ಯುದ್ಧ ಬೇಡ, ಶಾಂತಿ ಬೇಕು! ವ್ಯಾಪಾರ ಮಾತುಕತೆಗೆ ಕೂತ ಅಮೆರಿಕ-ಚೀನಾ!

ಕೊರೊನಾ ವಕ್ಕರಿಸಿದ್ದೇ ವಕ್ಕರಿಸಿದ್ದು ಜಗತ್ತಿನಲ್ಲಿ ಎಲ್ಲವೂ ಅದಲು-ಬದಲಾಗಿ ಹೋಗಿದೆ. ಅದರಲ್ಲೂ ಟಾಪ್ ರಾಷ್ಟ್ರಗಳ ಆರ್ಥಿಕತೆ ಅಲುಗಾಡಿ ಹೋಗಿದೆ. ಮೊಟ್ಟಮೊದಲು ಪೆಟ್ಟು ತಿಂದಿದ್ದೇ ದೊಡ್ಡಣ್ಣ ಎನಿಸಿಕೊಳ್ಳುವ ಈ ಅಮೆರಿಕ.

Recommended Video

      China ಆರ್ಥಿಕತೆಯಲ್ಲಿ ಮೊದಲನೇ ಸ್ಥಾನ!! | Oneindia Kannada

      ಕೊರೊನಾ ವಕ್ಕರಿಸಿದ ಮೇಲೆ ಅಮೆರಿಕದ ನಂಬರ್ 1 ಪಟ್ಟ ಅಲುಗಾಡುತ್ತಿದ್ದು, ಚೀನಾ ಆ ಸ್ಥಾನಕ್ಕೆ ಹೋಗುತ್ತಿದೆ ಎಂಬ ಮಾತು ಆರ್ಥಿಕ ತಜ್ಞರದ್ದು. ಆದರೆ ಕಿಲಾಡಿ ಅಮೆರಿಕ ತನ್ನ ಸ್ಥಾನ ಬಿಟ್ಟುಕೊಡಲು ಸಿದ್ಧವೇ ಇಲ್ಲ. ಹೀಗಾಗಿ ಚೀನಾ ಜೊತೆ ಯುದ್ಧಕ್ಕಿಂತಲೂ ಸ್ನೇಹವೇ ಮುಖ್ಯವೆಂಬ ನಿರ್ಧಾರ ಕೈಗೊಂಡಂತೆ ಕಾಣುತ್ತಿದೆ.

      ಟ್ರಂಪ್ ಮಾಡಿದ ಒಂದೊಂದೇ ಎಡವಟ್ಟು ಸರಿ ಮಾಡುತ್ತಿರುವ ಬೈಡನ್ ಆಡಳಿತ, ಚೀನಾ ಜೊತೆಗೆ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿದೆ. ಅಮೆರಿಕ ಹಾಗೂ ಚೀನಾ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ.

      ಈ ವರ್ಚ್ಯುವಲ್ ಮೀಟಿಂಗ್‌ನಲ್ಲಿ ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಒಪ್ಪಂದವೂ ಸೇರಿದಂತೆ ಟ್ರಂಪ್ ಆಡಳಿತದಲ್ಲಿ ಕೈಗೊಂಡ ವಿವಾದಾತ್ಮ ನಿರ್ಧಾರಗಳ ಪುನರ್ ಪರಿಶೀಲನೆ ನಡೆಯಲಿದೆ. ಅಭಿವೃದ್ಧಿ ದಾವಂತದಲ್ಲಿ ಎಡವಟ್ಟು ಮಾಡಿಕೊಳ್ಳದೇ ದ್ವಿಪಕ್ಷೀಯ ಸಂಬಂಧ ಸುಧಾರಿಸಲು ಎರಡೂ ರಾಷ್ಟ್ರಗಳು ದಿಟ್ಟ ಹೆಜ್ಜೆ ಇಟ್ಟಿವೆ.

      ಚೀನಾ ನಂಬರ್ 1 ಆಗುತ್ತಾ..?

      ಚೀನಾ ನಂಬರ್ 1 ಆಗುತ್ತಾ..?

      ಚೀನಾ ಬೆಳೆದಿದೆ, ಸಾಕಷ್ಟು ಅಭಿವೃದ್ಧಿ ಹೊಂದಿದೆ ಹಾಗೂ ಅಭಿವೃದ್ಧಿ ಹೊಂದುತ್ತಲೇ ಇದೆ. ಎಷ್ಟರಮಟ್ಟಿಗೆ ಎಂದರೆ ಇದೀಗ ನಂಬರ್ 1 ರಾಷ್ಟ್ರವಾಗಿರುವ ಅಮೆರಿಕ ಇನ್ನೇನು ಕೆಲವೇ ವರ್ಷಗಳಲ್ಲಿ ನಂಬರ್ 2 ಆದರೂ ಅಚ್ಚರಿ ಬೇಕಿಲ್ಲ. ಅಷ್ಟರಮಟ್ಟಿಗೆ ಚೀನಾ ಅಭಿವೃದ್ಧಿ ಹೊಂದುತ್ತಿದೆ. 2021ನೇ ಸಾಲಿನ ಮೊದಲ ತ್ರೈಮಾಸಿಕ ವರದಿ ಬಂದಿದ್ದು, ಚೀನಾ ಜಿಡಿಪಿ ಶೇ. 18.3ರಷ್ಟು ಜಿಗಿತ ಕಂಡಿದೆ. ಈ ಮೂಲಕ 1992ರ ಬಳಿಕ ಚೀನಾದ ಆರ್ಥಿಕತೆ ಮತ್ತೊಂದು ದಾಖಲೆ ಬರೆದಿದೆ. ಕೇವಲ 29 ವರ್ಷಗಳ ಅವಧಿಯಲ್ಲಿ ಚೀನಾ ಜಗತ್ತಿನ ನಂಬರ್ 1 ಅಮೆರಿಕಾವನ್ನೂ ಮೀರಿ ಬೆಳೆಯುತ್ತಿದೆ.

      ಅಲ್ಲಾಡಿ ಹೋಗಿದೆ ಅಮೆರಿಕ

      ಅಲ್ಲಾಡಿ ಹೋಗಿದೆ ಅಮೆರಿಕ

      ಕೊರೊನಾ ಕಾಟಕ್ಕೆ ಸಿಲುಕಿರುವ ಅಮೆರಿಕ ಅಲ್ಲಾಡಿ ಹೋಗಿದೆ. ಈವರೆಗೂ ಅಮೆರಿಕ ಕಂಡು, ಕೇಳರಿಯದ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಈ ಹೊತ್ತಲ್ಲೇ ಅಮೆರಿಕದ ಶತ್ರು ಚೀನಾ ಅಭಿವೃದ್ಧಿ ಹೊಂದುತ್ತಿರುವುದು ಸಹಜವಾಗಿ ಅಮೆರಿಕ ನಾಯಕರ ಕಣ್ಣು ಕೆಂಪಾಗಿಸಿದೆ. ಕೊರೊನಾ ವಕ್ಕರಿಸಿದ ಆರಂಭದಲ್ಲಿ ಚೀನಾ ಆರ್ಥಿಕ ಸ್ಥಿತಿ ತೀರಾ ಕುಸಿತ ಕಂಡಿತ್ತು. ಆದರೆ ಕೊರೊನಾ ಹೆಡೆಮುರಿ ಕಟ್ಟುವಲ್ಲಿ ಅಲ್ಲಿನ ಸರ್ಕಾರ ಯಶಸ್ವಿಯಾಗಿತ್ತು. ಬಳಿಕ ಚೀನಾ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. 2021ರ ಮೊದಲ ತ್ರೈಮಾಸಿಕದಲ್ಲೇ ಚೀನಾ ಜಿಡಿಪಿ ಶುಭಾರಂಭ ಮಾಡಿದೆ.

      ಚೀನಾದಲ್ಲಿ ಬಡವರೇ ಇಲ್ಲ..!

      ಚೀನಾದಲ್ಲಿ ಬಡವರೇ ಇಲ್ಲ..!

      ಒಂದು ಕಾಲದಲ್ಲಿ ತೀವ್ರ ಬಡತನ ತುಂಬಿದ ರಾಷ್ಟ್ರವಾಗಿದ್ದ ಚೀನಾದಲ್ಲಿ ಈಗ ಬಡವರೇ ಇಲ್ಲ. ಪವರ್ ಫುಲ್ ರಾಷ್ಟ್ರಗಳೇ ಬಡತನದ ಸಂಕೋಲೆಯಲ್ಲಿ ನರಳುತ್ತಿರುವ ಸಂದರ್ಭದಲ್ಲಿ ಚೀನಾ ಮಾತ್ರ ಜಗತ್ತು ಮೆಚ್ಚುವ ಕೆಲಸ ಮಾಡಿದೆ. ಚೀನಾ ತನ್ನ ದೇಶದಲ್ಲಿದ್ದ 77 ಕೋಟಿ ಬಡವರನ್ನು ವಿಷ ವರ್ತುಲದಿಂದ ಹೊರತಂದಿದೆ. ಫೆಬ್ರವರಿ ತಿಂಗಳಲ್ಲಿ ಈ ವಿಚಾರ ಹಂಚಿಕೊಂಡಿದ್ದ ಚೀನಾ, ಸತತ 40 ವರ್ಷಗಳ ಪರಿಶ್ರಮದ ನಂತರ ಗುರಿ ತಲುಪುವಲ್ಲಿ ಯಶಸ್ವಿಯಾಗಿತ್ತು. ಇದರ ಜೊತೆಗೆ ಶ್ರೀಮಂತರ ಪಟ್ಟಿಯಲ್ಲೂ ಚೀನಾ ನಂಬರ್ 1 ಸ್ಥಾನ ಅಲಂಕರಿಸಿದೆ.

      ಬಡವರಿಗೆ ಐಷಾರಾಮಿ ಫ್ಲ್ಯಾಟ್‌ಗಳು..!

      ಬಡವರಿಗೆ ಐಷಾರಾಮಿ ಫ್ಲ್ಯಾಟ್‌ಗಳು..!

      ಚೀನಾದಲ್ಲಿ ಬಡವರಿಗೆ ವಸತಿ ಒದಗಿಸುವ ಯೋಜನೆ ಜಾರಿಗೆ ಬಂದಾಗ, ಜಗತ್ತಿನ ಇತರ ರಾಷ್ಟ್ರಗಳಂತೆ ಇಲ್ಲೂ ಮಾಮೂಲಿ ಸೂರು ಸಿಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಆ ಊಹೆ ಸುಳ್ಳಾಗಿತ್ತು. ಈಗಲೂ ಬಹುತೇಕ ಕೊಳೆಗೇರಿ ಜನರಿಗೆ ಐಷಾರಾಮಿ ಫ್ಲ್ಯಾಟ್‌ಗಳನ್ನು ಒದಗಿಸಿದೆ ಚೀನಿ ಸರ್ಕಾರ. ಇದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡಿ, ಹತ್ತಾರು ವರ್ಷಗಳ ಪರಿಶ್ರಮವನ್ನೂ ಹಾಕಿದೆ. ಇದರ ಪರಿಣಾಮ ಬಡ ಜನರಿಗೂ ಅತ್ಯುತ್ತಮ ಸೇವೆ ಸಿಗುವಂತಾಗಿದೆ. ಈ ಸಾಧನೆ ಕಂಡಿದ್ದ ಬಹುತೇಕ ಶ್ರೀಮಂತ ರಾಷ್ಟ್ರಗಳು ಶಾಕ್‌ ಆಗಿದ್ದುಂಟು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+