ಹಿಂಗೆ ಬಿಟ್ಟರೆ ರಷ್ಯಾ ಎಲ್ಲಾ ಹಾಳು ಮಾಡುತ್ತೆ ಎಂದ ಉಕ್ರೇನ್ ಅಧ್ಯಕ್ಷ

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಅದರಲ್ಲೂ ಉಕ್ರೇನ್ ವಿರುದ್ಧ ರಷ್ಯಾ ರಣಭೀಕರ ದಾಳಿ ನಡೆಸುತ್ತಿದೆ. ಹೀಗೆ ತನ್ನ ಶತ್ರು ರಷ್ಯಾ ವಿರುದ್ಧ ಉಕ್ರೇನ್ ಕೂಡ ಪ್ರಬಲ ಪ್ರತಿದಾಳಿ ನಡೆಸುತ್ತಿದೆ. ಇಷ್ಟಾದರೂ ಇಬ್ಬರ ಆತ್ಮ ತೃಪ್ತವಾಗಿಲ್ಲ, ಇಬ್ಬರ ಬಡಿದಾಟದಲ್ಲಿ ಲಕ್ಷಾಂತರ ಜನ ಮೃತಪಟ್ಟಿರುವಾಗ ಉಕ್ರೇನ್ ಅಧ್ಯಕ್ಷ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಅಷ್ಟಕ್ಕೂ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಉನ್ನತ ಮಟ್ಟದ ವಾರ್ಷಿಕ ಸಭೆಯನ್ನ ಉದ್ದೇಶಿಸಿ ಉಕ್ರೇನ್ ಅಧ್ಯಕ್ಷ ಮಾತನಾಡಿದ್ದು, ಈ ವೇಳೆ ರಷ್ಯಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಗೇ ಒಂದು ರಾಷ್ಟ್ರದ ವಿರುದ್ಧ ದ್ವೇಷವನ್ನೇ ಅಸ್ತ್ರವಗಿಸಿಕೊಂಡಾಗ, ಅದು ಎಂದಿಗೂ ಕೊನೆಯಾಗಲ್ಲ ಎಂದಿದ್ದಾರೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ. ಇದೇ ವೇಳೆ ರಷ್ಯಾ ಎಲ್ಲವನ್ನೂ ಹಾಳುಮಾಡಿದೆ ಎಂದು ಝೆಲೆನ್‌ಸ್ಕಿ ಆರೋಪಿಸಿದ್ದಾರೆ.

ukraine-president-warned

ಪುಟಿನ್ ವಿರುದ್ಧ ಝೆಲೆನ್‌ಸ್ಕಿ ಕೆಂಡ

ಹಾಗೇ ತಮ್ಮ ಮಾತು ಮುಂದುವರಿಸಿದ ವೊಲೊಡಿಮಿರ್‌ ಝೆಲೆನ್‌ಸ್ಕಿ, ಉಕ್ರೇನ್ ವಿರುದ್ಧದ‌ ಯುದ್ಧದಲ್ಲಿ ರಷ್ಯಾ ಎಲ್ಲವನ್ನ 'ಸಶಸ್ತ್ರೀಕರಣ'ಗೊಳಿಸಿದೆ. ಆಹಾರ, ಇಂಧನದಿಂದ ಹಿಡಿದು ಅಪಹರಣ ಮಾಡಿದ್ದ ಮಕ್ಕಳವರೆಗೆ ಎಲ್ಲವನ್ನೂ 'ಸಶಸ್ತ್ರೀಕರಣ'ಗೊಳಿಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಉಕ್ರೇನ್‌ಗೆ ಆದ ಸ್ಥಿತಿ ಮುಂದೆ ಬೇರೆ ದೇಶಗಳಿಗೂ ಎದುರಾಗಲಿದೆ. ಹೀಗಾಗಿ ತಕ್ಷಣ ಎಚ್ಚರಿಕೆ ವಹಿಸಬೇಕಿದೆ ಎಂದಿದ್ದಾರೆ ಝೆಲೆನ್‌ಸ್ಕಿ. ಈ ಮೂಲಕ ರಷ್ಯಾ ವಿರುದ್ಧ ಝೆಲೆನ್‌ಸ್ಕಿ ವಿಶ್ವಸಂಸ್ಥೆಯಲ್ಲೂ ಗುಡುಗಿದ್ದಾರೆ.

15 ನಿಮಿಷ ಮಾತನಾಡಿದ ಉಕ್ರೇನ್ ಅಧ್ಯಕ್ಷ

ರಷ್ಯಾ ವಿರುದ್ಧ ಅಮೆರಿಕ ಮತ್ತು ನ್ಯಾಟೋ ಒಂದಾಗಿದ್ದು, ಉಕ್ರೇನ್ ಪರ ನಿಂತಿವೆ. ಹೀಗೆ ಉಕ್ರೇನ್‌ಗೆ ಬಲ ಸಿಕ್ಕಿದೆ. ಹೀಗಾಗಿ ರಷ್ಯಾ ವಿರುದ್ಧ ಉಕ್ರೇನ್ ಸಮಬಲದ ಪ್ರತಿದಾಳಿ ನಡೆಸಿ ಶಾಕ್ ಕೊಡುತ್ತಿದೆ. ಇದೀಗ ವಿಶ್ವಸಂಸ್ಥೆಯಲ್ಲೂ ಉಕ್ರೇನ್ ಅಧ್ಯಕ್ಷ ರಷ್ಯಾಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದು, ಪುಟಿನ್ ವಿರುದ್ಧ ಗುಡುಗಿದ್ದಾರೆ. ಅಲ್ಲದೆ ಪ್ರಸ್ತುತ ಯುದ್ಧದ ಗುರಿಯು ನಮ್ಮ ಭೂಮಿ, ನಮ್ಮ ಜನ, ನಮ್ಮ ಜೀವನ, ನಮ್ಮ ಸಂಪನ್ಮೂಲವನ್ನ ನಮ್ಮ ವಿರುದ್ಧದ ಅಸ್ತ್ರವಾಗಿ ಪರಿವರ್ತಿಸುದೇ ಆಗಿದೆ. ಆದರೆ ಇದು ಅಂತರರಾಷ್ಟ್ರೀಯ ನಿಯಮಕ್ಕೆ ವಿರುದ್ಧ ಎಂದಿದ್ದಾರೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ.

ukraine-president-warned

ರಷ್ಯಾ ವಿರುದ್ಧ ಉಕ್ರೇನ್ ರಣತಂತ್ರ?

ವಿಶ್ವಸಂಸ್ಥೆ ಭಾಷಣದಲ್ಲಿ ಒಟ್ಟು 15 ನಿಮಿಷ ಮಾತನಾಡಿದ್ದಾರೆ ಝೆಲೆನ್‌ಸ್ಕಿ. ಇತ್ತೀಚೆಗಷ್ಟೆ ರಷ್ಯಾ ಸೇನೆ ಉಕ್ರೇನ್ ಬಂದರು ಪ್ರದೇಶದ ಮೇಲೆ ಭೀಕರ ದಾಳಿ ನಡೆಸಿತ್ತು. ಆಗ ಉಕ್ರೇನ್ ಜನರ ಆಹಾರಕ್ಕೆ ಅಂತ ಇಟ್ಟಿದ್ದ ಧಾನ್ಯಗಳು ಕೂಡ ನಾಶವಾಗಿದೆ ಎಂಬ ಆರೋಪ ರಷ್ಯಾ ವಿರುದ್ಧ ಕೇಳಿಬಂದಿತ್ತು. ಇದೆಲ್ಲಾ ಸಿಟ್ಟನ್ನು ಇದೀಗ ಉಕ್ರೇನ್ ಅಧ್ಯಕ್ಷರು ವಿಶ್ವಸಂಸ್ಥೆಯ ತಮ್ಮ ಭಾಷಣದಲ್ಲಿ ತೀರಿಸಿಕೊಂಡಿದ್ದಾರೆ. ಅಲ್ದೆ ರಷ್ಯಾ ಸೇನೆ ಮತ್ತು ಪುಟಿನ್‌ಗೆ ಪರೋಕ್ಷ ಯುದ್ಧ ಸಂದೇಶ ಕೊಟ್ಟಿದ್ದಾರೆ.

ಯುದ್ಧ ನಿಲ್ಲಿಸಲು ಆಗುತ್ತಿಲ್ಲ ಏಕೆ?

ಹೀಗೆ ಒಂದು ಕಡೆ ಉಕ್ರೇನ್ ಅಧ್ಯಕ್ಷರು ವಿಶ್ವಸಂಸ್ಥೆಯಲ್ಲಿ ಗುಡುಗಿದ್ದರೆ, ಮತ್ತೊಂದು ಕಡೆ ನ್ಯಾಟೋ & ಅಮೆರಿಕ ಉಕ್ರೇನ್‌ಗೆ ಯುದ್ಧದ ನೆರವು ಹೆಚ್ಚಿಸುವ ಚಿಂತನೆಯಲ್ಲಿವೆ. ಹೀಗಾಗಿ ರಷ್ಯಾಗೆ ಉಕ್ರೇನ್ ತಿರುಗೇಟು ನೀಡಲು ಸಜ್ಜಾಗಿದೆ. ಒಬ್ಬರ ಮೇಲೊಬ್ಬರು ಬಾಂಬ್ ಮತ್ತು ಕ್ಷಿಪಣಿ ಎಸೆಯುತ್ತಾ ಲಕ್ಷಾಂತರ ಜೀವಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಹಾಗೂ ಆಕ್ರೋಶವೂ ಮೊಳಗಿದೆ. ಆದರೆ ಏನೇ ಪ್ರಯತ್ನ ಮಾಡಿದರೂ ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ನಿಲ್ಲುತ್ತಿಲ್ಲ.

ಒಟ್ನಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಸಾರಿದ ಯುದ್ಧ ನೋಡ ನೋಡುತ್ತಲೇ ವಿಶ್ವಯುದ್ಧದ ರೂಪ ಪಡೆಯುತ್ತಿದೆ. ಹೀಗಾಗಿಯೇ ಯುದ್ಧ ನಿಲ್ಲಿಸಬೇಕು ಎಂದು ಜಗತ್ತಿನ ಹಲವು ದೇಶ & ಒಕ್ಕೂಟಗಳು ಒತ್ತಾಯಿಸಿವೆ. ಆದರೆ ಯುದ್ಧ ನಿಲ್ಲಿಸಲು ನಡೆಸಿದ ಪ್ರಯತ್ನಗಳು ಸಕ್ಸಸ್ ಕಂಡಿಲ್ಲ. ಹೀಗಾಗಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದ್ದು, ಮುಂದೆ ಏನಾಗುತ್ತೆ ಅಂತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+