USA Military: ದಿಢೀರ್ ಇರಾನ್ ಬಿಟ್ಟು ಓಡುವಂತೆ ತನ್ನ ಪ್ರಜೆಗಳಿಗೆ ಅಮೆರಿಕ ಆದೇಶ, ಯುದ್ಧ ಭೀತಿಯಲ್ಲಿ ಮಧ್ಯಪ್ರಾಚ್ಯ

ಅಮೆರಿಕ ಮತ್ತು ಇರಾನ್ ನಡುವೆ ಎಲ್ಲಾ ಸರಿ ಹೋಗುತ್ತಿದೆ ಎನ್ನುವಾಗಲೇ ಮತ್ತೊಮ್ಮೆ ಬೆಂಕಿ ಕಿಡಿ ಹೊತ್ತಿಕೊಂಡಿದೆ. ಎರಡೂ ದೇಶಗಳು ಈಗ ಪರಮಾಣು ಯುದ್ಧ ಒಂದನ್ನು ಮಾಡಿಸಲು ಸಜ್ಜಾಗಿಯೇ ನಿಂತಂತೆ ಕಾಣುತ್ತಿದ್ದು, ಶಾಂತಿ ಮಾತುಕತೆ ಚರ್ಚೆಯ ನಡುವೆಯೇ ಇದೀಗ ದಿಢೀರ್ ಸ್ಫೋಟಕ ಸುದ್ದಿ ಒಂದು ಅಮೆರಿಕ ಕಡೆಯಿಂದ ಬಂದಿದೆ. ಈಗಾಗಲೇ ಇರಾನ್ ಜಲಗಡಿ ಎಂದರೆ ಸಮುದ್ರದ ಬಳಿಯೇ ಹೋಗಿ ಅಮೆರಿಕದ ದೊಡ್ಡ ದೊಡ್ಡ ಯುದ್ಧ ನೌಕೆಗಳು ಬಿಡಾರ ಹೂಡಿವೆ. ಜೊತೆಗೆ ಬೃಹತ್ ಮತ್ತು ಶಕ್ತಿಶಾಲಿ ಯುದ್ಧ ವಿಮಾನಗಳನ್ನು ಕೂಡ ಅಮೆರಿಕ ಈಗಾಗಲೇ ಇರಾನ್ ಸಮೀಪ ಕಳಿಸಿದೆ. ಇಂತಹ ಸ್ಥಿತಿಯಲ್ಲೇ, ತಕ್ಷಣ ಇರಾನ್ ಬಿಟ್ಟು ಹೊರಡಿ ಎಂದು ತನ್ನ ಪ್ರಜೆಗಳಿಗೆ ಅಮೆರಿಕ ಆದೇಶ ಹೊರಡಿಸಿದೆ.

ಇರಾನ್ ಪರಮಾಣು ಬಾಂಬ್ ಹೊಂದಿದೆಯಾ? ಇರಾನ್ ಬಳಿ ಪರಮಾಣು ಬಾಂಬ್ ಇಲ್ವಾ? ಎಂದು ಸತತವಾಗಿ ಚರ್ಚೆ ನಡೆಯುತ್ತಿದ್ದು, ಅಮೆರಿಕ ಕೂಡ ಇದನ್ನೇ ಅಳೆದು & ತೂಗಿ ಲೆಕ್ಕಾಚಾರ ಹಾಕುತ್ತಾ ಇದೆ. ಅಕಸ್ಮಾತ್ ಇರಾನ್ ಬಳಿ ಈಗಾಗಲೇ ಪರಮಾಣು ಬಾಂಬ್ ಇದ್ದರೆ ಅದು ಯುದ್ಧವನ್ನ ತುಂಬಾ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಆತಂಕ ಆವರಿಸಿದೆ. ಇದೇ ಕಾರಣಕ್ಕೆ ಅಮೆರಿಕ ಕೂಡ ಇರಾನ್ ಮೇಲೆ ದಾಳಿ ಮಾಡದೆ ಅಳೆದು & ತೂಗಿ ಲೆಕ್ಕಾಚಾರ ಹಾಕುತ್ತಿತ್ತು. ಅಲ್ಲದೆ ಶಾಂತಿ ಮಾತುಕತೆಗೆ ಆದೇಶ ಕೂಡ ನೀಡಿತ್ತು. ಇದೇ ಕಾರಣಕ್ಕೆ ಒಮನ್ ನೆಲದಲ್ಲಿ ಶಾಂತಿ ಸಭೆ ಆಯೋಜನೆ ಮಾಡಿರುವ ಸಮಯದಲ್ಲೇ ಅಮೆರಿಕ ನೀಡಿರುವ ಆದೇಶ ಯುದ್ಧದ ಆತಂಕ ಹೆಚ್ಚು ಮಾಡಿದೆ.

USA Military

ಅಮೆರಿಕ ಸೇನೆಯಿಂದ ದಾಳಿ ಗ್ಯಾರಂಟಿ?

ಒಮನ್ ಒಂದು ಕಡೆ ಅಮೆರಿಕ ಹಾಗೂ ಇರಾನ್ ನಡುವೆ ಪರಮಾಣು ಒಪ್ಪಂದ ಮಾಡಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡು ಕಾಯುತ್ತಿದೆ. ಈ ಮೂಲಕ ಮಧ್ಯಪ್ರಾಚ್ಯ ಸೈಲೆಂಟ್ ಆಗಿ ಇರಲಿ, ಶಾಂತಿಯು ನೆಲೆಸಲಿ ಎಂಬುದು ಒಮನ್ ಪ್ಲಾನ್ ಆಗಿದೆ. ಆದರೆ ಇದೇ ಸಮಯದಲ್ಲಿ ಅಮೆರಿಕ ಮಾತ್ರ ಇರಾನ್ ನೆಲದಿಂದ ಮೊದಲು ಹೊರಗೆ ಬರುವಂತೆ ತನ್ನ ಪ್ರಜೆಗಳಿಗೆ ತುರ್ತು ಸಂದೇಶ ರವಾನಿಸಿದೆ. ಈ ಮೂಲಕ ದಿಢೀರ್ ಯುದ್ಧ ನಡೆಯುತ್ತಾ? ಅಮೆರಿಕ ಸೇನಾ ಕಾರ್ಯಾಚರಣೆಗೆ ಇದೀಗ ಸಿದ್ಧವಾಗಿದೆಯಾ? ಎಂಬ ಅನುಮಾನ ಮೂಡಿದೆ. ತಕ್ಷಣ ಇರಾನ್ ತೊರೆಯುವಂತೆ ತಮ್ಮ ದೇಶ ನೀಡಿರುವ ಆದೇಶವನ್ನು ಈಗ ಪಾಲನೆ ಮಾಡಲು ಅಮೆರಿಕದ ಪ್ರಜೆಗಳು ಮುಂದಾಗಿದ್ದಾರೆ.

20 ದಿನಗಳ ಹಿಂದೆಯೂ ಎಚ್ಚರಿಕೆ ನೀಡಿದ್ದರು

ಅಮೆರಿಕ ಅಧಿಕಾರಿಗಳು ಕಳೆದ ತಿಂಗಳು ಅಂದರೆ ಜನವರಿ 12 & 13ಕ್ಕೆ ಕೂಡ ಇದೇ ರೀತಿಯಾಗಿ ಭಾರಿ ದೊಡ್ಡ ಮಟ್ಟದಲ್ಲಿ ಎಚ್ಚರಿಕೆ ಸಂದೇಶ ನೀಡಿದ್ದರು. ಅಲ್ಲದೇ ಕೂಡಲೇ ಅಮೆರಿಕ ಪ್ರಜೆಗಳು ಇರಾನ್ ಬಿಟ್ಟು ಹೊರಗೆ ಬರಲು ಆದೇಶ ನೀಡಿದ್ದರು. ಇದೀಗ ಸುಮಾರು 20 ದಿನಗಳ ನಂತರ ಮತ್ತೊಮ್ಮೆ ಅದೇ ರೀತಿ ವಾರ್ನಿಂಗ್ ಕೊಡಲಾಗಿದೆ. ಇರಾನ್ ರಾಜಧಾನಿ ತೆಹ್ರಾನ್‌ನಲ್ಲಿ ಅಮೆರಿಕ ಯಾವುದೇ ರಾಯಭಾರ ಕಚೇರಿಯನ್ನು ಹೊಂದಿಲ್ಲ, ಈ ಕಾರಣಕ್ಕೆ ತಮ್ಮ ಪ್ರಜೆಗಳಿಗೆ ಅಧಿಕಾರಿಗಳು ಬೇರೆ ಬೇರೆ ಮೂಲಗಳಿಂದ ಅಗತ್ಯ ಮಾಹಿತಿ ಒದಗಿಸುತ್ತಾರೆ. ಇದೀಗ ದಿಢೀರ್ ಇರಾನ್ ತೊರೆಯಲು ಮತ್ತೊಮ್ಮೆ ಎಚ್ಚರಿಕೆ ಸಂದೇಶ ನೀಡಿರುವುದು ಆತಂಕ ಹೆಚ್ಚು ಮಾಡಿದೆ.

ಆರ್ಥಿಕ ಸಂಕಷ್ಟದಲ್ಲಿ ಇರಾನ್ ಒದ್ದಾಟ

ಅಮೆರಿಕ ಈಗಾಗಲೇ ಇರಾನ್‌ಗೆ ಕೊಟ್ಟಿರುವ ಪೆಟ್ಟಿಗೆ ಆರ್ಥಿಕವಾಗಿ ಇರಾನ್ ನಲುಗಿ ಹೋಗಿದ್ದು, ಈ ಮೂಲಕ ದೇಶ ನಡೆಸಲು ಕೂಡ ಕಷ್ಟಪಡುವ ಪರಿಸ್ಥಿತಿ ಇದೆ. ಹಾಗೇ ಮತ್ತೊಂದು ಕಡೆ, ಇರಾನ್‌ನ ಪರಮಾಣು ಕಾರ್ಯಕ್ರಮಗಳನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬುದು ಅಮೆರಿಕದ ಉದ್ದೇಶ. ಈ ಎಲ್ಲಾ ಕಾರಣಗಳ ನಡುವೆ ಇದೀಗ ಮತ್ತೊಂದು ಭಯ ಶುರುವಾಗಿದೆ, ಅದು ಏನೆಂದರೆ ಅಕಸ್ಮಾತ್ ಇರಾನ್ ಮತ್ತು ಅಮೆರಿಕ ಪೂರ್ಣ ಪ್ರಮಾಣದ ಯುದ್ಧಕ್ಕೆ ಮುಂದಾದರೆ ಅದು ಭವಿಷ್ಯದ ದೃಷ್ಟಿಯಿಂದ ದೊಡ್ಡ ಅಪಾಯವೇ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+