Plane Crash: ವಿಮಾನ ಪತನಗೊಂಡು 62 ಮಂದಿ ಸಾವು: ಭಯಾನಕ ವಿಡಿಯೋ ವೈರಲ್‌

ಬ್ರೆಜಿಲ್‌ನ ವಿನ್ಹೆಡೊದಲ್ಲಿ ವಿಮಾನ ಪತನಗೊಂಡು 62 ಮಂದಿ ಸಾವನ್ನಪ್ಪಿದ್ದಾರೆ. ಈ ಭೀಕರ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. 68 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದ ವಿಮಾನದಲ್ಲಿ 58 ಪ್ರಯಾಣಿಕರು 4 ಮಂದಿ ವಿಮಾನ ಸಿಬ್ಬಂದಿ ಇದ್ದರು. ಸಾವೊ ಪಾಲೊ ನಗರ ಕೇಂದ್ರಕ್ಕೆ ಸಮೀಪವಿರುವ ಹೆದ್ದಾರಿಯ ಬಳಿ ವಿಮಾನ ಪತನಗೊಂಡಿದ್ದು ಹೊತ್ತಿ ಉರಿದಿದೆ.

ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ದುರ್ಘಟನೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಅಪಘಾತದಲ್ಲಿ ಯಾರೊಬ್ಬ ಕೂಡ ಬದುಕುಳಿದಿಲ್ಲ ಎಲ್ಲಾ 62 ಮಂದಿ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ. ವೋಪಾಸ್ ಫ್ಲೈಟ್ 2283 ಎಂದು ಗುರುತಿಸಲಾದ ವಿಮಾನವು ಬ್ರೆಜಿಲ್‌ನ ವಿನ್ಹೆಡೊದಲ್ಲಿ ನೆಲಕ್ಕೆ ಬೀಳುತ್ತಿರುವ ವಿಡಿಯೋ ವೈರಲ್ ಆಗಿದೆ.

Tragic Plane Crash in Brazil Kills All 62 Onboard A Detailed Report

ವಿಡಿಯೋ ಕೆಳಕ್ಕೆ ಬೀಳುತ್ತಿದ್ದಂತೆ ಹೊತ್ತಿ ಉರಿದಿದೆ. ಸಾವೊ ಪಾಲೊದ ರಾಜ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಅಪಘಾತದ ಸ್ಥಳಕ್ಕೆ ಕಳುಹಿಸಲಾಗಿತ್ತು. ವೊಪಾಸ್ ಫ್ಲೈಟ್‌ 2283 ಬ್ರೆಜಿಲ್‌ನ ಕ್ಯಾಸ್ಕಾವೆಲ್‌ನಿಂದ ಸೊವೊ ಪಾಲೊಗೆ ತೆರಳುತ್ತಿತ್ತು. ಬೆಳಿಗ್ಗೆ 11:50 ಕ್ಕೆ ಕ್ಯಾಸ್ಕಾವೆಲ್‌ನಿಂದ ಹೊರಟ ವಿಮಾನವು ಮಧ್ಯಾಹ್ನ 1:40 ಕ್ಕೆ ಸಾವೊ ಪಾಲೊದಲ್ಲಿ ಇಳಿಯಬೇಕಾಗಿತ್ತು. ಆದರೆ ಸುರಕ್ಷಿತವಾಗಿ ಇಳಿಯುವ ಮುನ್ನವೇ ಅಪಘಾತಕ್ಕೀಡಾಗಿದೆ.

ವಿಶೇಷ ತಂಡ ರಚನೆ

ಭೀಕರ ಅಪಘಾತದ ಬಗ್ಗೆ ವಿಚಾರಣೆ ಮಾಡಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ಬ್ರೆಜಿಲ್‌ನ ಸಾವೊ ಪಾಲೊ ಗವರ್ನರ್ ಹೇಳಿದ್ದಾರೆ. ಬಿಕ್ಕಟ್ಟಿನ ಕ್ಯಾಬಿನೆಟ್ ಫೆಡರಲ್ ಸರ್ಕಾರ, ರಾಜ್ಯ ಸರ್ಕಾರ ಮತ್ತು ಬ್ರೆಜಿಲಿಯನ್ ವಾಯುಪಡೆಯನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿದೆ ಎಂದು ಗವರ್ನರ್ ಟಾರ್ಸಿಯೊ ಡಿ ಫ್ರೀಟಾಸ್ ಹೇಳಿರುವುದಾಗಿ ವರದಿಯಾಗಿದೆ.

ವಾಲಿನ್‌ಹೋಸ್ ಸಿಟಿ ಕಮ್ಯುನಿಕೇಷನ್ಸ್ ಡೈರೆಕ್ಟರ್ ಅನಾ ಕ್ಯಾಂಡಿಡಾ ಬ್ರಿಸ್ಕಿ ಸಿಎನ್‌ಎನ್‌ಗೆ ಮಾತನಾಡಿ, ವಿಮಾನ ಅಪಘಾತದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಮಾತ್ರ ಮೃತಪಟ್ಟಿದ್ದು, ವಸತಿ ಪ್ರದೇಶದಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ಖಚಿತಪಡಿಸಿದ್ದಾರೆ. ಸಂತ್ರಸ್ತರನ್ನು ರಕ್ಷಣೆ ಮಾಡಲು ತಾಂತ್ರಿಕ-ವೈಜ್ಞಾನಿಕ ಪೊಲೀಸ್ ಅಧೀಕ್ಷಕ (SPTC) ಮತ್ತು ಸಿವಿಲ್ ಮತ್ತು ಮಿಲಿಟರಿ ಪೋಲಿಸ್ ತಂಡವನ್ನು ಸಜ್ಜುಗೊಳಿಸಲಾಗಿದೆ. ಲೀಗಲ್ ಮೆಡಿಕಲ್ ಇನ್‌ಸ್ಟಿಟ್ಯೂಟ್ (ಐಎಂಎಲ್) ಮತ್ತು ಮೃತದೇಹಗಳನ್ನು ಸಂಗ್ರಹಿಸುವ ಜವಾಬ್ದಾರಿ ಹೊಂದಿರುವ ತಂಡಗಳನ್ನು ಸಹ ಅಪಘಾತ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.

ವಿಡಿಯೋ ವೈರಲ್

ಇನ್ನು ವಿಮಾನ ಕೆಳಗೆ ಬೀಳುವ ವಿಡಿಯೋವನ್ನು ಸ್ಥಳೀಯರು ಸೆರೆಹಿಡಿದಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂ, ಎಕ್ಸ್‌, ಫೇಸ್‌ಬುಕ್‌ನಲ್ಲಿ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಅಪಘಾತದ ಭೀಕರ ದೃಶ್ಯಗಳನ್ನು ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+