ಕಡಿಮೆ ಇಂಗಾಲ ಹೊರಸೂಸುವ ಸಾರಿಗೆ ವ್ಯವಸ್ಥೆ ಅಗತ್ಯ: ಡೇವಿಡ್ ಹಡ್ಸನ್
ಲಂಡನ್, ಜೂನ್ 21: ಎರಡನೇ ದಿನದ 5ನೇ ಯುಕೆ-ಇಂಡಿಯಾ ಲೀಡರ್ ಶಿಪ್ ಕಾನ್ಕ್ಲೇವ್ ಇಲ್ಲಿನ ಬಕಿಂಗ್ ಹ್ಯಾಮ್ ಶೈರ್ ನಲ್ಲಿ ನಡೆಯುತ್ತಿದೆ.
ಇಂದು ನಡೆದ 'ಬಿಲ್ಡಿಂಗ್ ಮಾಡರ್ನ್ ಎಕಾನಾಮೀಸ್ - ಸ್ಮಾರ್ಟ್ ಸಿಟೀಸ್ ಆ್ಯಂಡ್ ಸ್ಮಾರ್ಟ್ ಪೀಪಲ್' ಎಂಬ ವಿಷಯದ ಮೇಲಿನ ಪ್ಯಾನಲ್ ಚರ್ಚೆಯಲ್ಲಿ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
ಇದರಲ್ಲಿ ಮಾತನಾಡಿದ ಓಲಾ ಕಂಪನಿಯ 'ಸ್ಟ್ರಾಟೆಜಿಕ್ ಇನಿಶಿಯೇಟಿವ್' ಮುಖ್ಯಸ್ಥ ಆನಂದ್ ಶಾ, "ನಾವು ವಾಹನಗಳ ಜೊತೆಗಿನ ನಮ್ಮ ಸಂಬಂಧವನ್ನು ಪುನರ್ ವಿಮರ್ಶೆ ಮಾಡಬೇಕಾಗಿದೆ," ಎಂದರು.

"ವೈಯಕ್ತಿಕವಾಗಿ ವಾಹನಗಳ ಒಡೆತನ ಕನಿಷ್ಠ ಇರುವ ದೇಶ ಭಾರತ. ಭಾರತದಲ್ಲಿ, ಕ್ಯಾಬ್ ಹಂಚಿಕೊಳ್ಳುವ ಪರಿಪಾಠ ಮೊದಲಿನಿಂದ ಅಸ್ತಿತ್ವದಲ್ಲಿದೆ. ಈ ಕ್ಷೇತ್ರದಲ್ಲಿ ಸಹಭಾಗಿಯಾಗಲು ಬ್ರಿಟನ್ ಗೆ ದೊಡ್ಡ ಅವಕಾಶ," ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಟೆಕ್ ಮಹೀಂದ್ರದ ಉಪೇಂದ್ರ ಧರ್ಮಾಧಿಕಾರಿ, "ರೈತರಿಂದ ಚಮದವರೆಗಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತ ಮತ್ತು ಬ್ರಿಟನ್ ಹೇಗೆ ಉಜ್ವಲ ಉದಾಹರಣೆಗಳಾಗಿವೆ ಎಂಬುದನ್ನು ನಾವು ಅನ್ವೇಷಿಸಬೇಕು," ಎಂದರು.
ಇನ್ಫೋಸಿಸ್ ನ ಮೊಹಮ್ಮದ್ ಅನಿಸ್ ಮಾತನಾಡಿ, "ವಿದ್ಯುತ್ ದಿನದಿಂದ ದಿನಕ್ಕೆ ಅಗ್ಗವಾಗುತ್ತಿದೆ. ಇದರ ಜೊತೆಗೆ ಶೇಖರಣಾ ದರವು ಕಡಿಮೆಯಾಗುತ್ತಿದೆ. ಮೇಲ್ವಿಚಾರಣೆಯಿಲ್ಲದ ಯಂತ್ರ ಕಲಿಕೆಯ ಮೂಲಕ ಆನ್ಲೈನ್ ನಲ್ಲಿ ಮಾಹಿತಿಯ ತಾರತಮ್ಯವನ್ನು ತೆಗೆದು ಹಾಕಬಹುದು," ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಮಾತನಾಡಿದ ಟಾಟಾ ಮೋಟರ್ಸ್ ನ ಡೇವಿಡ್ ಹಡ್ಸನ್, ಭಾರತ ಮತ್ತು ಬ್ರಿಟನ್ ಗೆ ಕಡಿಮೆ ಇಂಗಾಲು ಹೊರಸೂಸುವ ಸಾರಿಗೆ ವ್ಯವಸ್ಥೆ ಅಗತ್ಯವಾಗಿದೆ ಎಂದು ವಿಶ್ಲೇಷಿಸಿದ್ದಾರೆ.












Click it and Unblock the Notifications