• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ವೆಟ್ಟಾದಲ್ಲಿ ಭೀಕರ ಹತ್ಯಾಕಾಂಡ : 57 ಕೆಡೆಟ್‌ಗಳ ಮಾರಣಹೋಮ

By ವಿಕಾಸ್ ನಂಜಪ್ಪ
|

ಕ್ವೆಟ್ಟಾ (ಪಾಕಿಸ್ತಾನ), ಅಕ್ಟೋಬರ್ 25 : ಪಾಕಿಸ್ತಾನದ ಕ್ವೆಟ್ಟಾದಲ್ಲಿ ಅಕ್ಟೋಬರ್ 24ರ ಮಧ್ಯರಾತ್ರಿ ಭೀಕರ ಹತ್ಯಾಕಾಂಡ ನಡೆದಿದ್ದು, ಪೊಲೀಸ್ ತರಬೇತಿ ಕಾಲೇಜಿಗೆ ನುಗ್ಗಿದ ಮೂವರು ಉಗ್ರರು ಕನಿಷ್ಠ 57 ಕೆಡೆಟ್ ಗಳನ್ನು ಹತ್ಯೆಗೈದಿದ್ದಾರೆ.

ಈ ದುರ್ಘಟನೆ ನಡೆಯುತ್ತಿದ್ದಂತೆ, ಇನ್ನೆಷ್ಟು ಇಂಥ ಹತ್ಯಾಕಾಂಡ ನೋಡಬೇಕು, ಇನ್ನೆಷ್ಟು ವಿಧವೆಯರು ಹುಟ್ಟಿಕೊಳ್ಳಬೇಕು, ಇನ್ನೆಷ್ಟು ತಾಯಂದಿರು ಕಣ್ಣೀರು ಹಾಕಬೇಕು, ಇನ್ನೆಷ್ಟು ಅಮಾಯಕರು ತಬ್ಬಲಿಯಾಗಬೇಕು, ಇನ್ನೆಷ್ಟು ಜನರು ಕಣ್ಣೀರಿನ ಕೋಡಿ ಹರಿಸಬೇಕು ಎಂದು ಟ್ವಿಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಕ್ವೆಟ್ಟಾದಲ್ಲಿ ಈ ವರ್ಷ ಉಗ್ರರ ದಾಳಿಯಲ್ಲಿ ಸತ್ತವರು 227 ಮಂದಿ]

ಕೆಲ ವರದಿಗಳ ಪ್ರಕಾರ, ಉಗ್ರರು ಸತತವಾಗಿ ಅಫಘಾನಿಸ್ತಾನದಲ್ಲಿರುವ ತಮ್ಮ ನಾಯಕರ ಜೊತೆ ಸಂಪರ್ಕದಲ್ಲಿದ್ದರು. ಮೂವರು ಭಯೋತ್ಪಾದಕರು ಆತ್ಮಹತ್ಯಾ ಸಾಧನವನ್ನು ಅಳವಡಿಸಿಕೊಂಡಿದ್ದರು. ಈ ದಾಳಿಯಲ್ಲಿ ಕನಿಷ್ಠ 97 ಕೆಡೆಟ್ ಗಳು ಗಾಯಗೊಂಡಿದ್ದಾರೆ.

ಸುಮಾರು 600 ಕೆಡೆಟ್ ಗಳಿರುವ ಪೊಲೀಸ್ ಟ್ರೇನಿಂಗ್ ಕಾಲೇಜನ್ನು ಸೋಮವಾರ ರಾತ್ರಿ 9.30ರ ಸುಮಾರಿಗೆ ಉಗ್ರರು ಹೊಕ್ಕಿದ್ದಾರೆ. ಮುಂಭಾಗದ ಗೇಟ್ ನಿಂದ ಇಬ್ಬರು ಪ್ರವೇಶಿಸಿದ್ದರೆ, ಒಬ್ಬ ಹಿಂಬದಿಯ ಗೇಟ್ ಜಿಗಿದು ಕಾಲೇಜನ್ನು ಪ್ರವೇಶಿಸಿದ್ದಾನೆ. ಮೊದಲಿಗೆ ಭದ್ರತಾ ಸಿಬ್ಬಂದಿಯನ್ನು ಕೊಂದು ನಂತರ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ. [ಪಾಕಿಸ್ತಾನದ ಕ್ವೆಟ್ಟಾದ ಆಸ್ಪತ್ರೆಯಲ್ಲಿ ಸ್ಫೋಟ, 93 ಸಾವು]

ಇಬ್ಬರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದರಿಂದ ಹೆಚ್ಚಿನ ಸಾವುನೋವು ಸಂಭವಿಸಿದೆ. ಉಗ್ರ ಬಳಿ ಎಕೆ 47 ಮತ್ತು ಗ್ರೆನೇಡುಗಳು ಇದ್ದವು. ಮೂರನೇಯವನನ್ನು ಭದ್ರತಾ ಸಿಬ್ಬಂದಿಗಳು ಗುಂಡಿಟ್ಟು ಕೊಂದಿದ್ದಾರೆ. ಈ ಕಾರ್ಯಾಚರಣೆ ನಡೆಸಲು ಭದ್ರತಾ ಸಿಬ್ಬಂದಿಗೆ ನಾಲ್ಕು ಗಂಟೆ ತಗುಲಿದೆ ಎಂದು ದಿ ಡಾನ್ ವರದಿ ಮಾಡಿದೆ.

English summary
At least 57 people, mostly cadets were killed and 97 injured after three terrorists stormed a police training college in Quetta, Pakistan on Monday night. According to reports, the terrorists were in touch with their handlers in Afghanistan. The three terrorists were wearing suicide vests. The training center houses at least 600 cadets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more