20 ಕಿ.ಮೀ. ನಡೆದು ಬರುವ ನೌಕರನಿಗೆ ಬಾಸ್ ನಿಂದ ಕಾರಿನ ಉಡುಗೊರೆ

ನ್ಯೂಯಾರ್ಕ್, ಜುಲೈ 19 : ಆಫೀಸಿಗೆ ತಡವಾಗಿ ಹೋಗಿ ಬಾಸ್‌ಗಳ ಕೆಂಗಣ್ಣಿಗೆ ಗುರಿಯಾಗುವ ನೌಕರರು ಹಲವು. ಆದ್ದರಿಂದ, ಧಾವಂತದಿಂದ ಕಚೇರಿಗೆ ಧಾವಿಸುತ್ತಾರೆ. ಕಚೇರಿಗೆ ನಡೆದುಕೊಂಡು ಹೋದ ನೌಕರನಿಗೆ ಸಿಇಓ ಕಾರ್ ಉಡುಗೊರೆ ಕೊಟ್ಟ ಘಟನೆ ಅಮೆರಿಕದಲ್ಲಿ ನಡೆದಿದೆ.

ಅಮೆರಿಕದ ಪೆಲ್ಹಾಮ್‌ನಲ್ಲಿ ವಾಲ್ಟರ್ ಕಾರ್ರ್ ಎಂಬಾತ ಸಿಇಓರಿಂದ ಕಾರು ಉಡುಗೊರೆ ಪಡೆದ ನೌಕರ. ಸುಮಾರು 20 ಕಿ.ಮೀ. ನಡೆದು ವಾಲ್ಟರ್ ಕಚೇರಿ ತಲುಪಿದ್ದಾನೆ. ಕೆಲಸದ ಮೇಲಿನ ಶ್ರದ್ಧೆಕಂಡು ಸಿಇಓ ವಾಲ್ಟರ್ ಅಭಿನಂದಿಸಿದ್ದಾರೆ.

ಬರ್ನಿಂಗ್ ಹ್ಯಾಮ್ ಕಾಲೇಜಿನ ವಿದ್ಯಾರ್ಥಿ ವಾಲ್ಟರ್ ಬಿಲ್ ಹೋಪ್ಸ್‌ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ್ದ. ಆದರೆ, ಕಚೇರಿ ತಲುಪಲು 20 ಕಿ.ಮೀ. ಕ್ರಮಿಸಬೇಕಿತ್ತು. ಸ್ನೇಹಿತರ ಬಳಿ ಡ್ರಾಪ್ ಕೇಳಿದ್ದಾನೆ. ಆದರೆ, ಕಾರು ಕೆಟ್ಟು ಹೋಗಿದೆ ಎಂದು ಅವರು ಕುಂಟು ನೆಪ ಹೇಳಿದ್ದಾರೆ.

car

ಕೊನೆಗೆ ಬೇರೆ ದಾರಿ ಕಾಣದೇ ವಾಲ್ಟರ್ ನಡೆದುಕೊಂಡು ಕಚೇರಿಗೆ ಹೊರಟಿದ್ದಾನೆ. ಸುಮಾರು 14 ಕಿ.ಮೀ.ನಡೆದ ಬಳಿಕ ರಾತ್ರಿ ಪೆಲ್ಹಾಮ್‌ ಪೊಲೀಸರು ಎಲ್ಲಿಗೆ ಹೋಗುತ್ತಿರುವುದು ಎಂದು ವಿಚಾರಿಸಿದ್ದಾರೆ. ವಾಲ್ಟರ್ ತನ್ನ ಕಥೆ ಹೇಳಿದ್ದಾನೆ.

ಪೊಲೀಸರು ವಾಲ್ಟರ್ ಕತೆ ಬರೆದು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಕೆಲಸಕ್ಕೆ ಹೋಗಲು ವಾಲ್ಟರ್ ಮಾಡುತ್ತಿರುವ ಸಾಹಸ ಬಿಲ್ ಹೋಪ್ಸ್‌ ಕಂಪನಿಯ ಸಿಇಓಗೂ ತಲುಪಿದೆ. ವಾಲ್ಟರ್ ಕಚೇರಿಗೆ ಬರುತ್ತಲೇ ಅವನನ್ನು ಅಭಿನಂದಿಸಿದ ಅವರು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಾಲ್ಟರ್ ಕಚೇರಿಗೆ ಬಂದ ಬಗೆ ಕೇಳಿ ಸಿಬ್ಬಂದಿಗಳು ದಂಗಾಗಿ ಹೋಗಿದ್ದಾರೆ. ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆ. ಆದರೆ, ವಾಲ್ಟರ್ ಯಾವುದೇ ವಿಶ್ರಾಂತಿ ಪಡೆಯದೇ ಕೆಲಸ ಮಾಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+