ಐಶ್ವರ್ಯಾ ರೈ ಬಚ್ಚನ್ ಕೇನ್ಸ್ ಲುಕ್ ನೋಡಿ ಗೇಲಿ ಮಾಡಿ ಸಂಕಷ್ಟಕ್ಕೆ ಸಿಲುಕಿದ ವಿವೇಕ್ ಅಗ್ನಿಹೋತ್ರಿ

ಈ ವರ್ಷ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅನೇಕ ಭಾರತೀಯ ನಟಿಯರು ರೆಡ್ ಕಾರ್ಪೆಟ್ ಮೇಲೆ ವಿಧ ವಿಧವಾದ ಉಡುಗೆ ಮೂಲಕ ಮೋಡಿ ಮಾಡುತ್ತಿರುವುದು ಕಂಡು ಬಂದಿದೆ. ಇದರಲ್ಲಿ ಪ್ರತಿ ಬಾರಿಯಂತೆ ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಲುಕ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನು ನೋಡಿ ಅಭಿಮಾನಿಗಳು ಸಾಕಷ್ಟು ಹೊಗಳುತ್ತಿದ್ದರೆ, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಐಶ್ವರ್ಯಾ ರೈ ಅವರ ಉಡುಪು ನೋಡಿ ವಿವೇಕ್ ಅಗ್ನಿಹೋತ್ರಿ ಕೋಪಗೊಂಡಿದ್ದಾರೆ. ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಬೆಳ್ಳಿ ಬಣ್ಣದ ಗೌನ್‌ನಲ್ಲಿ ಪೋಸ್ ನೀಡಿದರು. ಕಪ್ಪು ಸೂಟ್‌ನಲ್ಲಿರುವ ವ್ಯಕ್ತಿಯೊಬ್ಬರು ನಟಿಯ ಗೌನ್‌ನನ್ನು ರೆಡ್ ಕಾರ್ಪೆಟ್ ಮೇಲೆ ಹರಡಲು ಸಹಾಯ ಮಾಡಿದರು. ಆದರೆ, ಕೆಲವರಿಗೆ ನಟಿಯ ಈ ಲುಕ್ ಅಷ್ಟಾಗಿ ಇಷ್ಟವಾಗಿರಲಿಲ್ಲ. ಇದೀಗ ಈ ಪಟ್ಟಿಯಲ್ಲಿ ದಿ ಕಾಶ್ಮೀರ್ ಫೈಲ್ಸ್‌ನ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಹೆಸರೂ ಸೇರಿದೆ.

Vivek Agnihotri gets in trouble for making fun of Aishwarya Rai Bachchans Cannes look

ನಟಿಯ ಮೇಲೆ ಟಾರ್ಗೆಟ್

ವಾಸ್ತವವಾಗಿ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡುವ ಮೂಲಕ ಐಶ್ವರ್ಯಾ ರೈ ಬಚ್ಚನ್ ಅವರ ಉಡುಪಿನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಅವರು ಟ್ವೀಟ್ ಹೀಗಿದೆ, 'ನೀವು ವೇಷಭೂಷಣ ಗುಲಾಮರು' ಎಂಬ ಪದವನ್ನು ಅಗ್ನಿಹೋತ್ರಿ ಬಳಸಿದ್ದಾರೆ. ಇಂತಹ ಅಹಿತಕರ ಫ್ಯಾಷನ್‌ಗಾಗಿ ನಾವೇಕೆ ಮೂರ್ಖರಾಗುತ್ತಿದ್ದೇವೆ?' ಎಂದು ಅವರ ಟ್ವೀಟ್‌ನಲ್ಲಿ ವಿವೇಕ್ ಅಗ್ನಿಹೋತ್ರಿ ಐಶ್ವರ್ಯಾ ರೈ ಬಚ್ಚನ್ ಅವರ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

'ಯಾಕೆ ಉರಿಯುತ್ತಿದ್ದೀಯಾ?' ಅಗ್ನಿಹೋತ್ರಿಗೆ ಐಶ್ ಅಭಿಮಾನಿಗಳ ಪ್ರಶ್ನೆ

ವಿವೇಕ್ ಅಗ್ನಿಹೋತ್ರಿ ಅವರ ಈ ಕಾಮೆಂಟ್‌ಗೆ ಕೆಲವರು ಒಪ್ಪಿಗೆ ಸೂಚಿಸಿದರೆ, ಕೆಲವರು ನಟಿಯನ್ನು ಬೆಂಬಲಿಸಿದರು. ಚಿತ್ರನಿರ್ಮಾಪಕನನ್ನು ಕೆಣಕಿದ ನೆಟ್ಟಿಗರು ಹೀಗೆ ಬರೆದಿದ್ದಾರೆ, 'ನೀವು ಏಕೆ ಉರಿಯುತ್ತಿದ್ದೀರಿ, ಕೇನ್ಸ್ ನಿಮ್ಮನ್ನು ಆಹ್ವಾನಿಸಲಿಲ್ಲ ಅಂತಾನಾ? ಎಂದು ಕಾಲೆಳೆದಿದ್ದಾರೆ.

ವಿವೇಕ್ ಅಗ್ನಿಹೋತ್ರಿ ಸ್ಪಷ್ಟಣೆ

ನೆಟ್ಟಿಗರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 'ನನ್ನ ಕಾಮೆಂಟ್‌ಗೂ ARB ಗೂ ಯಾವುದೇ ಸಂಬಂಧವಿಲ್ಲ. ಇದು ವೇಷಭೂಷಣ ಗುಲಾಮಗಿರಿಯ ವಿಚಿತ್ರ ಪರಿಕಲ್ಪನೆಯನ್ನು ಮಾತ್ರ ಆಧರಿಸಿದೆ. ARB ಇದಕ್ಕೆ ಜವಾಬ್ದಾರನಾಗಿರುವುದಿಲ್ಲ. ಆಕೆ ಕೇವಲ ಮಾಡೆಲ್/ಫ್ಯಾಶನ್ ರಾಯಭಾರಿ ಮಾತ್ರ' ಎಂದು ವಿವೇಕ್ ಅಗ್ನಿಹೋತ್ರಿ ಸ್ಪಷ್ಟಣೆ ಪ್ರತಿಕ್ರಿಯೆ ನೀಡಿದ್ದಾರೆ.

Vivek Agnihotri gets in trouble for making fun of Aishwarya Rai Bachchans Cannes look

ಐಶ್ವರ್ಯಾ ರೈ ಬಚ್ಚನ್ 2002 ರಲ್ಲಿ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾದಾರ್ಪಣೆ ಮಾಡಿದರು.. ಪ್ರತಿ ಬಾರಿಯೂ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿಯರು ಭಾಗವಹಿಸುತ್ತಾರೆ ಮತ್ತು ತಮ್ಮ ಉಡುಗೆಗಳಿಂದ ಸುದ್ದಿ ಮಾಡುತ್ತಾರೆ.

ಕೇನ್ಸ್ ಫಿಲ್ಮ್ ಫೆಸ್ಟಿವಲ್ 2023ನಲ್ಲಿ ಬಾಲಿವುಡ್ ಸುಂದರಿಯರು ಮಿಂಚುವುದನ್ನು ಮುಂದುವರೆಸಿದ್ದಾರೆ. ಮಾಜಿ ವಿಶ್ವ ಸುಂದರಿ ಹಾಗೂ ನಟಿ ಐಶ್ವರ್ಯಾ ರೈ ಬಚ್ಚನ್ ಕೇನ್ಸ್‌ನ ರೆಡ್ ಕಾರ್ಪೆಟ್ ಮೇಲೆ ಹೂಡಿ ಗೌನ್‌ನೊಂದಿಗೆ ನಡೆದರೆ, ಊರ್ವಶಿ ರೌಟೇಲಾ ಕೂಡ ಅಂತಹ ಸ್ಟೈಲ್‌ನಲ್ಲಿ ಕಾಣಿಸಿಕೊಂಡರು. ಊರ್ವಶಿ ಅವರ ನೋಟವನ್ನು ನೋಡಿ ಜನರು ಆಶ್ಚರ್ಯಚಕಿತರಾದರು. ಊರ್ವಶಿ ರೌಟೇಲಾ ನೀಲಿ ಬಣ್ಣದ ತುಟಿಗಳೊಂದಿಗೆ ನಡೆಯುತ್ತಿರುವುದು ಕಂಡುಬಂದಿದೆ. ಅವರು ನೀಲಿ ಲಿಪ್ಸ್ಟಿಕ್, ಕ್ರೀಮ್ ಮತ್ತು ನೀಲಿ ಗೌನ್ನೊಂದಿಗೆ ಕಾಣಿಸಿಕೊಂಡರು. ಸದ್ಯ ಇವರು ಕೂಡ ಭಾರೀ ಸುದ್ದಿಯಲ್ಲಿದ್ದು ಟ್ರೋಲ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+