Ukraine War: ರಷ್ಯಾ ದಾಳಿ ನಿಲ್ಲಿಸುತ್ತೆ, ಉಕ್ರೇನ್ ವಿರುದ್ಧ ವಾರ್ ನಿಲ್ಲುತ್ತೆ... ಹೆಂಗೆ ಗೊತ್ತಾ?
ರಷ್ಯಾ ಮತ್ತು ಉಕ್ರೇನ್ ವಾರ್ ಭೀಕರವಾದ ನಂತರ ಪದೇ ಪದೇ ಜಾಗತಿಕ ಮಟ್ಟದಲ್ಲಿ ಮತ್ತೊಂದು ವರ್ಲ್ಡ್ ವಾರ್ ನಡೆಯುತ್ತೆ ಅನ್ನೋ ಆತಂಕ ಎದುರಾಗಿತ್ತು. ಇದಕ್ಕೆ ತಕ್ಕಂತೆ ಹಲವು ಯುದ್ಧಗಳು ಕೂಡ ಶುರುವಾಗಿ ಭಾರಿ ಭಯ ಕೂಡ ಎದುರಾಗಿತ್ತು. ಇಷ್ಟೆಲ್ಲದರ ನಡುವೆ ಇದೀಗ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ, ಅಕಸ್ಮಾತ್ ಇದೇ ವಾತಾವರಣ ಇದ್ದರೆ ಎಲ್ಲವೂ ಸರ್ವನಾಶ ಆಗುತ್ತೆ ಅನ್ನೋ ಮಾತುಗಳು ಕೂಡ ಎಲ್ಲೆಡೆ ಹರಡಿತ್ತು. ಆದರೆ ಇದೇ ಸಮಯದಲ್ಲಿ ಭಾರಿ ಭರ್ಜರಿ ಸುದ್ದಿಯೊಂದು ಸಿಗುತ್ತಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ನಂತರ ಪ್ರಪಂಚದಲ್ಲಿ ಯಾರ ಊಹೆಗೂ ಸಿಗದ ಘಟನೆಗಳು & ಅವಾಂತರಗಳು ನಡೆದು ಹೋಗಿವೆ. ಪ್ರಮುಖವಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಬೆಂಕಿಯೇ ಹೊತ್ತಿಕೊಂಡಿದೆ ಎನ್ನಬಹುದು. ಯಾಕಂದ್ರೆ ರಷ್ಯಾ & ಉಕ್ರೇನ್ ವಾರ್ ಶುರುವಾದ ನಂತರ ಸರಿಯಾಗಿ ಒಂದೂವರೆ ವರ್ಷಗಳ ಬಳಿಕ ಮಧ್ಯಪ್ರಾಚ್ಯದಲ್ಲಿ ಗಾಜಾ & ಇಸ್ರೇಲ್ ನಡುವೆ ಕೂಡ ವಾರ್ ಶುರುವಾಗಿತ್ತು. ಹೀಗೆ ನೋಡ ನೋಡ್ತಾ ಭಾರಿ ದೊಡ್ಡ ಅವಾಂತರ ಎದುರಾಗಿದೆ. ಹೀಗಿದ್ದಾಗಲೇ ಭಾರಿ ಸಿಹಿ ಸುದ್ದಿಯೊಂದು ಈಗ ಸಿಗುತ್ತಿದೆ.

ರಷ್ಯಾ ಮತ್ತು ಉಕ್ರೇನ್ ವಾರ್ ನಿಲ್ಲುತ್ತಾ?
ಅಂದಹಾಗೆ ಈಗ ಇಡೀ ಜಗತ್ತಿನ ಎದುರು ಇರುವ ಏಕೈಕ ಬಹುದೊಡ್ಡ ಪ್ರಶ್ನೆ ಅಂದ್ರೆ, ರಷ್ಯಾ ಮತ್ತು ಉಕ್ರೇನ್ ವಾರ್ ನಿಲ್ಲುತ್ತಾ? ರಷ್ಯಾ ಮತ್ತು ಉಕ್ರೇನ್ ವಾರ್ ನಿಂತರೂ ಯಾವಾಗ ಮುಗಿಯುತ್ತೆ? ಅಂತೆಲ್ಲಾ ಮನುಷ್ಯರು ಚಿಂತೆ ಮಾಡುವಂತೆ ಆಗಿದೆ. ಇಂತಹ ಸಮಯದಲ್ಲೇ ರಷ್ಯಾದಲ್ಲಿ ಹೊಸ ತಲ್ಲಣ ಎದ್ದಿರುವ ಬಗ್ಗೆ ಸುದ್ದಿ ಹಬ್ಬಿದ್ದು, ಶೀಘ್ರದಲ್ಲೇ ರಷ್ಯಾ ಮತ್ತು ಉಕ್ರೇನ್ ನಡುವಿನ ರಣಭೀಕರ ಯುದ್ಧಕ್ಕೆ ಬ್ರೇಕ್ ಬೀಳುವ ಬಗ್ಗೆಯೂ ಮುನ್ಸೂಚನೆ ಸಿಕ್ಕಿದೆ.
ಈ ಕಾರಣಕ್ಕೆ ಯುದ್ಧ ನಿಲ್ಲುತ್ತೆ!
ರಷ್ಯಾದಲ್ಲಿ ಈಗ ಹೊಸ ತಲ್ಲಣ ಶುರುವಾಗಿದ್ದು, ಭಾರಿ ದೊಡ್ಡ ಆರ್ಥಿಕ ಮುಗ್ಗಟ್ಟು ಎದುರಾಗಿದೆ ಎಂಬ ಮಾಹಿತಿ ಓಡಾಡುತ್ತಿದೆ. ಇದೇ ಕಾರಣಕ್ಕೆ ರಷ್ಯಾ ಸರ್ಕಾರ ತನ್ನ ಮಿಲಿಟರಿ ಬಜೆಟ್ ಕೂಡ ಕಟ್ ಮಾಡುತ್ತೆ ಅಂತಾ ಕೂಡ ಹೇಳಲಾಗುತ್ತಿದೆ. ಇದು ಮಾತ್ರವಲ್ಲದೆ ರಷ್ಯಾ ನೆಲದಲ್ಲಿ ಮತ್ತಷ್ಟು ಚಟುವಟಿಕೆ ನಡೆಯುತ್ತಾ ಇದ್ದು, ಮುಂದಿನ ದಿನಗಳಲ್ಲಿ ಇದು ರಷ್ಯಾ ದೇಶಕ್ಕೆ ದೊಡ್ಡ ಚಾಲೆಂಜ್ ತಂದೊಡ್ಡುವ ಸಾಧ್ಯತೆಯು ಕೂಡ ಇದೆ. ಹೀಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಬದಲಾವಣೆ ಕಡೆಗೆ ಮುಖ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಇದೆಲ್ಲವನ್ನೂ ನೋಡುತ್ತಿದ್ದರೆ ಶೀಘ್ರದಲ್ಲೇ ರಷ್ಯಾ & ಉಕ್ರೇನ್ ವಾರ್ ನಿಲ್ಲುವ ನಿರೀಕ್ಷೆ ಇದೆ.












Click it and Unblock the Notifications