Ukraine War: ಪುಟಿನ್ ನಿಮ್ಮನ್ನು ನಾಶ ಮಾಡೋದು ಗ್ಯಾರಂಟಿ ಅಂತಾ ಎಚ್ಚರಿಸಿದ ಟ್ರಂಪ್!

ಡೊನಾಲ್ಡ್ ಟ್ರಂಪ್ ಈಗ ಉಕ್ರೇನ್ ಯುದ್ಧದ ಬಗ್ಗೆ ತಲೆಕೆಡಿಸಿಕೊಂಡು ಕೂತಿದ್ದಾರೆ. ಆ ಕಡೆ ರಷ್ಯಾ ತಮ್ಮ ಮಾತು ಕೇಳುತ್ತಿಲ್ಲ ಅನ್ನೋ ಕೋಪ, ಇನ್ನೊಂದು ಕಡೆ ಹೆಚ್ಚುತ್ತಿರುವ ಯುದ್ಧದ ವೆಚ್ಚದ ಪರಿಣಾಮ ಅಮೆರಿಕ ನರಳಿ ಹೋಗುತ್ತಿದೆ. ಹೀಗಾಗಿ ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕಿದೆ ಎಂಬ ಒದ್ದಾಟದಲ್ಲಿ ಟ್ರಂಪ್ ಇದ್ದಾರೆ. ಹೀಗಿದ್ದರೂ ಉಕ್ರೇನ್ ಯುದ್ಧ ನಿಲ್ಲಿಸಲು ತಯಾರಿಲ್ಲ, ಇಂತಹ ಸಮಯದಲ್ಲೇ ಪುಟಿನ್ ನಿಮ್ಮನ್ನು ನಾಶ ಮಾಡೋದು ಗ್ಯಾರಂಟಿ ಅಂತಾ ಎಚ್ಚರಿಸಿದ್ದಾರೆ ಟ್ರಂಪ್!

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ & ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಇತ್ತೀಚಿಗೆ ಭಾರಿ ದೊಡ್ಡ ತಿಕ್ಕಾಟ ಶುರುವಾಗಿದೆ ಎನ್ನುವಾಗ ದಿಢೀರ್ ಪುಟಿನ್ ಒಂದು ಹೇಳಿಕೆ ನೀಡಿದ್ದರು. ಉಕ್ರೇನ್ ಯುದ್ಧ ವಿಚಾರದಲ್ಲಿ ಪುಟಿನ್ ವಿರುದ್ಧ ಕೋಪಗೊಂಡಿದ್ದ ಡೊನಾಲ್ಡ್ ಟ್ರಂಪ್, ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಆದರೆ ದಿಢೀರ್ ಎಲ್ಲಾ ಉಲ್ಟಾ ಆಗಿ ಹೋಗಿದ್ದು, ಟ್ರಂಪ್ ಕೋಪ ಉಕ್ರೇನ್ ಮೇಲೆ ಮುಗಿಬಿದ್ದಿದೆ. ನೀವು ಆದಷ್ಟು ಬೇಗ ಈ ಯುದ್ಧ ನಿಲ್ಲಿಸಿ, ಇಲ್ಲವಾದರೆ ಪುಟಿನ್ ನಿಮ್ಮನ್ನು ನಾಶ ಮಾಡೋದು ಗ್ಯಾರಂಟಿ ಅನ್ನೋ ವಾರ್ನಿಂಗ್ ಕೊಟ್ಟಿದ್ದಾರೆ.

Trump-Zelenskyy Meeting Tensions and Implications for Diplomacy

ರಷ್ಯಾ ಬೆನ್ನಿಗೆ ನಿಂತ ಅಮೆರಿಕ?

ಡೊನಾಲ್ಡ್ ಟ್ರಂಪ್, ಉಕ್ರೇನ್ ಯುದ್ಧ ವಿಚಾರ ಪ್ರಸ್ತಾಪ ಮಾಡಿ ಸಭೆ ನಡೆಸಲು ನಾವು ಸದಾ ಸಿದ್ಧ ಎಂಬ ಮಾತನ್ನ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಹೇಳಿದ್ದರು. ಈ ಮೂಲಕ ರಷ್ಯಾ ಅಧ್ಯಕ್ಷರಿಗೆ ಟ್ರಂಪ್ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಇಂತಹ ಸಮಯದಲ್ಲೇ ಟ್ರಂಪ್ ಅವರು ಇದೀಗ ಉಕ್ರೇನ್‌ಗೆ ಬುದ್ಧಿ ಹೇಳಿದ್ದು, ನೀವು ಸೈಲೆಂಟ್ ಆಗಿ ಅಂತಾ ಹೇಳಿರುವುದು ಮಹತ್ವದ ಪಡೆದುಕೊಂಡಿದೆ.

ಉಕ್ರೇನ್ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ, ಸದ್ಯಕ್ಕೆ ಯುದ್ಧ ನಿಂತರೆ ಸಾಕಪ್ಪಾ... ಸಾಕು... ಅಂತಿದ್ದಾರೆ ಅಲ್ಲಿನ ಜನರು. ಆದರೆ ಉಕ್ರೇನ್ ಅಧ್ಯಕ್ಷ ಮಾತ್ರ ಯುದ್ಧ ನಿಲ್ಲಿಸುವ ವಿಚಾರದಲ್ಲಿ ಎಡವಟ್ಟು, ಎಡವಟ್ಟು ಆಲೋಚನೆ ಮಾಡುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಉಕ್ರೇನ್ ಇದೇ ರೀತಿಯಾಗಿ ನಿಲುವು ಹೊಂದಿದ್ದರೆ ಇನ್ನೇನು ಮತ್ತಷ್ಟು ಕಠಿಣ ಪರಿಸ್ಥಿತಿ ಗ್ಯಾರಂಟಿ ಎನ್ನಲಾಗುತ್ತಿದೆ. ಇದೆಲ್ಲವನ್ನೂ ಮೀರಿ ಸ್ವತಃ ರಷ್ಯಾ ಈಗ ಸಂಧಾನ ಮಾತುಕತೆಗೆ ಸಿದ್ಧವಾಗಿರುವುದು ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಯುದ್ಧ ನಿಂತರೆ ಸಾಕು ಅಂತಾ ಇಡೀ ಜಗತ್ತು ಈಗ ಹೇಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+