Donald Trump: ಅಮೆರಿಕ ಧಗಧಗ, ವಲಸಿಗರ ಕಿಚ್ಚಿಗೆ ನಲುಗಿದ ಟ್ರಂಪ್ ಆಡಳಿತ?

ಜಗತ್ತಿನ ದೊಡ್ಡಣ್ಣ... ಶಕ್ತಿಶಾಲಿ ರಾಷ್ಟ್ರ... ಅಭಿವೃದ್ಧಿ ಹೊಂದಿದ ದೇಶ... ಹೀಗೆ ಎಲ್ಲಾ ರೀತಿಯ ಬಿರುದು ತನ್ನಲ್ಲೇ ಇಟ್ಟುಕೊಂಡಿರುವ ಅಮೆರಿಕದ ಈಗಿನ ಪಾಡು ಯಾರಿಗೂ ಬೇಡ ಬಿಡಿ. ಯಾಕಂದ್ರೆ ಆಂತರಿಕ ತಿಕ್ಕಾಟ & ಹಿಂಸಾಚಾರ ಬೇಗೆಯಲ್ಲಿ ಬೆಂದು ಹೋಗಿರುವ ಜಗತ್ತಿನ ದೊಡ್ಡಣ್ಣ ಅಮೆರಿಕ ಇದೀಗ ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ. ಇದು ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಬುಡಕ್ಕೆ ಕಿಡಿ ಹೊತ್ತಿಸಿದೆ.

ಅಂದಹಾಗೆ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಏನೇನೋ ರೂಲ್ಸ್ ಜಾರಿಗೆ ತಂದು ಮನಸ್ಸಿಗೆ ಬಂದಂತೆ ಆಟ ಆಡುತ್ತಿದ್ದಾರೆ ಅನ್ನೋ ಆರೋಪ ಇದೆ. ಅದರಲ್ಲೂ ವಲಸಿಗರ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಕೈಗೊಂಡ ನಿರ್ಧಾರ ಇದೀಗ ಇಡೀ ಅಮೆರಿಕ ನಡುಗಿ ಹೋಗುವಂತೆ ಮಾಡುತ್ತಿದೆ. ಲಾಸ್‌ ಏಂಜಲೀಸ್‌ ಮೂಲೆ ಮೂಲೆಯಲ್ಲೂ ಪ್ರತಿಭಟನೆ & ಹೋರಾಟಗಳು ತೀವ್ರಗೊಂಡು ಕಂಡ ಕಂಡ ಜಾಗದಲ್ಲಿ ಬೆಂಕಿ ಇಡುತ್ತಿದ್ದಾರೆ ಪ್ರತಿಭಟನಾಕಾರರು. ವಲಸಿಗರನ್ನ ತಕ್ಷಣ ಹೊರಗೆ ಹಾಕುವ ಡೊನಾಲ್ಡ್ ಟ್ರಂಪ್ ಸರ್ಕಾರದ ನಿರ್ಧಾರಕ್ಕೆ ಇದೀಗ ಕಿಚ್ಚು ಹೊತ್ತಿಕೊಂಡಿದೆ.

Trump Deploys 2000 National Guard and Marines Amid Protest

2,000 ನ್ಯಾಷನಲ್ ಗಾರ್ಡ್ ನಿಯೋಜನೆ!

ಡೊನಾಲ್ಡ್ ಟ್ರಂಪ್ ಏನೇನೋ ಮಾಡಲು ಹೋಗಿ ಅಮೆರಿಕ ಹೆಸರು ಕೆಡಿಸುತ್ತಿರುವ ಭಾರಿ ಗಂಭೀರ ಆರೋಪ ಇದೆ. ಈ ಪೈಕಿ ತೆರಿಗೆ ಯುದ್ಧ ಸಾರಿದ್ದ ಡೊನಾಲ್ಡ್ ಟ್ರಂಪ್ ಪ್ರಪಂಚದ ಮಟ್ಟದಲ್ಲಿ ಅಮೆರಿಕ ಮಾನ ಹರಾಜು ಹಾಕುತ್ತಿದ್ದರು. ಅಮೆರಿಕದ ಸ್ನೇಹಿತ ದೇಶಗಳ ಜೊತೆ ಕೂಡ ತೆರಿಗೆ ವಾರ್ ಮಾಡುತ್ತಿದ್ದಾರೆ ಡೊನಾಲ್ಡ್ ಟ್ರಂಪ್ ಎಂಬ ಆರೋಪ ಇದೆ. ಹೀಗಿದ್ದಾಗ ಮತ್ತೆ ಇನ್ನೊಂದು ಕಡೆ ಅಮೆರಿಕದ ಒಳಗೆ ಅಕ್ರಮ ವಲಸಿಗರ ವಿಚಾರ ಕೂಡ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಇದೀಗ ಪೊಲೀಸ್ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಭಸ್ಮವಾಗಿವೆ. ಇದೇ ಕಾರಣಕ್ಕೆ ಶಾಂತಿ ಕಾಪಾಡಲು 2,000 ನ್ಯಾಷನಲ್ ಗಾರ್ಡ್ & ನೌಕಾಪಡೆ 700 ತುಕಡಿ ನಿಯೋಜನೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+