ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಕೊನೆಯ ಅಸ್ತ್ರ ಪ್ರಯೋಗಿಸಿದ ಟ್ರಂಪ್, ಸಕ್ಸಸ್ ಗ್ಯಾರಂಟಿ!
ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಘನಘೋರ ಯುದ್ಧಕ್ಕೆ ಹೇಗಾದರೂ ಮಾಡಿ ಇದೀಗ ಕೊನೆಯ ಮೊಳೆ ಹೊಡೆಯಬೇಕು ಎಂಬ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನ ಫಲ ನೀಡುತ್ತಿದೆ. ಅಂದಹಾಗೆ ಕಳೆದ 4 ವರ್ಷಗಳಿಂದ ಬಡಿದಾಡುತ್ತಿರುವ ರಷ್ಯಾ & ಉಕ್ರೇನ್ ಯಾವುದೇ ಕಾರಣಕ್ಕೂ ಈ ಯುದ್ಧ ನಿಲ್ಲಿಸಲು ತಯಾರೇ ಇರಲಿಲ್ಲ. ಆದರೆ ಇಂತಹ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಮೆರಿಕ ಸರ್ಕಾರ ಹೊಸ ಅಸ್ತ್ರ ಒಂದನ್ನು ಪ್ರಯೋಗ ಮಾಡಿತ್ತು, ಇಡೀ ಜಗತ್ತೇ ಪ್ರಯತ್ನ ಮಾಡಿದರೂ ನಿಲ್ಲದ ಯುದ್ಧ ಹೊಸ ಅಸ್ತ್ರ ಪ್ರಯೋಗದ ನಂತರ ಅಂತೂ & ಇಂತೂ ನಿಲ್ಲುವ ಹಂತಕ್ಕೆ ಬಂದಿದೆ!
ಯುರೋಪ್ ದೇಶವಾಗಿರುವ ಉಕ್ರೇನ್ ಈ ಹಿಂದೆ ಸೋವಿಯತ್ ರಷ್ಯಾ ಭಾಗವಾಗಿತ್ತು. ಆದರೆ ಇದೇ ಉಕ್ರೇನ್ ದಿಢೀರ್ ರಷ್ಯಾ ದೇಶದ ಶತ್ರು ಪಡೆ ನ್ಯಾಟೋ ಒಕ್ಕೂಟ ಸೇರಲು ಸಜ್ಜಾಗಿದೆ ಎಂಬ ಬಗ್ಗೆ ಸುದ್ದಿ ಹಬ್ಬಿತ್ತು. ಇದೇ ವಿಚಾರವಾಗಿ ರಷ್ಯಾ & ಉಕ್ರೇನ್ ನಡುವೆ 2022 ಫೆಬ್ರವರಿ ತಿಂಗಳಲ್ಲಿ ಭಾರಿ ದೊಡ್ಡ ಗಲಾಟೆ ನಡೆದು ಯುದ್ಧ ಘೋಷಣೆ ಆಗಿತ್ತು. ಉಕ್ರೇನ್ ಎಂಬ ದೇಶಕ್ಕೆ ತಾನು ರಷ್ಯಾ ಸೇನೆ ವಿರುದ್ಧ ಗೆಲ್ಲುಲು ಅಗಲ್ಲ ಎಂಬ ವಿಚಾರ ಚನ್ನಾಗಿ ಗೊತ್ತಿದ್ದರೂ ಎಲ್ಲಾ ರೀತಿ ಅಸ್ತ್ರವನ್ನು ಬಳಸಿ ಹೋರಾಡುವ ಚಪಲ ಅಂಟಿತ್ತು. ಇದೇ ಕಾರಣಕ್ಕೆ ಈ ಯುದ್ಧ ಇಷ್ಟು ದಿನಗಳ ಘೋರ ವಿನಾಶ ಸೃಷ್ಟಿ ಮಾಡಿತ್ತು.

28 ಅಂಶಗಳ ಕದನ ವಿರಾಮ ಒಪ್ಪಂದ
ಉಕ್ರೇನ್‌ಗೆ ಪದೇ, ಪದೇ ಅಮೆರಿಕ ಸೇರಿದಂತೆ ಮಿತ್ರ ರಾಷ್ಟ್ರಗಳು ಸಲಹೆ ನೀಡುತ್ತಾ ಬಂದಿದ್ದವು. ರಷ್ಯಾ ಜೊತೆಗೆ ಸಂಧಾನ ಮಾಡಿಕೊಂಡು ಶಾಂತಿ ಸ್ಥಾಪನೆ ಮಾಡಿ, ಎಂಬ ಬೇಡಿಕೆಗೂ ಉಕ್ರೇನ್ ಹಿಂದೆ & ಮುಂದೆ ಚಿಂತಿಸಿ ಸಮಯ ವ್ಯರ್ಥ ಮಾಡುತ್ತಾ ಬಂದಿದೆ. ಇಷ್ಟೆಲ್ಲದರ ನಡುವೆ ಖುದ್ದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಕೊನೆಯ ಎಚ್ಚರಿಕೆ ನೀಡಿ, 28 ಅಂಶಗಳ ಕದನ ವಿರಾಮದ ಘೋಷಣೆ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಉಕ್ರೇನ್‌ಗೆ ಆಜ್ಞೆ ಮಾಡಿದ್ದರು. ಅಲ್ಲದೆ ಟ್ರಂಪ್ ಅವರು ಈ ವಿಚಾರದಲ್ಲಿ ತಮ್ಮ ಆಡಳಿತದ ದಕ್ಷ ಅಧಿಕಾರಿಗಳನ್ನು ಮುಂದೆ ಬಿಟ್ಟಿದ್ದರು. ಇದೆಲ್ಲವೂ ಇದೀಗ ಫಲ ನೀಡಿದಂತೆ ಕಾಣುತ್ತಿದ್ದು, ಯುದ್ಧ ಇನ್ನೇನು ಅಂತಿಮ ಹಂತಕ್ಕೆ ಬಂದಿದೆ.












Click it and Unblock the Notifications