ಚೀನಾ ಸೇನೆಯ ದಶಾವತಾರ ಕಂಡು ಬೆಚ್ಚಿಬಿತ್ತಾ ತೈವಾನ್?

ತೈಪೆ: ಅಮೆರಿಕ ಮತ್ತು ಚೀನಾ ನಡುವಿನ ತಿಕ್ಕಾಟದಲ್ಲಿ ಮೆತ್ತಗಾದ ತೈವಾನ್ ಈಗ ಚೀನಾದ ಸೇನೆ ಆರ್ಭಟ ನೋಡಿ ಬೆಚ್ಚಿಬಿದ್ದಿದೆ ಅಂತಾ ಕಾಣುತ್ತದೆ. ಇದೇ ಕಾರಣಕ್ಕೆ ಇಷ್ಟುದಿನ ಯುದ್ಧಕ್ಕೂ ಸಿದ್ಧ ಎನ್ನುತ್ತಿದ್ದ ದ್ವೀಪ ರಾಷ್ಟ್ರ ತೈವಾನ್, ಇದೀಗ ದಿಢೀರ್ ಶಾಂತಿ ಮಂತ್ರ ಜಪಿಸುತ್ತಿದೆ. ಅದರಲ್ಲೂ ಅಧ್ಯಕ್ಷೆಯ ಮಾತು ಯುದ್ಧದ ಸಹವಾಸ ಬೇಡ ಎನ್ನುವಂತಿದೆ. ಹಾಗಾದ್ರೆ ಚೀನಾ ಸೇನೆಗೆ ತೈವಾನ್ ಹೆದರಿದೆಯಾ?

ಅತ್ತ ಅಮೆರಿಕ ಸೇನೆ ತೈವಾನ್ ಪರ ನಿಂತಿದೆ. ಇತ್ತ ಚೀನಾ ಅದೇ ವಿಚಾರ ಹಿಡಿದು ತೈವಾನ್ ನಾಯಕರಿಗೆ ಎಚ್ಚರಿಕೆ ನೀಡುತ್ತಿದೆ. ಬೀಜಿಂಗ್ (Beijing) ಪದೇ ಪದೆ ತೈವಾನ್‌ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಇದೇ ಹೊತ್ತಲ್ಲಿ ತೈವಾನ್‌ಗೆ ಅಮೆರಿಕ 4 ಸಾವಿರ ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾಗಿದೆ ಎಂಬ ಮಾತು ಓಡಾಡ್ತಿದೆ. ಆದರೆ ಇಲ್ಲಿ ನೋಡಿದರೆ ತೈವಾನ್ ಅಧ್ಯಕ್ಷರು ನಮಗೆ ಯುದ್ಧ ಬೇಡ ಶಾಂತಿಯೇ ಸಾಕು ಅಂತಿದ್ದಾರೆ. ಹಾಗಾದ್ರೆ ದಿಢೀರ್ ಏನಾಗಿದೆ ತೈವಾನ್‌ಗೆ? ಹೆದರಿದ್ದು ಯಾಕೆ? ತಿಳಿಯೋಣ ಬನ್ನಿ.

Taiwan president Tsai Ing-wen need peace not war

ರಕ್ತಸಿಕ್ತ ಯುದ್ಧ ಬೇಡ ಅಂತು ತೈವಾನ್!

ಯುದ್ಧ ಒಂದು ಆಯ್ಕೆಯಾಗಿಲ್ಲ ಯಾರೇ ಆಗಲಿ ಶಾಂತಿ ಬಿಟ್ಟು ಯುದ್ಧದ ಮೂಲಕ ಏಕಪಕ್ಷೀಯ ಕ್ರಮವನ್ನ ಹೇರಲು ಆಗಲ್ಲ, ಯಥಾಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ. ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳುವುದೇ ಇಡೀ ಜಗತ್ತು & ತೈವಾನ್ ಎರಡಕ್ಕೂ ಒಮ್ಮತವಾಗಿದೆ ಎಂದಿದ್ದಾರೆ ತೈವಾನ್ ಅಧ್ಯಕ್ಷೆ. ಈ ಮೂಲಕ ಚೀನಾ ಜೊತೆಗೆ ನಾವು ಯುದ್ಧ ಮಾಡಲು ಸಿದ್ಧರಿಲ್ಲ ಎನ್ನುವ ಸಂದೇಶ ನೇರವಾಗಿ ತೈವಾನ್ ಅಧ್ಯಕ್ಷರ ಬಾಯಿಂದ ಬಂದಿದೆ. ಇಷ್ಟಾದರೂ ಚೀನಾಗೆ ತೈವಾನ್ ಮೇಲಿನ ಡೌಟ್ ಕಡಿಮೆಯಾಗುತ್ತಿಲ್ಲ.

ಅಮೆರಿಕದ ಸಹವಾಸದಿಂದ ಕಂಟಕ?

ಅಷ್ಟಕ್ಕೂ ತೈವಾನ್ ನಾಯಕರು ಅಮೆರಿಕದ ಸಹವಾಸ ಮಾಡಿ ಪರದಾಡುತ್ತಿದ್ದಾರೆ. ಯಾಕಂದ್ರೆ ಅಮೆರಿಕ ಬೃಹತ್ ಮೊತ್ತದ ಸಹಾಯ ಮಾಡಲು ಮುಂದೆ ಬಂದಿದ್ದು ತೈವಾನ್ ಸೇನೆಗೆ ಚೀನಾ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರವನ್ನ ಪೂರೈಕೆ ಮಾಡುತ್ತಿದೆ. ಇದು ಚೀನಾ ಸೇನೆ ಕೆರಳಿಸಿದ್ದು, ತೈವಾನ್ ಸರ್ಕಾರವನ್ನ ಹೊಸಕಿ ಹಾಕುವ ಎಚ್ಚರಿಕೆ ನೀಡಿತ್ತು. ಈ ರೀತಿ ಚೀನಾ ಉಗ್ರವಾದ ಹೇಳಿಕೆ ನೀಡಿ ಕೆಲವೇ ದಿನದಲ್ಲಿ ತೈವಾನ್ ಶಾಂತಿ ಮಂತ್ರ ಜಪಿಸುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದೆ.

Taiwan president Tsai Ing-wen need peace not war

3ನೇ ಮಹಾಯುದ್ಧದ ಆತಂಕ ಏಕೆ?

ಚೀನಾ ರೊಚ್ಚಿಗೆದ್ದಿದೆ ಅಮೆರಿಕ ವಿರುದ್ಧದ ಸಿಟ್ಟಲ್ಲಿ ಏನೇನೋ ಮಾಡಲು ಹೋಗುತ್ತಿದೆ. ಭೀಕರ ಸಮರಕ್ಕೆ ಚೀನಾ ಸೇನೆ ಸಿದ್ಧತೆ ನಡೆಸಿದೆ. ಇದರ ಮೊದಲ ಭಾಗವಾಗಿ ತೈವಾನ್ (Taiwan) ಗಡಿ ಆಕ್ರಮಿಸಿಕೊಳ್ತಿದೆ. ದ್ವೀಪರಾಷ್ಟ್ರದ ಸುತ್ತಲೂ ನೌಕಾಪಡೆಯ ಯುದ್ಧನೌಕೆ ಹಾಗೂ ಯುದ್ಧ ವಿಮಾನಗಳನ್ನ ರವಾನಿಸಿರುವ ಚೀನಾ, ಮತ್ತಷ್ಟು ಭೀಕರ ಅಸ್ತ್ರಗಳನ್ನ ತೈವಾನ್ ಗಡಿಗೆ ಸಾಗಿಸುತ್ತಿದೆ. ಇದೇ ಹೊತ್ತಲ್ಲಿ ತೈವಾನ್‌ಗೆ ಅಮೆರಿಕ ಬೆಂಬಲ ನೀಡಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಇದು 3ನೇ ಮಹಾಯುದ್ಧದ ಆತಂಕ ಮೂಡುವಂತೆ ಮಾಡಿದೆ.

ಸಮಸ್ಯೆ ಶುರುವಾಗಿದ್ದು ಎಲ್ಲಿಂದ?

ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಈಗಲೂ ಕಿತಾಪತಿ ಮಾಡುತ್ತಿದೆ. ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದಷ್ಟೇ ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನ ಪ್ರಯಾಣಿಸಿಕೊಂಡು ಹೋಗಿತ್ತು ಅಮೆರಿಕ. ಬಳಿಕ ಚೀನಾ ತನ್ನ ಶಕ್ತಿ ಏನು ಅಂತಾ ಶತ್ರು ರಾಷ್ಟ್ರ ತೈವಾನ್‌ಗೆ ತೋರಿಸುತ್ತಲೇ ಇದೆ. ತೈವಾನ್ ವಿರುದ್ಧ ನೇರವಾಗಿ ತೊಡೆತಟ್ಟಿ, ರಣವೀಳ್ಯ ನೀಡಿದೆ ಚೀನಾ. ಹೀಗಾಗಿ ತೈವಾನ್ ಮತ್ತು ಚೀನಾ ಗಡಿಯಲ್ಲಿ ಯಾರೂ ಊಹಿಸದ ಸ್ಥಿತಿ ನಿರ್ಮಾಣವಾಗಿದೆ.

Taiwan president Tsai Ing-wen need peace not war

ಒಟ್ನಲ್ಲಿ ಚೀನಾ ಮತ್ತು ತೈವಾನ್ ಜಗಳ ಜೋರಾಗಿದೆ, ಆದರೆ ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿ ಅಮೆರಿಕ ಭಾರಿ ಲಾಭ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೂಡ ಇದೆ. ತನ್ನ ಅಕ್ಕಪಕ್ಕದ ರಾಷ್ಟ್ರಗಳು ಅಮೆರಿಕದ ಜೊತೆಗೆ ಸಂಬಂಧ ಬೆಸೆಯುವುದು ಚೀನಾ ಸೇನೆಗೆ ಇಷ್ಟವಿಲ್ಲ. ಅದ್ರಲ್ಲೂ ತೈವಾನ್ ತನ್ನದೇ ದೇಶ ಎನ್ನುತ್ತಿದೆ ಚೀನಾ. ಈ ಹೊತ್ತಲ್ಲಿ ತೈವಾನ್ ಕೂಡ ನನಗೆ ಯುದ್ಧ ಬೇಡ, ಶಾಂತಿ ಸಾಕು ಎಂದಿರುವುದು ಆಶ್ಚರ್ಯ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+