ಚಿತ್ರಸುದ್ದಿ : ಭೂಲೋಕದ ಸ್ವರ್ಗದಿಂದ ಸುಂದರ ಪೋಸ್ಟ್ ಕಾರ್ಡ್
ಬೆಂಗಳೂರು, ಫೆ.5: ಭೂಲೋಕದ ಸ್ವರ್ಗ ಎನಿಸಿರುವ ಜಮ್ಮು ಮತ್ತು ಕಾಶ್ಮೀರದ ಸುಂದರ ದಾಲ್ ಸರೋವರದಿಂದ ಮನಮೋಹಕ ಚಿತ್ರ ಬಂದಿದೆ. ಗುರ್ ಗಾಂವ್ ನಲ್ಲಿ ಸಂಚಾರ ದಟ್ಟಣೆ, ಚಿರತೆ ಜತೆ ರಷ್ಯಾದ ಅಧ್ಯಕ್ಷ, ಅಲಹಾಬಾದಿನಲ್ಲಿ ಮುಂದುವರೆದ ಮಾಘಮೇಳದ ಆಚರಣೆ, ಒಡಿಸ್ಸಾದಲ್ಲಿ ಭಗವದ್ಗೀತೆ ನೃತ್ಯ ಎಲ್ಲವೂ ಇಂದಿನ ಪ್ಯಾಕೇಜಿನಲ್ಲಿದೆ.
ಈ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ 101ನೇ ಭಾರತೀಯ ಬಾಹ್ಯಾಕಾಶ ವಿಜ್ಞಾನ ಕಾಂಗ್ರೆಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದು, ಮಾಜಿ ರಾಷ್ಟ್ರಪತಿ, ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರು ಈ ಕಾರ್ಯಕ್ರಮಕ್ಕೆ ಭೇಟಿ ನೀಡಿ ಯುವ ಉತ್ಸಾಹಿ ವಿದ್ಯಾರ್ಥಿಗಳಿಗೆ ಹುರುಪು ತುಂಬಿದ್ದಾರೆ. ಕೋಲ್ಕತ್ತಾದಲ್ಲಿ ನಟ ಫರಾನ್ ಅಖ್ತರ್ ಹಾಗೂ ನಟಿ ವಿದ್ಯಾ ಬಾಲನ್ ಹೊಸ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ.
ಚೀನಾದಲ್ಲಿ ಇನ್ನೂ ಹೊಸ ವರ್ಷದ ಸಂಭ್ರಮ ಮುಂದುವರೆದಿದೆ. ಬಿಹಾರದಲ್ಲಿ ನಡೆದ ಸರಸ್ವತಿ ಪೂಜೆ ಇನ್ನಷ್ಟು ಚಿತ್ರಗಳು ಇಂದಿನ ಚಿತ್ರ ಸುದ್ದಿಯಲ್ಲಿವೆ ತಪ್ಪದೇ ನೋಡಿ...

ಕಾಶ್ನ್ಮೀರದಿಂದ ಸುಂದರ ಪೋಸ್ಟ್ ಕಾರ್ಡ್
ಭೂಲೋಕದ ಸ್ವರ್ಗ ಎನಿಸಿರುವ ಜಮ್ಮು ಮತ್ತು ಕಾಶ್ಮೀರದ ಸುಂದರ ದಾಲ್ ಸರೋವರದಿಂದ ಮನಮೋಹಕ ಚಿತ್ರ

ಗುರ್ ಗಾಂವ್ ನಲ್ಲಿ ಸಂಚಾರ ದಟ್ಟಣೆ
ಗುರ್ ಗಾಂವ್ ನ ರಾಷ್ಟ್ರೀಯ ಹೆದ್ದಾರಿ 8 ರಲ್ಲಿ ಲ್ಲಿ ಸಂಚಾರ ದಟ್ಟಣೆ. PTI Photo

ಕಾಶ್ಮೀರದಲ್ಲಿ ವಿದ್ಯಾರ್ಥಿಗಳ ಜತೆ ಅಬ್ದುಲ್ ಕಲಾಂ
ಮಾಜಿ ರಾಷ್ಟ್ರಪತಿ, ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರು ಈ ಕಾರ್ಯಕ್ರಮಕ್ಕೆ ಭೇಟಿ ನೀಡಿ ಯುವ ಉತ್ಸಾಹಿ ವಿದ್ಯಾರ್ಥಿಗಳಿಗೆ ಹುರುಪು ತುಂಬಿದ್ದಾರೆ.

ಒಬಾಮಾ ತಂಡಕ್ಕೆ ಮಂಡ್ಯದ ಸರ್ಜನ್
ಅಂಧ್ರಪ್ರದೇಶ ಮೂಲದ, ಕರ್ನಾಟಕದಲ್ಲಿ ಓದಿರುವ ಸತ್ಯ ನಾದೆಳ್ಲ ಅವರು ಮೈಕ್ರೋಸಾಫ್ಟ್ ಸಿಇಒ ಆಗಿರುವ ಬೆನ್ನಲೇ ಮಂಡ್ಯ ಜಿಲ್ಲೆ ಮದ್ದೂರಿನ ಹಲ್ಲೆಗೆರೆಯ 36 ವರ್ಷದ ಸರ್ಜನ್ ಡಾ. ವಿವೇಕ್ ಮೂರ್ತಿ ಅವರು ಅಮೆರಿಕದ ಪ್ರತಿಷ್ಠಿತ ಸರ್ಜನ್ ಜನರಲ್ ಹುದ್ದೆಗೆ ನಾಮಂಕಣಗೊಂಡಿದ್ದಾರೆ.

ಕೋಲ್ಕತ್ತಾದಲ್ಲಿ ನಟ ಫರಾನ್ ಹಾಗೂ ನಟಿ ವಿದ್ಯಾ
ಕೋಲ್ಕತ್ತಾದಲ್ಲಿ ನಟ ಫರಾನ್ ಅಖ್ತರ್ ಹಾಗೂ ನಟಿ ವಿದ್ಯಾ ಬಾಲನ್ ಹೊಸ ಚಿತ್ರಶಾದಿ ಕೆ ಸೈಡ್ ಎಫೆಕ್ಟ್ ಪ್ರಚಾರದಲ್ಲಿ ತೊಡಗಿದ್ದಾರೆ.

ಒಡಿಸ್ಸಾದಲ್ಲಿ ಭಗವದ್ಗೀತೆ ನೃತ್ಯ
ಒಡಿಸ್ಸಾದ ಭುವನೇಶ್ವರದಲ್ಲಿ ಭಗವದ್ಗೀತೆ ಶ್ರೀಜಿನ್ ಅವರ ತಂಡ ನರ್ತಿಸಿದ್ದು ಹೀಗೆ

ಅಲಹಾಬಾದಿನಲ್ಲಿ ಮಾಘ ಮೇಳ ಆಚರಣೆ
ಅಲಹಾಬಾದಿನಲ್ಲಿ ಮೇಘ ಮೇಳ : ಸಾಧುಗಳು ಬೆಂಕಿ ಉಂಗುರಗಳನ್ನು ಹೊತ್ತು ಮಾಘ ಮೇಳದ ವಸಂತ ಪಂಚಮಿಯಂದು ವಿಶೇಷ ಪೂಜೆ

ಚಿರತೆ ಜತೆ ರಷ್ಯದ ಅಧ್ಯಕ್ಷ ಪುಟಿನ್
ಹಿಮ ಚಿರತೆ ಜತೆ ರಷ್ಯದ ಬ್ಲ್ಯಾಕ್ ಸೀ ರೆಸಾರ್ಟ್ ನಲ್ಲಿ ರಷ್ಯದ ಅಧ್ಯಕ್ಷ ಪುಟಿನ್ ಕಾಣಿಸಿಕೊಂಡಿದ್ದು ಹೀಗೆ

ಬಿಹಾರದಲ್ಲಿ ಸರಸ್ವತಿ ಪೂಜೆ ಆಚರಣೆ
ಬಿಹಾರದಲ್ಲಿ ಯುವತಿಯರಿಂದ ಸರಸ್ವತಿ ಪೂಜೆ ಆಚರಣೆ

ಚೀನಿಯರ ಹೊಸ ವರ್ಷ ಸಂಭ್ರಮಾಚರಣೆ
ಚೀನಿಯರ ಹೊಸ ವರ್ಷ ಸಂಭ್ರಮಾಚರಣೆಗೆ ಕೆಂಪು ಬಣ್ಣದ ಲಾಟೀನುಗಳು












Click it and Unblock the Notifications