ವರ್ಷದ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಕಾಣುತ್ತದೆಯೇ?

Subscribe to Oneindia Kannada

ವಾಷಿಂಗ್ಟನ್, ಫೆಬ್ರವರಿ , 16: ಈ ಬಾರಿಯ ಸೂರ್ಯ ಗ್ರಹಣ ಆಗ್ನೇಯ ಏಷ್ಯಾ ಭಾಗದಲ್ಲಿ ಸಂಪೂರ್ಣವಾಗಿ ಗೋಚರವಾಗಲಿದೆ. ಮಾರ್ಚ್ 9 ರಂದು ಆಗ್ನೇಯ ಏಷ್ಯಾ ಭಾಗದ ಜನರು ಸಂಪೂರ್ಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.

ಹವಾಯಿ, ಗುವಾಂ ಮತ್ತು ಅಲಾಸ್ಕಾ ಸೇರಿದಂತೆ ಏಷ್ಯಾ ಮತ್ತು ಪೆಸಿಫಿಕ್‌ನ ಹಲವು ರಾಷ್ಟ್ರಗಳಲ್ಲಿ ಭಾಗಶಃ ಸೂರ್ಯಗ್ರಹಣ ಕಾಣಿಸಲಿದೆ. ಈ ಸೂರ್ಯ ಗ್ರಹಣ ಈಶಾನ್ಯ ಭಾರತದಲ್ಲಿ ಮಾತ್ರ ಕಾಣಲಿದೆ.[ಸಾಕ್ಷಾತ್ ದೇವರನ್ನೇ ಸಂಕಷ್ಟದಲ್ಲಿ ಸಿಲುಕಿಸುವ ಗ್ರಹಣ!]

Visualizations of March 8 total solar eclipse

ಮಾರ್ಚ್ 23 ರಂದು ನಡೆಯುವ ಚಂದ್ರ ಗ್ರಹಣ ಭಾರತದಲ್ಲಿ ಕಾಣಸಿಗಲಿದೆ. ಇವೆರಡನ್ನು ಹೊರತುಪಡಿಸಿ ಈ ವರ್ಷ ನಡೆಯುವ ಇತರ ಗ್ರಹಣಗಳು ಭಾರತದಲ್ಲಿ ಕಾಣುವುದಿಲ್ಲ. ಆಗಸ್ಟ್ 18ರಂದು ಭಾಗಶಃ ಚಂದ್ರ ಗ್ರಹಣ ಮತ್ತು ಸೆಪ್ಟೆಂಬರ್ 1 ರಂದು ವಲಯಾಕಾರ ಸೂರ್ಯಗ್ರಹಣ ನಡೆಯುತ್ತದೆಯಾದರೂ, ಅದೂ ಭಾರತದಲ್ಲಿ ಕಾಣಿಸದು. ಸೆ.16ರಂದು ಭಾಗಶಃ ಚಂದ್ರಗ್ರಹಣ ನಡೆಯಲಿದ್ದು ಭಾರತೀಯರು ನೋಡಬಹುದು.[ಸೂಪರ್ ಕೆಂಪು ಚಂದ್ರನ ಕುರಿತು ಇಂಟರೆಸ್ಟಿಂಗ್ ಸಂಗತಿ]

2015ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಿದ್ದವು. ಅದರಲ್ಲಿ ಎರಡು ಸಂಪೂರ್ಣ ಚಂದ್ರ ಗ್ರಹಣವಾಗಿದ್ದರೆ. ಒಂದು ಸಂಪೂರ್ಣ ಸೂರ್ಯ ಗ್ರಹಣವಾಗಿತ್ತು. ಮತ್ತೊಂದು ಭಾಗಶಃ ಸೂರ್ಯಗ್ರಹಣವಾಗಿತ್ತು. ಭಾರತದ ಹಲವೆಡೆ ಚಂದ್ರ ಗ್ರಹಣವನ್ನು ವೀಕ್ಷಣೆ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Astronomy enthusiasts and sky gazers will be able to watch five eclipses this year, but only two of these will be visible in India. The celestial events will start with a total solar eclipse on March 9, which will be partially visible in North East, Ujjain based Jiwaji Observatory's Superintendent Dr Rajendraprakash Gupt told PTI.
Please Wait while comments are loading...