ಇರಾನ್ ಜನನಾಯಕನ ಅಂತ್ಯಕ್ರಿಯೆಗೆ ಜನಸಾಗರ ನಿರೀಕ್ಷೆ

Posted By: Chethan
Subscribe to Oneindia Kannada

ಟೆಹರಾನ್, ಜ. 10: ಭಾನುವಾರ ನಿಧನರಾದ ಇರಾನ್ ನ ಮಾಜಿ ಅಧ್ಯಕ್ಷ ಹಾಗೂ ಜನಪ್ರಿಯ ನಾಯಕ ಅಕ್ಬರ್ ಹಮೇಶಿ ರಫ್ಸಾಂಜನಿ (82) ಅವರ ಅಂತ್ಯಕ್ರಿಯೆಯು ಮಂಗಳವಾರ ನಡೆಯಲಿದ್ದು, ಈ ಸಂದರ್ಭದಲ್ಲಿ ಲಕ್ಷಾನುಟ್ಟಲೆ ಜನರು ಆಗಮಿಸುವ ನಿರೀಕ್ಷೆಯಿದೆ.

ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ಪ್ರಾರ್ಥನೆ ಮೂಲಕ ಆರಂಭಿಸಲಾಗುತ್ತದಲ್ಲದೆ, ಎಲ್ಲಾ ಅಂತಿಮ ಪ್ರಕ್ರಿಯೆಗಳನ್ನು ಇರಾನ್ ದೊರೆ ಅಯಾತೊಲ್ಲಾ ಅಲಿ ಖಮೇನಿ ನಡೆಸಲಿದ್ದಾರೆ.

Thousands may witness Iran ex-president's funeral

1989ರಿಂದ 1997ರವರೆಗೆ ಇರಾನ್ ಅಧ್ಯಕ್ಷರಾಗಿದ್ದ ರಫ್ಸಾಂಜನಿ ಅವರು, ಭಾನುವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಸರ್ಕಾರಿ ಆದೇಶದನ್ವಯ ಇರಾನ್ ನಾದ್ಯಂತ ಸೋಮವಾರದಿಂದ ಮೂರು ದಿನಗಳ ಶೋಕಾಚರಣೆ ಆರಂಭಗೊಂಡಿದೆ.

ಇರಾನ್ ನಲ್ಲಿ ರಫ್ಸಾಂಜನಿ ಅವರು ಬದಲಾವಣೆಯ ಹರಿಕಾರ ಎಂದೇ ಪ್ರಸಿದ್ಧರು. ತಮ್ಮ ಸಕಾರಾತ್ಮಕ ಚಿಂತನೆಗಳಿಂದಾಗಿ ಹಲವಾರು ಬದಲಾವಣೆಗಳನ್ನು ತರಲು ಅವರು ಪ್ರಯತ್ನಿಸಿದ್ದಾಗಿ ಹಲವಾರು ಮಾಧ್ಯಮಗಳನ್ನು ಅವರನ್ನು ಕೊಂಡಾಡಿವೆ.

ಇರಾನ್ ನ ಹಾಲಿ ಅಧ್ಯಕ್ಷ ಹಸ್ಸನ್ ರೌಹಾನಿ ಅವರ ಕಟ್ಟಾ ಬೆಂಬಲಿಗ ಎಂದೇ ಪರಿಗಣಿಸಲ್ಪಟ್ಟವರು. ಇರಾನ್ ದೇಶವು ಪರಮಾಣು ಶಸ್ತ್ರಾಸ್ತ್ರ ಹೊಂದುವ ಮೂಲಕ ಇದೇ ತಾಕತ್ತು ಪಡೆದಿರುವ ಜಗತ್ತಿನ ಕೆಲವೇ ಕೆಲವೇ ದೇಶಗಳ ಸಾಲಿಗೆ ಸೇರುವಲ್ಲಿ ರಫ್ಸಾಂಜನಿ ಪಾತ್ರ ಮಹತ್ವದ್ದಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thousands of lakhs of people are expected to attend the funerals of Iran's former president Akbar Hashemi Rafsanjani in Tehran.
Please Wait while comments are loading...