Viral Video: ಯುವತಿ ತಲೆ ಮೇಲೇ ಸಿಸಿ ಕ್ಯಾಮೆರಾ ಇಟ್ಟ ಪೋಷಕರು-ಎಲ್ಲಿ ಹಾಗೂ ಕಾರಣ ಏನು?
Viral Video: ನೆರೆಯ ದೇಶವಾದ ಪಾಕಿಸ್ಥಾನದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಲ್ಲದೆ, ಇಲ್ಲಿನ ಜನರು ಜೀವನ ಹೇಗೆ ನಡೆಸುತ್ತಾರೆ, ಮಕ್ಕಳು ಶಿಕ್ಷಣ ಬಿಟ್ಟು ಸುಮ್ಮನೆ ಅಲೆದಾಡುತ್ತಿರುವ ಬಗ್ಗೆ ಈಗಾಗಲೇ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತಲೇ ಇರುತ್ತವೆ. ಇನ್ನು ಇದೀಗ ಇಲ್ಲಿನ ಮತ್ತೊಂದು ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.
ಪಾಕಿಸ್ತಾನದ ಹುಡುಗಿಯೊಬ್ಬಳು ತನ್ನ ತಲೆಯ ಮೇಲೆ ಸಿಸಿಟಿವಿ ಕ್ಯಾಮೆರಾವನ್ನು ಧರಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. "ಪಾಕಿಸ್ತಾನದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ತನ್ನ ಕುಟುಂಬವು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ಯಾಮೆರಾವನ್ನು ತನ್ನ ತಲೆ ಮೇಲೆ ಅಳವಡಿಕೆ ಮಾಡಿದೆ ಎಂದು ಆ ಯುವತಿ ಹೇಳಿದ್ದಾರೆ," ಅಂತಾ ಹೇಳಿದ್ದಾರೆ. ಅಲ್ಲದೆ, ಪಾಕಿಸ್ತಾನದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಕೂಡ ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಘರ್ ಕೆ ಕಾಲೇಶ್ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇನ್ನು ಈ ವೀಡಿಯೊದಲ್ಲಿ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತನ್ನ ಪೋಷಕರು ತನ್ನ ತಲೆಯ ಮೇಲೆ ಸಿಸಿ ಕ್ಯಾಮೆರಾವನ್ನು ಹಾಕಿದ್ದಾರೆ ಮತ್ತು ಅದರ ಸಹಾಯದಿಂದ ಅವರು ನನ್ನ ಮೇಲೆ ಕಟ್ಟಿದ್ದಾರೆ ಅಂತಲೂ ಆ ಯುವತಿ ಹೇಳುತ್ತಿದ್ದಾಳೆ.
ಈ ಮೂಲಕ ಕುಟುಂಬವು ಯುವತಿಯ ಸುರಕ್ಷತೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತದೆ. ಆದ್ದರಿಂದ ಅವಳು ಎಲ್ಲಿಗೆ ಹೋದರೂ, ಭೇಟಿಯಾದರೂ, ಅವಳ ಕುಟುಂಬಕ್ಕೆ ಅದರ ಬಗ್ಗೆ ತಿಳಿಯುತ್ತದೆ. ಇನ್ನು ಪಾಕಿಸ್ತಾನಿ ಯುವತಿಯ ಈ ವೀಡಿಯೊ ಕಂಡು ಆಶ್ಚರ್ಯಕ್ಕೊಳಗಾದ ಜನರು ಇಂತಹವರು ಸಮಾಜದಲ್ಲಿ ಇರುತ್ತಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
Pakistan🫡😭
— Ghar Ke Kalesh (@gharkekalesh) September 6, 2024
pic.twitter.com/Hdql8R2ejt
ಇನ್ನು ಈ ವಿಡಿಯೋವನ್ನು ಸೆಪ್ಟೆಂಬರ್ 6ರಂದು ಟ್ವೀಟ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದುವರೆಗೆ ಇದನ್ನು 137.2K ಜನರು ವೀಕ್ಷಣಾ ಮಾಡಿದ್ದಾರೆ. ಇನ್ನು ಈ ವಿಡಿಯೋಗೆ 1,645 ಲೈಕ್ಸ್ ಬಂದಿವೆ. ಅಲ್ಲದೆ ಹಲವರು ಈ ಪರಿಸ್ಥಿತಿಯನ್ನು ಕಂಡು ಪಾಕಿಸ್ತಾನಕ್ಕೆ ಕ್ಯಾಕರಿಸಿ ಉಗಿಯುತ್ತಿದ್ದಾರೆ.
ಒಂದು ಹಣ್ಣನ್ನು ಈ ರೀತಿಯಾಗಿ ಮನೆಯವರೇ ಆದ ಪೋಷಕರು ನಡೆಸಿಕೊಂಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಒಟ್ಟಿನಲ್ಲಿ ಎಷ್ಟೇ ಪೆಟ್ಟು ತಿಂದರೂ ಕೂಡ ತನ್ನ ನೀಚ ಬುದ್ಧಿಯನ್ನು ಪಾಕಿಸ್ತಾನ ಬಿಡುತ್ತಿಲ್ಕ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಇದೊಂದೇ ಅಲ್ಲದೆ, ಇನ್ನೂ ಇಂತಹ ಅನೇಕ ಸಮಾಜಕ್ಕೆ ಮುಳುವಾಗುವಂತಹ ಘಟನೆಗಳನ್ನು ನಡೆದಿರುವ ಉದಾಹರಣೆಗಳು ಇವೆ.












Click it and Unblock the Notifications