ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮಕ್ಕಳ ಫೋನ್

Posted By:
Subscribe to Oneindia Kannada

ವಾಷಿಂಗ್ಟನ್, ಅಕ್ಟೋಬರ್ 26: ಆಪಲ್ ಐಫೋನ್ ಎಂಬ ಹುಚ್ಚನ್ನು ಇಡೀ ಜಗತ್ತಿಗೆ ಅಂಟಿಸಿರುವ ದೇಶದ ಅಧ್ಯಕ್ಷ ಬರಾಕ್ ಒಬಾಮ ಅವರ ಹತ್ತಿರ ಇರೋದು ಮಕ್ಕಳು ಬಳಸುವಂತಹ ಫೋನ್ ಅಂತೆ. ಈ ಬಗ್ಗೆ ಸ್ವತಃ ಒಬಾಮ ಹೇಳಿಕೊಂಡಿದ್ದಾರೆ. ಈಗ ನನ್ನ ಹತ್ತಿರವೂ ಐ ಫೋನಿದೆ. ಆದರೆ ಅದರಿಂದ ಇ ಮೇಲ್ ಕಳಿಸಲು ಮಾತ್ರ ಸಾಧ್ಯ ಎಂದು ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಮಕ್ಕಳು ತಾವು ಫೋನ್ ಬಳಸಿದಂತೆ ನಟನೆ ಮಾಡುತ್ತಾರೆ. ಆದರೆ ಬಳಸುವುದಿಲ್ಲ. ಅದೇ ರೀತಿಯಲ್ಲಿ ನನ್ನ ಫೋನ್ ನಿಂದಲೂ ಕರೆ ಮಾಡುವುದಿಲ್ಲ. ಫೋನ್ ನಲ್ಲಿ ಕ್ಯಾಮೆರಾ ಬಳಸುವುದಕ್ಕೆ, ಹಾಡು ಕೇಳುವುದಕ್ಕೆ ಆಗುವುದಿಲ್ಲ. ಇದರಲ್ಲಿ ಇಂಟರ್ ನೆಟ್ ಇದೆ. ಅದನ್ನು ಬಳಸಿ ಇ ಮೇಲ್ ಮಾತ್ರ ಕಳಿಸುವುದಕ್ಕೆ ಸಾಧ್ಯ ಎಂದು ಅವರು ಹೇಳಿದ್ದಾರೆ.[ಉಗ್ರವಾದ ಪ್ರಪಂಚಕ್ಕಂಟಿದ ಕ್ಯಾನ್ಸರ್: ಒಬಾಮಾ]

Barack Obama

ಎಬಿಸಿ ಚಾನೆಲ್ ನ 'ಜಿಮ್ಮಿ ಕಿಮ್ಮೆಲ್ ಲೈವ್' ಕಾರ್ಯಕ್ರಮದಲ್ಲಿ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಫೋನ್ ವಿಚಾರ ತಿಳಿಸಿದ್ದಾರೆ. ಅಲ್ಲೀಗ ಅಧ್ಯಕ್ಷೀಯ ಚುನಾವಣೆ ಕಾವು ಪಡೆದುಕೊಂಡಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ತಮ್ಮ ಬಗ್ಗೆ ಮಾಡಿದ ಟ್ವೀಟ್ ವೊಂದನ್ನು ಸಹ ಅವರು ಉಲ್ಲೇಖಿಸಿದ್ದಾರೆ.[ಸಚಿನ್ -ವಾರ್ನ್ ಸರಣಿಯಲ್ಲಿ ಬರಾಕ್ ಒಬಾಮಾ ಬ್ಯಾಟಿಂಗ್!]

ಬರಾಕ್ ಒಬಾಮ ಹುದ್ದೆಯಿಂದ ನಿರ್ಗಮಿಸುವಾಗ ಅಮೆರಿಕಾದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಅಧ್ಯಕ್ಷ ಎಂದು ದಾಖಲಾಗುತ್ತಾರೆ ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Iam using IPhone now, but I can send only mails, said by US President Barack Obama in a TV program. He also read tweet of Repblican party contestant Donald Trump.
Please Wait while comments are loading...