Ukraine War: ಉಕ್ರೇನ್ ಕಿತಾಪತಿ ಮತ್ತಷ್ಟು ಜೋರು, ರಷ್ಯಾ ವಿರುದ್ಧ ಭೀಕರ ದಾಳಿ

ಉಕ್ರೇನ್ ಸೇನೆ ದಿಢೀರ್ ಅಂತಾ ರಷ್ಯಾ ಮೇಲೆ ಮತ್ತೊಮ್ಮೆ ಭೀಕರ ದಾಳಿ ನಡೆಸಿದೆ. ಈ ಬಗ್ಗೆ ಸ್ವತಃ ಉಕ್ರೇನ್ ಮಾಹಿತಿ ನೀಡಿದ್ದು ರಷ್ಯಾದ ವೋಲ್ಗಾ ಪ್ರದೇಶದ ಸರಟೋವ್ ಕಚ್ಚಾ ತೈಲ ಶುದ್ಧೀಕರ ಘಟಕದ ಮೇಲೆ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ. ಕೆಲವು ದಿನಗಳ ಹಿಂದಷ್ಟೇ ತಮ್ಮ ಮೇಲೆ ರಷ್ಯಾ ದಾಳಿಯನ್ನ ಮಾಡಿದೆ ಅಂತಾ ಉಕ್ರೇನ್ ಆರೋಪ ಮಾಡಿತ್ತು. ಇದೀಗ ಉಕ್ರೇನ್ ಸೇಡಿಗೆ ಸೇಡು ಅಂತಾ ಅಟ್ಯಾಕ್ ಮಾಡಿದೆ. ರಷ್ಯಾದ ಅತಿ ದೊಡ್ಡ ತೈಲ ಶುದ್ಧೀಕರಣ ಘಟಕ ಇದಾಗಿದ್ದು, ದಾಳಿ ನಡೆದಿರುವ ಕಾರಣ ಆತಂಕ ಇನ್ನಷ್ಟು ಹೆಚ್ಚಾಗಿದೆ.

ಅಮೆರಿಕದ ಬುಡಕ್ಕೆ ಬತ್ತಿ ಇಟ್ಟಿರುವ ರಷ್ಯಾ & ಉಕ್ರೇನ್ ಯುದ್ಧ ದಿನದಿಂದ ದಿನಕ್ಕೆ ಮತ್ತಷ್ಟು ಹಿಂಸಾತ್ಮಕ ರೂಪ ಪಡೆಯುತ್ತಿದೆ. ಇದು ಅಮೆರಿಕ ಸೇರಿ ನ್ಯಾಟೋ ಒಕ್ಕೂಟದ ದೇಶಗಳ ಎದೆ ನಡುಗುವಂತೆ ಮಾಡಿದೆ ಎಂಬುದರಲ್ಲಿ ಅನುಮಾನ ಇಲ್ಲ. ಯಾಕಂದ್ರೆ ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಸಾಕಷ್ಟು ಸಮಸ್ಯೆಗಳು ಶುರುವಾಗಿವೆ. ತಣ್ಣಗಿದ್ದ ಮಧ್ಯಪ್ರಾಚ್ಯದ ನೆಲದಲ್ಲೂ ಯುದ್ಧ ಶುರುವಾಗಿದೆ. ಮತ್ತೊಂದು ಕಡೆ ಉಕ್ರೇನ್ ಇದೀಗ ದಿಢೀರ್ ಅಂತಾ ರಷ್ಯಾ ಮೇಲೆ ದಾಳಿ ಮಾಡಿರುವುದು ಚಿಂತೆ ಇನ್ನಷ್ಟು ಹೆಚ್ಚು ಮಾಡಿದೆ.

Ukraine Claims Successful Strike on Russia s Saratov Oil Refinery

ರಷ್ಯಾ ಕಡೆಯಿಂದ ಮರುದಾಳಿ ಭಯ

ಉಕ್ರೇನ್ ಸೇನೆ ಎಷ್ಟೇ ಪರದಾಡಿದರೂ ರಷ್ಯಾ ಮಿಲಿಟರಿಯನ್ನ ಸೋಲಿಸಲು ಸಾಧ್ಯ ಇಲ್ಲ ಎನ್ನಬಹುದು. ಯಾಕಂದ್ರೆ ಎಲ್ಲಾ ವಿಭಾಗದಲ್ಲೂ ರಷ್ಯಾ ಸೇನೆ ಗಟ್ಟಿಯಾಗಿದ್ದು, ಇದೀಗ ತನ್ನ ತೈಲ ಘಟಕಗಳ ಮೇಲೆ ದಾಳಿ ಮಾಡಿರುವ ಉಕ್ರೇನ್‌ಗೆ ರಷ್ಯಾ ಪಾಠ ಕಲಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗ ಉಕ್ರೇನ್ ಈ ವಿಚಾರದಲ್ಲಿ ಮತ್ತಷ್ಟು ಅಲರ್ಟ್ ಆಗಿದೆ. ಇಬ್ಬರ ಈ ಜಗಳದಲ್ಲಿ ಯುರೋಪ್ ಸಂಪೂರ್ಣವಾಗಿ ನಲುಗಿ ಹೋಗುತ್ತಿದೆ.

4 ವರ್ಷ ತುಂಬಲಿದೆ ಯುದ್ಧಕ್ಕೆ!

ರಷ್ಯಾ & ಉಕ್ರೇನ್ ನಡುವೆ ಫೈಟಿಂಗ್ ಶುರುವಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ 4 ವರ್ಷ ತುಂಬುವ ದಿನಗಳು ಹತ್ತಿರದಲ್ಲೇ ಇವೆ. ಇಬ್ಬರ ನಡುವೆ ಬೆಂಕಿ ಹೊತ್ತಿಕೊಂಡ ನಂತರ, ಒಂದೆರಡು ದಿನಗಳಲ್ಲಿ ಈ ಯುದ್ಧ ನಿಲ್ಲಲಿದೆ ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದರೆ ಯುದ್ಧ ನೋಡ ನೋಡುತ್ತಲೇ ಭಾರಿ ಉತ್ಸಾಹದಿಂದ 4ನೇ ವರ್ಷಕ್ಕೆ ಎಂಟ್ರಿ ಕೊಟ್ಟಿತ್ತು. ಇದೀಗ 4 ವರ್ಷ ತುಂಬುವ ಹಂತಕ್ಕೆ ಬಂದಿದ್ದರೂ ಯುದ್ಧ ನಿಲ್ಲುವ ನಿರೀಕ್ಷೆ ಮಾತ್ರ ಮೂಡುತ್ತಿಲ್ಲ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಟೆನ್ಷನ್ ಈಗ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+