ಯುದ್ಧದ ಬೆಂಕಿಗೆ ನೀರು ಹಾಕಲು ಜಗತ್ತಿನಾದ್ಯಂತ ಪ್ರಯತ್ನ ಆರಂಭ!

ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಎಲ್ಲಾ ರೀತಿ ಪ್ರಯತ್ನ ಈಗ ಆರಂಭ ಆಗಿದ್ದು, ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿರುವ ಯುದ್ಧಕ್ಕೆ ಅಂತ್ಯ ಕಾಣಿಸಲು ಜಗತ್ತೇ ಒಂದಾಗುತ್ತಿದೆ. 2022 ರಲ್ಲಿ ಆರಂಭವಾದ ರಷ್ಯಾ & ಉಕ್ರೇನ್ ನಡುವಿನ ಈ ಯುದ್ಧವು ಈಗಾಗಲೇ ಬರೋಬ್ಬರಿ 2 ವರ್ಷ ಮೀರಿ 3ನೇ ವರ್ಷಕ್ಕೆ ಕಾಲಿಟ್ಟಿದೆ. ಇದೇ ಸಮಯದಲ್ಲಿ ಈ ಯುದ್ಧಕ್ಕೆ ಹೇಗಾದರೂ ಬ್ರೇಕ್ ಹಾಕಬೇಕು ಎಂಬ ಪ್ರಯತ್ನಗಳು ಆರಂಭವಾಗಿವೆ. ಹಾಗಾದರೆ ಯುದ್ಧ ನಿಲ್ಲಿಸುವಲ್ಲಿ ಭಾರತದ ಪಾತ್ರ ಏನು? ಮುಂದೆ ಓದಿ.

ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯಲಿದೆ ಎಂದು, ಕನಸಿನಲ್ಲೂ ಯಾರೂ ಊಹೆ ಮಾಡಿಕೊಂಡಿರಲಿಲ್ಲ. ಆದರೆ ಯಾವಾಗ ಯುದ್ಧ ಶುರುವಾಗಿತ್ತೋ, ಆಗಲೇ ಯುದ್ಧ ಕೆಲವೇ ದಿನಗಳಲ್ಲಿ ಮುಗಿದು ಹೋಗಲಿದೆ ಎಂಬ ಭರವಸೆ ಕೂಡ ಇತ್ತು. ಆದರೂ ಎರಡು ವರ್ಷಗಳಿಂದ ಅಂದ್ರೆ 2022 ರಲ್ಲಿ ಆರಂಭವಾದ ರಷ್ಯಾ & ಉಕ್ರೇನ್ ಯುದ್ಧ ಇನ್ನೂ ನಿಂತಿಲ್ಲ. ಹೀಗೆ, ಭಯದ ವಾತಾವರಣ ನಿರ್ಮಾಣವಾಗಿದ್ದು, ಯಾವ ಕ್ಷಣದಲ್ಲಿ ಪರಮಾಣು ಬಾಂಬ್ ಬಳಕೆ ಆಗುತ್ತೋ? ಎಂಬ ಆತಂಕವು ಕಾಡುತ್ತಿದೆ. ಹೀಗಿದ್ದಾಗ ಈ ಭೀಕರ ಯುದ್ಧಕ್ಕೆ ಅಂತ್ಯ ಹಾಡಲು ಇಡೀ ಜಗತ್ತೇ ಒಂದಾಗುತ್ತಿದೆ.

Ukraine And Russia May Get Peace In Few Days

ಕೆಲವೇ ದಿನಗಳಲ್ಲಿ ಯುದ್ಧ ಬಂದ್?

ಭಾರತವೂ ಸೇರಿ ಆಫ್ರಿಕಾ ದೇಶಗಳು & ಯುರೋಪ್ ದೇಶಗಳು ಈಗಾಗಲೇ ಭಾರಿ ಪ್ರಯತ್ನ ಶುರು ಮಾಡಿವೆ. ಯಾಕಂದ್ರೆ ರಷ್ಯಾ & ಉಕ್ರೇನ್ ಯುದ್ಧ ಪರಿಣಾಮ ಇಡೀ ಜಗತ್ತಿನ ನಡುಗಿ ಹೋಗಿದೆ. ಅಲ್ಲದೆ ಇಬ್ಬರೂ ಭೀಕರವಾದ ದಾಳಿಗಳನ್ನ ಮಾಡುತ್ತಿರುವ ಕಾರಣಕ್ಕೆ ಸಾವು & ನೋವು ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಯುದ್ಧ ನಿಲ್ಲಿಸಿ, ಶಾಂತಿಯನ್ನ ಕಾಪಾಡಿ ಎಂಬ ಕೂಗು ಕೇಳಿಬಂದಿದೆ.

ಈ ಎಲ್ಲಾ ಪ್ರಯತ್ನಗಳ ಮಧ್ಯೆ ವಿಶ್ವಸಂಸ್ಥೆ ಕೂಡ ಇದೇ ವಿಚಾರದಲ್ಲಿ ಮಹತ್ವದ ಹೆಜ್ಜೆ ಇಡಲು ಮುಂದಾಗುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಪ್ರಯತ್ನಗಳನ್ನೆಲ್ಲಾ ನೋಡಿದ್ರೆ ರಷ್ಯಾ & ಉಕ್ರೇನ್ ಯುದ್ಧ ಇನ್ನು ಕೆಲವೆ ದಿನಗಳಲ್ಲಿ ಮುಗಿದು ಹೋಗುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಮತ್ತೊಂದು ಕಡೆ ಭಾರತ ಕೂಡ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಪ್ರಯತ್ನ ಆರಂಭ ಮಾಡಿದೆ.

ಕೈಮೀರಿ ಹೋಗುತ್ತಿದೆ ಪರಿಸ್ಥಿತಿ

ಒಟ್ನಲ್ಲಿ ಈ ಯುದ್ಧಕ್ಕೆ ಒಂದು ಅಂತ್ಯ ಹಾಡಲೇಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಸ್ಥಿತಿ ಇನ್ನಷ್ಟು ಕಠಿಣ ರೂಪ ಪಡೆಯಬಹುದು. ಯಾಕಂದ್ರೆ ಎರಡೂ ಕಡೆ ಅತ್ಯಂತ ಉಗ್ರವಾಗಿರುವ ಅಸ್ತ್ರ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಭಯದ ವಾತಾವರಣ ಕೂಡ ನಿರ್ಮಾಣವಾಗಿದ್ದು, ಎರಡೂ ಕಡೆ ಲಕ್ಷಾಂತರ ಜನ ಜೀವ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಮೊದಲು, ಈ ಕುರಿತು ಕ್ರಮ ಕೈಗೊಳ್ಳುವುದು ಅಗತ್ಯ ಎಂಬ ಮಾತು ಇದೀಗ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+