Donald Trump: ಚೀನಾ ವಿರುದ್ಧ ಹೇರಿಕೆ ಮಾಡಿದ್ದ ಭಾರಿ ತೆರಿಗೆ ಇಳಿಕೆ ಮಾಡಿದ ಟ್ರಂಪ್!
ಅಮೆರಿಕ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷರ ಭೇಟಿ ಬಳಿಕ ಜಾಗತಿಕ ಆರ್ಥಿಕ ವಲಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ. ಈ ಮೂಲಕ ಹೊಸ ಚೇತರಿಕೆ ಕಾಣುವ ಎಲ್ಲಾ ಲಕ್ಷಣ ಗೋಚರಿಸಿದ್ದು, ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಹೀಗೆ ಟ್ರಂಪ್ ಅವರು ಚೀನಾ ಜೊತೆಯಲ್ಲಿ ಅಮೆರಿಕದ ಸಂಬಂಧ ಗಟ್ಟಿ ಮಾಡಲು ದಿಢೀರ್ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಈ ಮೂಲಕ ಚೀನಾ ವಿರುದ್ಧ ಹೇರಿಕೆ ಮಾಡಿದ್ದ ಭಾರಿ ತೆರಿಗೆ ಇಳಿಕೆ ಮಾಡಿದ ಟ್ರಂಪ್ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಮಹತ್ವದ ಮಾತುಕತೆ ನಡೆಯಿತು. ಭೇಟಿ ಸಮಯದಲ್ಲಿ ಭಾರಿ ದೊಡ್ಡ ಮಹತ್ವದ ವಿಚಾರಗಳೇ ಚರ್ಚೆಗೆ ಬಂದವು. ಪ್ರಮುಖವಾಗಿ ಚೀನಾ ರಫ್ತು ಮಾಡುತ್ತಿದ್ದ ಸರಕುಗಳ ಮೇಲೆ ಅಮೆರಿಕ ವಿಧಿಸಿದ್ದ ಭಾರಿ ದೊಡ್ಡ ಪ್ರಮಾಣದ ತೆರಿಗೆ ಇದೀಗ ಇಳಿಕೆಯಾಗಿದೆ. ಹೀಗೆ ಟ್ಯಾಕ್ಸ್ ಇಳಿಕೆ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊನೆಗೂ ಒಪ್ಪಿಗೆ ನೀಡಿದ್ದು, ಆ ಮೂಲಕ ಚೀನಾ ರಫ್ತು ಮಾಡುವ ಸರಕುಗಳ ಆಮದು ಮೇಲಿನ ತೆರಿಗೆ ಶೇಕಡಾ 47ಕ್ಕೆ ಇಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರಿನ್ ಸಿಗ್ನಲ್ ಕೊಟ್ಟಿದ್ದಾರೆ. id='are-slot-2' class='oiad oi-axt oiadv'>












Click it and Unblock the Notifications