ವಿಡಿಯೋ: ದುಬೈನಲ್ಲಿ ಎಮಿರೈಟ್ಸ್ ವಿಮಾನಕ್ಕೆ ಬೆಂಕಿ

Posted By:
Subscribe to Oneindia Kannada

ದುಬೈ, ಆಗಸ್ಟ್ 03: ತಿರುವನಂತಪುರಂನಿಂದ ದುಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಮಿರೈಟ್ಸ್ ವಿಮಾನದಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದೆ. ಈ ಸುದ್ದಿಯ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಟ್ವೀಟ್ಸ್, ಎಚ್ಚರಿಕೆ ಸಂದೇಶ, ವಿಡಿಯೋಗಳು ಹರಿದಾಡುತ್ತಿವೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಕಾಲಮಾನ 12.45 PM (11.15 AM IST) ಕ್ಕೆ ಲ್ಯಾಂಡ್ ಆದ ತಕ್ಷಣ ಈ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ. [ದುಬೈನಲ್ಲಿ ವಿಮಾನ ದುರಂತ, ಎಲ್ಲ ಪ್ರಯಾಣಿಕರು ಪಾರು]

ದುಬೈವಿಮಾಣ ನಿಲ್ದಾಣಕ್ಕೆ ಬಂದಿಳಿದ EK-521 ವಿಮಾನದ ಬಲಭಾಗದ ರಕ್ಕೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ವಿಮಾನದಲ್ಲಿದ್ದ 275 ಮಂದಿ ಪ್ರಯಾಣಿಕರು ಹಾಗೂ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಈ ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎಂದು ಎಮಿರೈಟ್ಸ್ ಸಂಸ್ಥೆ ಪ್ರಕಟಿಸಿದೆ.

ಟರ್ಮಿನಲ್ 3ನಲ್ಲಿ ಆದ ಈ ಘಟನೆಯಿಂದಾಗಿ ದುಬೈನಿಂದ ಹೊರಡಬೇಕಿದ್ದ ವಿಮಾಗಳು ತಡವಾಗಿ ಹೊರಟಿವೆ. ಬೋಯಿಂಗ್ 777-300 ಈ ವಿಮಾನ 2003ರ ಮಾಡೆಲ್ ಆಗಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಟ್ವೀಟ್ಸ್,

ಸಾಮಾಜಿಕ ಜಾಲ ತಾಣಗಳಲ್ಲಿ ಟ್ವೀಟ್ಸ್,

ತಿರುವನಂತಪುರಂನಿಂದ ದುಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಮಿರೈಟ್ಸ್ ವಿಮಾನದಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದೆ. ಈ ಸುದ್ದಿಯ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಟ್ವೀಟ್ಸ್, ಎಚ್ಚರಿಕೆ ಸಂದೇಶ, ವಿಡಿಯೋಗಳು ಹರಿದಾಡುತ್ತಿವೆ.

ವಿಮಾನದ ಬಲಭಾಗದಿಂದ ಹಠಾತ್ತನೆ ಕಾಣಿಸಿಕೊಂಡ ಬೆಂಕಿ

ವಿಡಿಯೋದಲ್ಲಿ ನೋಡಿ ವಿಮಾನದ ಬಲಭಾಗದಿಂದ ಹಠಾತ್ತನೆ ಕಾಣಿಸಿಕೊಂಡ ಬೆಂಕಿ

ಶಶಿ ತರೂರ್ ಅವರಿಂದ ಟ್ವೀಟ್

ಕಾಂಗ್ರೆಸ್ ನಾಯಕ, ಕೇರಳ ಮೂಲದ ಶಶಿ ತರೂರ್ ಅವರಿಂದ ಘಟನೆ ಬಗ್ಗೆ ಸತತ ಟ್ವೀಟ್ಸ್

ಎಪಿ ಸೇರಿದಂತೆ ಎಲ್ಲಾ ಸುದ್ದಿ ಸಂಸ್ಥೆಗಳಿಂದ ಮಾಹಿತಿ

ಎಪಿ ಸೇರಿದಂತೆ ಎಲ್ಲಾ ಸುದ್ದಿ ಸಂಸ್ಥೆಗಳಿಂದ ಬ್ರೇಕಿಂಗ್ ನ್ಯೂಸ್

ದುಬೈನಲ್ಲಿ ಎಮಿರೈಟ್ಸ್ ವಿಮಾನಕ್ಕೆ ಬೆಂಕಿ

ದುಬೈ ವಿಮಾನಗಳನ್ನು Maktoum ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಶಾರ್ಜಾ ವಿಮಾನ ನಿಲ್ದಾಣಕ್ಕೆ ಕಳಿಸಲಾಗುತ್ತಿದೆ.

ಮತ್ತೊಂದು ಕೋನದಿಂದ ವಿಡಿಯೋ

ಮತ್ತೊಂದು ಕೋನದಿಂದ ತೆಗೆದ ವಿಡಿಯೋ: ದುಬೈನಲ್ಲಿ ಎಮಿರೈಟ್ಸ್ ವಿಮಾನಕ್ಕೆ ಬೆಂಕಿ

ವಿಮಾನಯಾನ ವಿಳಂಬ

ವಿಮಾನಯಾನ ವಿಳಂಬ 275 ಪ್ರಯಾಣಿಕರು ಸುರಕ್ಷಿತರಾಗಿ ಬದಲಿ ಮಾರ್ಗ ಅನುಸರಿಸುತ್ತಿದ್ದಾರೆ

EK-521 ವಿಮಾನದ ಪ್ರಯಾಣಿಕರ ವಿವರ

EK-521 ವಿಮಾನದ ಪ್ರಯಾಣಿಕರ ವಿವರ ಬಿಡುಗಡೆ ಮಾಡಿದ ಎಮಿರೈಟ್ಸ್ ವಿಮಾನಯಾನ ಸಂಸ್ಥೆ.

ಗಾಬರಿಯಿಂದ ಓಡಿ ಬರುತ್ತಿರುವ ಪ್ರಯಾಣಿಕರು

ದುಬೈ ವಿಮಾನ ನಿಲ್ದಾಣದಿಂದ ಗಾಬರಿಗೊಂಡು ಓಡಿ ಬರುತ್ತಿರುವ ಪ್ರಯಾಣಿಕರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tweets and Videos about Emirates flight crash-land. An Emirates flight which was going from Thiruvananthapuram to Dubai crash-landed at the Dubai International Airport around 12.45 pm local time (11.15 am IST). All 275 people onboard the flight were safe.
Please Wait while comments are loading...