ಹೊಸ ವರ್ಷಾಚರಣೆ ಕ್ಯಾನ್ಸಲ್, ಯಾವ ಯಾವ ನಗರಗಳಲ್ಲಿ ಮಾಹಿತಿ ತಿಳಿಯಿರಿ... Happy New Year

ಹೊಸ ವರ್ಷ ಬಂದೇ ಬಿಟ್ಟಿದೆ, ಕೆಲವೇ ಗಂಟೆಗಳಲ್ಲಿ ನಾವೆಲ್ಲಾ 2025 ದಾಟಿ 2026ಕ್ಕೆ ಭರ್ಜರಿ ಎಂಟ್ರಿ ಕೊಡುತ್ತಿದ್ದೇವೆ. ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಕಳೆಗಟ್ಟಿದ್ದು, ಸೆಲೆಬ್ರೇಷನ್ ಮಾಡಿ ಹೊಸ ವರ್ಷ ಬರಮಾಡಿಕೊಳ್ಳಲು ನೂರಾರು ಕೋಟಿ ಜನರು ಜಗತ್ತಿನಾದ್ಯಂತ ಕಾಯುತ್ತಿದ್ದಾರೆ. ಸಂಜೆ ಶುರುವಾಗುವ ಸಂಭ್ರಮ ಬೆಳಗ್ಗೆ ತನಕವೂ ಮುಂದುವರಿಯಲಿದೆ, ಆದರೆ ಇಷ್ಟೆಲ್ಲಾ ಖುಷಿ ಇರುವಾಗಲೇ ಕೆಲವು ಕಡೆ ಆತಂಕ ಕೂಡ ಮನೆಮಾಡಿದೆ. ಇದೇ ಕಾರಣಕ್ಕೆ ಹೊಸ ವರ್ಷಾಚರಣೆ ಕೂಡ ಕ್ಯಾನ್ಸಲ್ ಆಗಿದೆ. ಹಾಗಾದರೆ, ಯಾವ ಯಾವ ನಗರಗಳಲ್ಲಿ ಹೊಸ ವರ್ಷಾಚರಣೆ ಕ್ಯಾನ್ಸಲ್ ಆಗಿದೆ ಎಂಬ ಮಾಹಿತಿ ತಿಳಿಯೋಣ ಬನ್ನಿ.

ಅಂದಹಾಗೆ ಉಗ್ರರ ಬೆದರಿಕೆಗಳ ಕಾರಣಕ್ಕೆ ಜಗತ್ತಿನ ಹಲವು ನಗರಗಳಲ್ಲಿ ಹೊಸವರ್ಷ ಆಚರಣೆ ಕ್ಯಾನ್ಸಲ್ ಆಗಿದೆ. ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಸಮೇತ ಹಲವು ಶ್ರೀಮಂತ ದೇಶಗಳ ಶ್ರೀಮಂತ ನಗರಗಳಲ್ಲೇ ಇದೀಗ ಹೊಸವರ್ಷ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಈ ಪೈಕಿ ಪ್ರಮುಖವಾಗಿ ಅತಿಹೆಚ್ಚು ಜನರು ಸೇರುವ ಜಾಗಗಳನ್ನೇ ಟಾರ್ಗೆಟ್ ಮಾಡಿದ್ದಾರಂತೆ ಆಗಂತುಕರು. ಇದೇ ಕಾರಣಕ್ಕೆ ಹಲವು ನಗರಗಳಲ್ಲಿ ಸೆಲೆಬ್ರೇಷನ್ ಬೇಡ ಎಂದು ಕ್ರಮ ಕೈಗೊಳ್ಳಲಾಗಿದೆ. ಆ ಎಲ್ಲಾ ನಗರಗಳ ಮಾಹಿತಿ ಮುಂದೆ ಇದೆ.

These Cities Are Canceled New Year Celebration For This Reason

ಜಗತ್ತಿನ ದೊಡ್ಡಣ್ಣನಿಗೂ ಕಾಡುತ್ತಿದೆ ಭಯ

ಅಮೆರಿಕದಲ್ಲಿ ಕಾರ್ಯಾಚರಣೆ ನಡೆಸಿದ್ದ ಭದ್ರತಾ ಪಡೆ ಸಿಬ್ಬಂದಿ 4 ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮೊಜಾವೆ ಮರುಭೂಮಿಯಲ್ಲಿ ಸೆರೆಸಿಕ್ಕಿದ್ದ ಈ 4 ಶಂಕಿತರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಸಿಕ್ಕಿತ್ತು. ಪ್ರಮುಖವಾಗಿ ಅಮೆರಿಕದಲ್ಲಿ ಹೆಚ್ಚಾಗಿ ಜನರು ಸೇರುವ ನಗರ ಪ್ರದೇಶದಲ್ಲಿ ದಾಳಿ ಮಾಡಲು ಇವರೆಲ್ಲಾ ಸೇರಿ ಸ್ಕೆಚ್ ಹಾಕಿದ್ದರು ಎಂಬ ಸ್ಫೋಟಕ ಮಾಹಿತಿಯು ಬಯಲಾಗಿತ್ತು. ಆ ನಂತರ ಮತ್ತೊಬ್ಬ ಕೂಡ ಸೆರೆಯಾಗಿದ್ದು, ಜಗತ್ತಿನ ಹಲವು ನಗರಗಳಲ್ಲಿ ಇದೇ ರೀತಿ ದಾಳಿಗೆ ಸ್ಕೆಚ್ ಹಾಕಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಹೊಸವರ್ಷದ ಸಂಭ್ರಮಾಚರಣೆ ಮಾಡಲು ಅವಕಾಶ ನೀಡಿಲ್ಲ.

ಯಾವ ಯಾವ ನಗರದಲ್ಲಿ ನಿರ್ಬಂಧ?

ಆಸ್ಟ್ರೇಲಿಯಾದ ಸಿಡ್ನಿ ನಗರವೂ ಸೇರಿದಂತೆ, ಫ್ರಾನ್ಸ್ ರಾಜಧಾನಿ ಪ್ಯಾರಿಸ್, ಜಪಾನ್ ರಾಜಧಾನಿ ಟೋಕಿಯೊ, ಸೆರ್ಬಿಯಾದ ಬೆಲ್‌ಗ್ರೇಡ್ ನಗರಗಳಲ್ಲಿ ಇದೀಗ ಹೊಸ ವರ್ಷ ಆಚರಣೆಯನ್ನ ಬಂದ್ ಮಾಡಲಾಗಿದೆ. ಅದರಲ್ಲೂ ಹೊಸ ವರ್ಷಕ್ಕೆ ಮುಂಚಿತವಾಗಿ ಜನದಟ್ಟಣೆ, ಸಾರ್ವಜನಿಕ ಸುರಕ್ಷತಾ ನಿಯಮಗಳ ಉಲ್ಲೇಖಿಸಿ ಕೌಂಟ್‌ಡೌನ್ ಕಾರ್ಯಕ್ರಮಗಳೂ ಸೇರಿದಂತೆ ಹಲವು ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ.

ಜಗತ್ತಿನ ಹಲವು ಪ್ರಮುಖ ನಗರಗಳಲ್ಲಿ ಹೊಸವರ್ಷ ಆಚರಣೆಗೆ ಬ್ರೇಕ್ ಹಾಕಿರುವ ಹಿನ್ನೆಲೆಯಲ್ಲಿ ಇದೀಗ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಲಿದೆ ಎಂಬ ಚರ್ಚೆ ಕೂಡ ಶುರುವಾಗಿದೆ. ಈ ಎಲ್ಲಾ ಚರ್ಚೆಗಳ ನಡುವೆ ಕೂಡ ಜನರ ಜೀವ ಮುಖ್ಯ ಅನ್ನೋ ಉತ್ತರ ನೀಡಲಾಗಿದೆ. ಅಲ್ಲದೆ ಇನ್ನುಳಿದ ಪ್ರಮುಖ ನಗರಗಳಲ್ಲಿ ಕೂಡ ಹದ್ದಿನ ಕಣ್ಣಿಡಲಾಗಿದ್ದು, ಉಗ್ರರ ಬೆದರಿಕೆಗೆ ಉತ್ತರವನ್ನ ಕೊಡಲು ಭಾರಿ ಕೂಡ ಭದ್ರತೆ ಒದಗಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+