು ವಿವಾದ ಎಬ್ಬಿಸಿದೆ. ಖುದ್ದಾಗಿ ರಷ್ಯಾ ಸರ್ಕಾವೇ ಈ ಕುರಿತು ತನಿಖೆ ನಡೆಸುತ್ತಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ರಷ್ಯಾದ ಖಾಸಗಿ ಸೇನೆ ನೇತೃತ್ವವನ್ನು ಯಾರು ವಹಿಸುತ್ತಾರೆ? ಅನ್ನೋದನ್ನ ಕಾದು ನೋಡಬೇಕು. ಇಷ್ಟೆಲ್ಲದರ ಮಧ್ಯೆ ಪ್ರಿಗೊಝಿನ್ ಸಾವು ಖಾಸಗಿ ಸೇನೆಯಲ್ಲಿ ಸಂಚಲನ ಸೃಷ್ಟಿಸಿದೆ. ಹೀಗೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದ್ದು, ತನಿಖೆ ಮುಂದುವರಿದಿದೆ.

ಬೆಲಾರಸ್ ಮೂಲಕ ಸಂಧಾನ ನಡೆದಿತ್ತು

ಉಕ್ರೇನ್ ಜೊತೆ ಭೀಕರ ಯುದ್ಧ ನಡೆಸುತ್ತಿರುವ ರಷ್ಯಾ ಜೂನ್‌ನಲ್ಲಿ ತನ್ನ ದೇಶ ಉಳಿದರೆ ಸಾಕು ಎಂಬ ಹಂತಕ್ಕೆ ಬಂದಿತ್ತು. ಜೂನ್ 23ರಂದು ದಿಢೀರ್ ತಮ್ಮ ದೇಶದ ವಿರುದ್ಧ ರಷ್ಯಾ ಖಾಸಗಿ ಸೇನೆ ಬಂಡಾಯ ಎದ್ದು, ಆಂತರಿಕ ದಂಗೆಗೆ ಮುಂದಾಗಿತ್ತು. ಆದರೆ ಈ ವೇಳೆ ಪುಟಿನ್ ತಮ್ಮ ಅತ್ಯಾಪ್ತ ಗೆಳೆಯ ಬೆಲಾರಸ್ ಮೂಲಕ ಸಂಧಾನ ಮಾಡಿಸಿ, ದಂಗೆ ಎದ್ದಿದ್ದ ಖಾಸಗಿ ಸೇನೆಯನ್ನ ತಣ್ಣಗಾಗಿಸಿದ್ದರು. ಕೇವಲ ಒಂದೇ ದಿನದಲ್ಲಿ ದಂಗೆಗೆ ಅಂತ್ಯ ಹಾಡಿದ್ದರು. ಜೂನ್ 23ರಂದು ಶುರುವಾಗಿದ್ದ ದಂಗೆ ಜೂನ್ 24ರಂದು ಅಂತ್ಯವಾಗಿತ್ತು. ಆದರೆ ರಷ್ಯಾ ಅಧ್ಯಕ್ಷರ ಜೊತೆ ಕಿರಿಕ್ ಮಾಡಿದ್ದ ಪ್ರಿಗೊಝಿನ್ ಶಿವನ ಪಾದ ಸೇರಿದ್ದಾನೆ.

russian-wagner-group-chief-death

ರಷ್ಯಾ ಹಿಡಿತಕ್ಕೆ ಸಿಕ್ಕಿದೆಯಾ ಪರಿಸ್ಥಿತಿ?

ದಿನಕ್ಕೊಂದು ವಿಡಿಯೋ ಮಾಡಿ ರಷ್ಯಾ ನಾಯಕರ ವಿರುದ್ಧ ಆಕ್ರೋಶ ಹೊರಹಾಕ್ತಿದ್ದ ಯೆವ್ಗೆನಿ ಪ್ರಿಗೊಝಿನ್. ರಷ್ಯಾ ಸೇನೆ ಅಧಿಕಾರಿಗಳು ಖಾಸಗಿ ಸೇನೆಗೆ ಸರಿಯಾಗಿ ಬುಲೆಟ್, ಬಾಂಬ್ ಸಪ್ಲೈ ಮಾಡುತ್ತಿಲ್ಲ. ಸೌಲಭ್ಯ ಸಿಗದೆ ವ್ಯಾಗ್ನರ್ ಸೈನಿಕರು ಸಾಯುತ್ತಿದ್ದಾರೆ. ಇಷ್ಟಾದ್ರೂ ರಷ್ಯಾ ಸೇನೆ ತಲೆಕೆಡಿಸಿಕೊಂಡಿಲ್ಲ ಅನ್ನೋ ಆರೋಪ ಮಾಡುತ್ತಿದ್ದ ಯೆವ್ಗೆನಿ ಪ್ರಿಗೊಝಿನ್. ಕಿತ್ತಾಟ ಇನ್ನೂ ಸಣ್ಣದಾಗಿರುವಾಗ ರಷ್ಯಾ ಅಧ್ಯಕ್ಷರು & ರಕ್ಷಣಾ ಸಚಿವ ಅದನ್ನ ಸೈಲೆಂಟ್ ಮಾಡಲಿಲ್ಲ. ಹೀಗೆ ದಂಗೆ ಎದ್ದು ಬಂದ ರಷ್ಯಾ ಖಾಸಗಿ ಸೇನೆ ಸಾಕಷ್ಟು ಭಯ ಮೂಡಿಸಿತ್ತು. ಆದರೆ ಇದೀಗ ಖಾಸಗಿ ಸೇನೆ ಮುಖ್ಯಸ್ಥನ ಸಾವಿನಿಂದ ಪರಿಸ್ಥಿತಿ ರಷ್ಯಾ ಹಿಡಿತಕ್ಕೆ ಸಿಕ್ಕಿದೆಯಾ?

ಅಂದಹಾಗೆ ಹೊರ ನೋಟದಲ್ಲಿ ಹೇಳುವುದಾದರೆ ಪುಟಿನ್ ಶತ್ರು ಹಾಗೂ ರಷ್ಯಾದ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಸಾವು ರಷ್ಯಾಗೆ ರಿಲೀಫ್ ನೀಡಿದೆ. ಅದ್ರಲ್ಲೂ ಸೇನೆ ಮತ್ತು ಪುಟಿನ್ ಆಡಳಿತಕ್ಕೆ ಎದುರಾಗಿದ್ದ ಗಂಡಾಂತರ ತಪ್ಪಿ ಹೋಗಿದೆ. ಆದರೆ ಯೆವ್ಗೆನಿ ಪ್ರಿಗೊಝಿನ್ ಸಾವಿನಿಂದ ಖಾಸಗಿ ಪಡೆಯ ಸೈನಿಕರು ಹೇಗೆ ಪ್ರತಿಕ್ರಿಯೆ ನೀಡ್ತಾರೆ? ಅಂತಾ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+