US Elections 2024: ಭಾರತಕ್ಕೆ ಡೊನಾಲ್ಡ್ ಟ್ರಂಪ್ ಗೆಲುವಿನಿಂದ ಭರ್ಜರಿ ಲಾಭ?

ಡೊನಾಲ್ಡ್ ಟ್ರಂಪ್... ಡೊನಾಲ್ಡ್ ಟ್ರಂಪ್... ಡೊನಾಲ್ಡ್ ಟ್ರಂಪ್... ಹೀಗೆ ಅಮೆರಿಕದಲ್ಲಿ ಇದೀಗ ಗಲ್ಲಿ ಗಲ್ಲಿಗಳಲ್ಲೂ ಡೊನಾಲ್ಡ್ ಟ್ರಂಪ್ ಅವರ ಹೆಸರೇ ರಣಕಹಳೆ ರೀತಿ ಮೊಳಗುತ್ತಿದೆ. ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅದ್ಭುತ ಗೆಲುವು ಸಾಧಿಸಿದ್ದು, ಕಮಲಾ ಹ್ಯಾರಿಸ್ ಹೀನಾಯ ಸೋಲು ಕಂಡು ನಲುಗಿದ್ದಾರೆ.

ಈ ಸಮಯದಲ್ಲೇ ಹೊಸ ಚರ್ಚೆ ಕೂಡ ಶುರುವಾಗಿದೆ, ಹಾಗಾದ್ರೆ ಡೊನಾಲ್ಡ್ ಟ್ರಂಪ್ ಗೆದ್ದಿದ್ದು ಆಯ್ತು. ಭಾರತಕ್ಕೆ ಇದರಿಂದ ಏನೆಲ್ಲಾ ಲಾಭ ಆಗಲಿದೆ? ಡೊನಾಲ್ಡ್ ಟ್ರಂಪ್ ಗೆಲುವಿನಿಂದ ಭಾರತ ಗಳಿಸುವುದು ಏನು? ಪ್ರಧಾನಿ ಮೋದಿ ಅವರ ಸ್ನೇಹಿತ ಡೊನಾಲ್ಡ್ ಟ್ರಂಪ್ ಇದೀಗ ಏನೆಲ್ಲಾ ಸಹಾಯ ಮಾಡಬಲ್ಲರು? ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು & ಅಮೆರಿಕ ನೆಲಕ್ಕೆ ಹೋಗಬೇಕು ಎಂದುಕೊಂಡ ಭಾರತೀಯರಿಗೆ ಏನೆಲ್ಲಾ ಲಾಭ? ಬನ್ನಿ ತಿಳಿಯೋಣ.

US Elections 2024 What Can India Expect From The Donald Trump Administration

ಟ್ರಂಪ್ ಜೊತೆಗೆ ಪ್ರಧಾನಿ ಮೋದಿ ಮಾತು!

ಡೊನಾಲ್ಡ್ ಟ್ರಂಪ್ ಇದೀಗ ಭರ್ಜರಿ 295 'ಎಲೆಕ್ಟೊರಾಲ್ ಕಾಲೇಜು' ಮತಗಳನ್ನ ಪಡೆದಿದ್ದು, ಹಲವು ರಾಜ್ಯಗಳಲ್ಲಿ ಇನ್ನೂ ಮತ ಎಣಿಕೆ ಬಾಕಿ ಇರುವ ಕಾರಣ ಡೊನಾಲ್ಡ್ ಟ್ರಂಪ್ ಅವರು ಬರೋಬ್ಬರಿ 310ಕ್ಕೂ ಹೆಚ್ಚು 'ಎಲೆಕ್ಟೊರಾಲ್ ಕಾಲೇಜು' ಮತಗಳನ್ನ ಪಡೆದು ಇತಿಹಾಸ ನಿರ್ಮಿಸುವ ಸನಿಹದಲ್ಲಿ ಇದ್ದಾರೆ. ಈ ಸಮಯದಲ್ಲೇ ಭಾರತದ ಪ್ರಧಾನಿ ಮೋದಿ ಅವರು ನೇರವಾಗಿ ಅಮೆರಿಕಗೆ ಕಾಲ್ ಮಾಡಿ, ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೊನಾಲ್ಡ್ ಟ್ರಂಪ್ ಅವರ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಲ್ಲದೆ ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಅವರು ಭಾರತದ ಜೊತೆಗೆ ಸಂಬಂಧ ವೃದ್ಧಿ ಬಗ್ಗೆ ಉತ್ಸಾಹ ತೋರಿಸಿದ್ದಾರಂತೆ. ಈ ಮೂಲಕ ಭಾರತಕ್ಕೆ ಟ್ರಂಪ್ ಆಯ್ಕೆಯಿಂದ ಭಾರಿ ಲಾಭವಾಗುವ ನಿರೀಕ್ಷೆ ಮೂಡಿದೆ.

ಭಾರತೀಯರಿಗೆ ಏನು ಲಾಭ ಸಿಗಲಿದೆ?

ಅಮೆರಿಕ & ಭಾರತದ ನಡುವೆ ಹಲವು ವ್ಯಾಪಾರ & ವಹಿವಾಟು ನಡೆಯುತ್ತಾ ಬಂದಿದೆ. ಶತ ಶತಮಾನ ಕಳೆದರೂ ಅಮೆರಿಕ & ಭಾರತ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತಿದೆ. ಹೀಗಿದ್ದಾಗ ಅಮೆರಿಕದ ನೆಲಕ್ಕೆ ಹೋಗಿ ನೆಲೆಸುತ್ತಿರುವ ಭಾರತ ಮೂಲದ ಜನರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ, ಭಾರತ & ಅಮೆರಿಕ ನಡುವಿನ ಸಂಬಂಧ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಅವಧಿಯಲ್ಲಿ ಇನ್ನಷ್ಟು ಗಟ್ಟಿಯಾಗುವ ನಿರೀಕ್ಷೆಗಳು ಇವೆ.

ಈ ನಿಟ್ಟಿನಲ್ಲಿ ಚರ್ಚೆ ಕೂಡ ಸಾಗಿವೆ, ಆದರೆ ಇನ್ನೊಂದು ಕಡೆ ಟ್ರಂಪ್ ಅವರು ಭಾರತಕ್ಕೆ ವಿರುದ್ಧವಾದ ನಿರ್ಧಾರಗಳನ್ನೇ ಕೈಗೊಳ್ಳುತ್ತಾರೆ ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ. ಇದು ಚರ್ಚೆಗೆ ಕೂಡ ವೇದಿಕೆ ಒದಗಿಸಿದ್ದರೂ, ಭಾರತ ಮಾತ್ರ ಟ್ರಂಪ್ ಜೊತೆಗಿನ ಮಾತುಕತೆ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲೂ ಈ ವಿಚಾರ ಗಮನ ಸೆಳೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+