ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Shocking News: 6 ತಿಂಗಳಿನಲ್ಲಿ ತಾಲಿಬಾನ್ ವಶವಾಗುತ್ತಾ ಅಫ್ಘಾನಿಸ್ತಾನ್!?

|
Google Oneindia Kannada News

ಕಾಬೂಲ್, ಜುಲೈ 25: ತಾಲಿಬಾನ್ ಉಗ್ರ ಸಂಘಟನೆಯು ಮುಂದಿನ ಆರು ತಿಂಗಳಿನಲ್ಲಿ ಮತ್ತೆ ಅಫ್ಘಾನಿಸ್ತಾನದ ಅಧಿಕಾರವನ್ನು ಮರಳಿ ವಶಕ್ಕೆ ಪಡೆದುಕೊಳ್ಳಲಿದೆ ಎಂದು ಅಮೆರಿಕಾದ ಗುಪ್ತಚರ ಇಲಾಖೆಯ ವಿಶ್ಲೇಷಕರು ಶಂಕೆ ವ್ಯಕ್ತಪಡಿಸಿದ್ದಾರೆ. ಯುಎಸ್ ಸೇನೆಗಳು ನಿರ್ಗಮಿಸುತ್ತಿದ್ದಂತೆ ದೇಶದಲ್ಲಿ ತಾಲಿಬಾನ್ ಚಟುವಟಿಕೆಗಳು ಮಿತಿಮೀರಿ ಬೆಳೆಯುತ್ತಿವೆ.

ದೇಶದ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸುತ್ತಿರುವ ಉಗ್ರರು ಮರಳಿ ಅಧಿಕಾರವನ್ನು ಪಡೆದುಕೊಳ್ಳಲು ಹವಣಿಸುತ್ತಿವೆ. ಇದರ ಮಧ್ಯೆ ಕಳೆದ 24 ಗಂಟೆಗಳಲ್ಲಿ ನಡೆದಿರುವ ಕಾರ್ಯಾಚರಣೆಯಲ್ಲಿ 262 ತಾಲಿಬಾನ್ ಸಂಘಟನೆಯ ಉಗ್ರರನ್ನು ಹೊಡೆದುರುಳಿಸಲಾಗಿದೆ. ಭದ್ರಾತ ಪಡೆ ಸಿಬ್ಬಂದಿ ನಡೆಸಿರುವ ಕಾರ್ಯಾಚರಣೆಯಲ್ಲಿ 176 ತಾಲಿಬಾನ್ ಉಗ್ರರು ಗಾಯಗೊಂಡಿದ್ದು, 21 ಐಟಿಡಿ ಸ್ಪೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯವು ಮಾಹಿತಿ ನೀಡಿದೆ. ನಗರ ಪ್ರದೇಶದಲ್ಲಿ ತಾಲಿಬಾನ್ ಉಗ್ರರು ನುಸುಳದಂತೆ ಮುನ್ನೆಚ್ಚರಿಕೆ ವಹಿಸಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

 ತಾಲಿಬಾನ್‌ ದಾಳಿಗೆ ತತ್ತರಿಸಿದ ಅಫ್ಘಾನ್‌ ಮೇಲೆ ಭಾರತದ ಹೂಡಿಕೆ ಎಷ್ಟು?: ಇಲ್ಲಿದೆ ಸಂಪೂರ್ಣ ವಿವರ ತಾಲಿಬಾನ್‌ ದಾಳಿಗೆ ತತ್ತರಿಸಿದ ಅಫ್ಘಾನ್‌ ಮೇಲೆ ಭಾರತದ ಹೂಡಿಕೆ ಎಷ್ಟು?: ಇಲ್ಲಿದೆ ಸಂಪೂರ್ಣ ವಿವರ

ಅಫ್ಘಾನಿಸ್ತಾನ್ ಸರ್ಕಾರವು ದೇಶದ ಪ್ರಮುಖ ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಇನ್ನೊಂದು ಕಡೆ ರಾಜಧಾನಿ ಕಾಬೂಲ್ ಮತ್ತು ಇತರೆ ಪ್ರದೇಶದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 4 ಗಂಟೆವರೆಗೂ ಎಲ್ಲ ರೀತಿ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಫ್ಘಾನಿಸ್ತಾನದಲ್ಲಿ ಎರಡು ತಿಂಗಳಿನಿಂದ ಸಮರ

ಅಫ್ಘಾನಿಸ್ತಾನದಲ್ಲಿ ಎರಡು ತಿಂಗಳಿನಿಂದ ಸಮರ

ಕಳೆದ ಎರಡು ತಿಂಗಳಿನಿಂದ ಅಫ್ಘಾನಿಸ್ತಾನ್ ಭದ್ರತಾ ಸಿಬ್ಬಂದಿ ಮತ್ತು ತಾಲಿಬಾನ್ ಉಗ್ರರ ನಡುವೆ ಸಮರ ನಡೆಯುತ್ತಿದೆ. ಈ ಹಿನ್ನೆಲೆ ಜಾಗತಿಕ ಭದ್ರತಾ ಪಡೆಗಳನ್ನು ಅಲ್ಲಿಂದ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಬಿಬಿಸಿ ಸುದ್ದಿ ವಾಹಿನಿ ವರದಿ ಮಾಡಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಸೇನಾಪಡೆಯನ್ನು ಗಡಿ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಿಂದ ವಾಪಸ್ ಕರೆಸಿಕೊಂಡ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ತಾಲಿಬಾನ್ ಸಂಘಟನೆಯ ಉಗ್ರರು ಅಫ್ಘಾನಿಸ್ತಾನದ ಅರ್ಧದಷ್ಟು ಭೂಪ್ರದೇಶವನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಅಂದಾಜಿಸಲಾಗಿದೆ.

ರಸ್ತೆಗಳನ್ನು ವಶಕ್ಕೆ ಪಡೆದುಕೊಳ್ಳುವ ಹುನ್ನಾರ ನಡೆಸಿರುವ ತಾಲಿಬಾನ್

ರಸ್ತೆಗಳನ್ನು ವಶಕ್ಕೆ ಪಡೆದುಕೊಳ್ಳುವ ಹುನ್ನಾರ ನಡೆಸಿರುವ ತಾಲಿಬಾನ್

ಕಳೆದ 20 ವರ್ಷದ ಹಿಂದೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಭದ್ರತಾ ಪಡೆ ಆಕ್ರಮಣದಿಂದ ಮೂಲಭೂತವಾದಿ ಇಸ್ಲಾಮಿಸ್ಟ್ ಮಿಲಿಷಿಯಾ ತಾಲಿಬಾನ್ ಹೊರ ಹಾಕಲ್ಪಟ್ಟಿತ್ತು. ಭಯೋತ್ಪಾದಕ ವಸ್ತುಗಳ ಸರಬರಾಜಿಗೆ ಬಳಸಲಾಗುತ್ತಿದ್ದ ಬಹುಪಾಲು ರಸ್ತೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಮುಖ ಪಟ್ಟಣಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಅವನ್ನು ಸೆರೆ ಹಿಡಿಯುವುದಕ್ಕೆ ಸಾಧ್ಯವಾಗಿರಲಿಲ್ಲ.

ತಾಲಿಬಾನ್ ಚಟುವಟಿಕೆಗಳ ನಿಯಂತ್ರಣಕ್ಕೆ ನಿಷೇಧಾಜ್ಞೆ

ತಾಲಿಬಾನ್ ಚಟುವಟಿಕೆಗಳ ನಿಯಂತ್ರಣಕ್ಕೆ ನಿಷೇಧಾಜ್ಞೆ

ಅಫ್ಘಾನಿಸ್ತಾನದ 31 ಪ್ರದೇಶಗಳಲ್ಲಿ ತಾಲಿಬಾನ್ ಸಂಘಟನೆಯ ಉಗ್ರರ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಹಾಗೂ ನಿಯಂತ್ರಿಸುವುದಕ್ಕಾಗಿ ರಾತ್ರಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಕಾಬೂನ್, ಪಂಶಿರ್ ಮತ್ತು ನಂಗಾರ್ಹರ್ ಪ್ರದೇಶಗಳಿಗೆ ಕಲವು ವಿನಾಯಿತಿಗಳನ್ನು ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಭದ್ರತಾ ಪಡೆ ಮತ್ತು ತಾಲಿಬಾನ್ ನಡುವೆ ಸಂಘರ್ಷ

ಭದ್ರತಾ ಪಡೆ ಮತ್ತು ತಾಲಿಬಾನ್ ನಡುವೆ ಸಂಘರ್ಷ

ಅಫ್ಘಾನಿಸ್ತಾನದ ಕಂದಾಹಾರ್ ಹೊರವಲಯದಲ್ಲಿ ಇದೇ ವಾರ ತಾಲಿಬಾನ್ ಉಗ್ರರು ಮತ್ತು ಭದ್ರತಾ ಪಡೆ ಸಿಬ್ಬಂದಿ ನಡುವೆ ನಿರಂತರ ಸಂಘರ್ಷಗಳು ನಡೆದಿವೆ. ಯುಎಸ್ ಭದ್ರತಾ ಸಿಬ್ಬಂದಿ ಹಾಗೂ ಅಫ್ಘಾನಿಸ್ತಾನ ಭದ್ರತಾ ಪಡೆಯು ಈ ಪ್ರದೇಶಗಳಲ್ಲಿ ಜಂಟಿಯಾಗಿ ವಾಯುದಾಳಿ ನಡೆಸಿದವು. ಆಗಸ್ಟ್ 31ರ ಹೊತ್ತಿಗೆ ಈ ಜಂಟಿ ಕಾರ್ಯಾಚರಣೆ ಅಂತ್ಯವಾಗುವುದರಿಂದ ಆತಂಕ ಮತ್ತಷ್ಟು ಹೆಚ್ಚಿದೆ. ಇನ್ನೊಂದು ಕಡೆ ಅಫ್ಘಾನಿಸ್ತಾನವು ಮತ್ತೆ ವಿದೇಶಿ ಜಿಹಾದಿಗಳಿಗೆ ಪಶ್ಚಿಮದ ವಿರುದ್ಧ ಸಂಚು ರೂಪಿಸುವ ನೆಲೆಯಾಗುವುದಿಲ್ಲ ಎಂದು ಖಚಿತಪಡಿಸಿದ ಹಿನ್ನೆಲೆ ಅಮೆರಿಕದ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ.

ತಾಲಿಬಾನ್ ಅಧಿಕಾರ ಕಳೆದುಕೊಂಡಿದ್ದು ಯಾವಾಗ?

ತಾಲಿಬಾನ್ ಅಧಿಕಾರ ಕಳೆದುಕೊಂಡಿದ್ದು ಯಾವಾಗ?

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಮೇಲೆ ಸಪ್ಟೆಂಬರ್ 11ರಂದು ಓಸಾಮಾ ಬಿನ್ ಲಾಡೆನ್ ಮತ್ತು ಅಲ್ ಖೈದಾ ನಡೆಸಿದ ದಾಳಿಯ ಬೆನ್ನಲ್ಲೇ ವಿಶ್ವದ ದೊಡ್ಡಣ್ಣ ಉಗ್ರ ಸಂಘಟನೆ ವಿರುದ್ಧ ಸಮರ ಸಾರಿತು. ಕಳೆದ 2001ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಮೇಲೆ ದಾಳಿ ನಡೆಸಿ ಅಧಿಕಾರವನ್ನು ಕಿತ್ತುಕೊಳ್ಳಲಾಯಿತು. ಅಫ್ಘಾನಿಸ್ತಾನದಲ್ಲಿ ಭದ್ರತಾ ವ್ಯವಸ್ಥೆಯ ಶಕ್ತಿಯಾಗಿದ್ದ ಯುಎಸ್ ತನ್ನ ಸೇನಾಪಡೆಯನ್ನು ವಾಪಸ್ ಕರೆಸಿಕೊಂಡಿದೆ. ಈ ತಿಂಗಳ ಆರಂಭದಲ್ಲಿ ಅಫ್ಘಾನಿಸ್ತಾನದಲ್ಲಿ ಯುಎಸ್ ಕಾರ್ಯಾಚರಣೆಯ ಕೇಂದ್ರವಾಗಿದ್ದ ಬಾಗ್ರಾಮ್ ವಾಯುನೆಲೆಯಿಂದ ಅಮೆರಿಕಾದ ಸೇನೆಯು ನಿರ್ಗಮಿಸಿದೆ.

English summary
Taliban Could Seize Control Of The Afghanistan Within Six Months, Says US intelligence analysts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X