Donald Trump: ಹಮಾಸ್ ನಾಯಕರಿಗೆ 3-4 ದಿನಗಳ ಡೆಡ್‌ಲೈನ್ ನೀಡಿದ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಮತ್ತೊಮ್ಮೆ ಇಸ್ರೇಲ್ & ಗಾಜಾ ಯುದ್ಧದಲ್ಲಿ ನೇರವಾಗಿ ಪ್ರವೇಶ ಮಾಡಿದ್ದಾರೆ. ಕಳೆದ 2 ವರ್ಷಗಳಿಂದ ನಿರಂತರವಾಗಿ ಬಡಿದಾಡುತ್ತಿರುವ ಹಮಾಸ್ & ಇಸ್ರೇಲ್ ನಡುವೆ ಶಾಂತಿ ಒಪ್ಪಂದ ಮಾಡಿಸಲು ಪದೇ ಪದೇ ಅಮೆರಿಕ ಪ್ರಯತ್ನ ಮಾಡಿದೆ. ಹೀಗೆ ಅಮೆರಿಕ ಮಾಡಿದ ಪ್ರಯತ್ನ ಎಲ್ಲವೂ ಹಾಳಾಗಿ ಹೋಗಿದ್ದು, ಯಾವುದೂ ಫಲ ನೀಡಿಲ್ಲ. ಹೀಗಾಗಿ ಜಗತ್ತಿನ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕ ರೊಚ್ಚಿಗೆದ್ದು, ಹಮಾಸ್ ನಾಯಕರಿಗೆ ಇದೇ ವಿಚಾರವಾಗಿ ಖಡಕ್ ಎಚ್ಚರಿಕೆ ನೀಡಿದೆ.

ಯುದ್ಧ ಮತ್ತಷ್ಟು ಹೆಚ್ಚಾಗುತ್ತಿದೆ, ಈ ಹಿಂಸಾಚಾರ ಬೆಂಕಿಯಲ್ಲಿ ಈಗಾಗಲೇ 66,000 ಸಾವಿರಕ್ಕೂ ಹೆಚ್ಚು ಜನ ಜೀವ ಬಿಟ್ಟಿದ್ದಾರೆ. ನೋಡ ನೋಡುತ್ತಲೇ ಲೆಕ್ಕವಿಲ್ಲದಷ್ಟು ಮಕ್ಕಳು ಊಟ & ನೀರು ಇಲ್ಲದೆ ಜೀವ ಬಿಟ್ಟಿದ್ದಾರೆ. ಇಂತಹ ಭೀಕರ ದೃಶ್ಯಗಳು ಗಾಜಾ ಪಟ್ಟಿಯಲ್ಲಿ ಪ್ರತಿನಿತ್ಯ ಕಂಡುಬರುತ್ತಿದ್ದು, ಜಾಗತಿಕ ಮಟ್ಟದಲ್ಲೂ ಚರ್ಚೆ ನಡೆಯುತ್ತಿದೆ. ಆದರೆ ಹಮಾಸ್ ನಾಯಕರು ಮಾತುಕತೆಗೆ ಬಂದು ಯುದ್ಧವನ್ನ ನಿಲ್ಲಿಸುತ್ತಿಲ್ಲ ಎಂಬ ಆರೋಪವನ್ನು ಪದೇ ಪದೇ ಇಸ್ರೇಲ್ ಮಾಡುತ್ತಿದೆ. ಪರಿಸ್ಥಿತಿ ಕಠಿಣವಾಗಿದ್ದಾಗ ದಿಢೀರ್ ಮತ್ತೊಮ್ಮೆ ಅಮೆರಿಕ ಎಂಟ್ರಿ ಕೊಟ್ಟಿದ್ದು, ಡೊನಾಲ್ಡ್ ಟ್ರಂಪ್ ಅವರು ಈ ಬಗ್ಗೆ ಮಹತ್ವದ ಆದೇಶ ನೀಡಿದ್ದಾರೆ.

Trump Issues 3-4 Day Deadline for Hamas on Gaza Peace Plan

ಹಮಾಸ್ ಪಡೆಗೆ ಖಡಕ್ ಎಚ್ಚರಿಕೆ ಸಂದೇಶ

ಇಸ್ರೇಲ್ ಪರ ಬಲವಾಗಿ ನಿಂತಿರುವ ಜಗತ್ತಿನ ದೊಡ್ಡಣ್ಣ ಅಮೆರಿಕ ಮತ್ತೊಮ್ಮೆ ಯುದ್ಧದಲ್ಲಿ ಸ್ಪಷ್ಟವಾದ ನಿಲುವು ತಿಳಿಸಿದೆ. ಇತ್ತೀಚೆಗೆ ಇರಾನ್ & ಇಸ್ರೇಲ್ ಮಧ್ಯೆ ಕೂಡ ಕಿರಿಕ್ ಆರಂಭ ಆಗಿದ್ದ ಸಮಯದಲ್ಲೇ, ಅಮೆರಿಕ ಅಧ್ಯಕ್ಷ ಟ್ರಂಪ್ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜೊತೆಗೆ ಮಾತನಾಡಿ ಮಹತ್ವದ ಭರವಸೆ ನೀಡಿದ್ದರು. ಆ ನಂತರ, ಇರಾನ್ ಯುದ್ಧ ನಿಂತು ಹೋಗಿತ್ತು.

ಇದೀಗ ಇಸ್ರೇಲ್ & ಗಾಜಾ ನಡುವೆ ಯುದ್ಧ ನಿಲ್ಲಿಸಲು ಟ್ರಂಪ್ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಮಾಸ್ ಪಡೆಗೆ ಖಡಕ್ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಹೀಗಾಗಿ ಆದಷ್ಟು ಬೇಗ ಯುದ್ಧ ನಿಲ್ಲುತ್ತಾ? ಎಂಬ ಪ್ರಶ್ನೆ ಮೂಡಿದೆ. ಇಷ್ಟೆಲ್ಲದರ ನಡುವೆ ಕೂಡ ಪದೇ ಪದೇ ದೊಡ್ಡ ಮಟ್ಟದ ದಾಳಿಗಳು ನಡೆಯುತ್ತಿರುವ ಕಾರಣಕ್ಕೆ ಗಾಜಾ ಪ್ರದೇಶದ ನಿರಾಶ್ರಿತರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಇದೆಲ್ಲಾ ಏನೇ ಇದ್ದರೂ ಯುದ್ಧ ನಿಲ್ಲಬೇಕು ಎಂಬ ಆಗ್ರಹ ಕೂಡ ಮಾಡುತ್ತಿದ್ದಾರೆ ಹೋರಾಟಗಾರರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+