ಸನ್ ಲೈಟ್ ಅಲ್ಲ, ಸಿನ್ ಲೈಟ್: ಜರ್ಮನಿಯಲ್ಲೊಬ್ಬ ಕೃತಕ ಸೂರ್ಯ!
ಜರ್ಮನಿಯ ಕೃತಕ ಸೂರ್ಯನ ಹೊಸ ಪ್ರಯೋಗವನ್ನು ಸಿನ್ ಲೈಟ್ ಎಂದು ಕರೆಯಲಾಗಿದ್ದು, ಜರ್ಮನ್ ಏರೋಸ್ಪೇಸ್ ಸೆಂಟರ್ (ಡಿಎಲ್ ಆರ್) ವಿಜ್ಞಾನಿಗಳು ಇದನ್ನು ವಿನ್ಯಾಸಗೊಳಿಸಿದ್ದಾರೆ.
ಯುಲಿಚ್ (ಜರ್ಮನಿ), ಮೇ 09: ಜರ್ಮನಿಯ ಯುಲಿಚ್ ಎಂಬಲ್ಲಿ ಕೃತಕ ಸೂರ್ಯನೊಬ್ಬ ತಲೆಯೆತ್ತಿದ್ದಾನೆ! ಮಾರ್ಚ್ 2017 ರಲ್ಲಿ ಪ್ರಪ್ರಥಮ ಬಾರಿಗೆ ಬೆಳಕನ್ನು ಚೆಲ್ಲಿದ ಈ ಸೂರ್ಯನನ್ನು 149 ಇಂಡಸ್ಟ್ರೀಯಲ್ ಗ್ರೇಡ್ ಫಿಲ್ಮ್ ಪ್ರಾಜೆಕ್ಟರ್ ಬೆಳಕಿನಿಂದ ನಿರ್ಮಿಸಲಾಗಿದೆ.
ಪರಿಸರ ಸ್ನೇಹಿಯಾದ ಪರ್ಯಾಯ ಶಕ್ತಿ ಮೂಲದ ಹುಡುಕಾಟದ ಪ್ರತಿಫಲವೇ ಈ ಕೃತಕ ಸೂರ್ಯ!
ಈ ಹೊಸ ಪ್ರಯೋಗವನ್ನು ಸಿನ್ ಲೈಟ್ ಎಂದು ಕರೆಯಲಾಗಿದ್ದು, ಜರ್ಮನ್ ಏರೋಸ್ಪೇಸ್ ಸೆಂಟರ್ (ಡಿಎಲ್ ಆರ್) ವಿಜ್ಞಾನಿಗಳು ಇದನ್ನು ವಿನ್ಯಾಸಗೊಳಿಸಿದ್ದಾರೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಇದು ಸಾಮಾನ್ಯ ಬಲ್ಬ್ ವೊಂದು ನೀಡುವ ಸರಾಸರಿ ಬೆಳಕಿನ 4000 ಪಟ್ಟು ಹೆಚ್ಚು ಬೆಳಕನ್ನು ನೀಡಬಲ್ಲದು![ಹೊಸ ಸೌರಮಂಡಲ ಆವಿಷ್ಕಾರ, ನಾಸಾದಿಂದ ಹೊಸ ಬೆಳಕು]

ಈ ಸೂರ್ಯನ ಶಾಖ ಗರಿಷ್ಠ 3000 ಡಿಗ್ರಿ ಸೆಲ್ಷಿಯಸ್ ಅನ್ನೂ ತಲುಪಬಲ್ಲದು. ಸಿನ್ ಲೈಟ್ ಎಷ್ಟು ಕಡಿಮೆ ಪ್ರಮಾಣದ ವಿದ್ಯುತ್ ಬಳಸುತ್ತದೆ ಎಂದರೆ ನಾಲ್ಕು ವ್ಯಕ್ತಿಗಳು ತಮ್ಮ ನಿತ್ಯದ ಉಪಯೋಗಕ್ಕೆ ಬಳಸುವ ವಿದ್ಯುತ್ ಅಷ್ಟನ್ನೇ ಇದು ಬಳಸಿಕೊಳ್ಳುತ್ತದೆ! ಇದರಲ್ಲಿ ಮೂರು ವಿಕಿರಣ ಕೋಣೆಗಳಿವೆ. ಈ ಕೋಣೆಗಳು 380 ಕಿ.ವ್ಯಾ. ನಷ್ಟು ಸೌರ ವಿಕಿರಣಗಳನ್ನು ಉತ್ಪತ್ತಿ ಮಾಡಬಲ್ಲದು.[ನಾಸಾ ಪ್ರಕಟಿಸಲಿರುವ ಹೊಸ ಆವಿಷ್ಕಾರಕ್ಕೆ ಕಾದು ಕುಳಿತಿದೆ ಜಗತ್ತು]
ಸಿನ್ ಲೈಟ್ ಅನ್ನು ಅಗತ್ಯಕ್ಕೆ ತಕ್ಕಂತೆ ಸಣ್ಣ ಮತ್ತು ಬೃಹತ್ ಉಪಯೋಗಕ್ಕೆ ಬಳಸಬಹುದಾಗಿದೆ. ಮಧ್ಯ ಯುರೋಪಿನಲ್ಲಿ ಸೂರ್ಯ ಕಿರಣದ ಅಭಾವ ಹೆಚ್ಚಿರುವುದರಿಂದ ಈ ಕೃತಕ ಸೂರ್ಯ ಹೆಚ್ಚು ಉಪಯೋಗಕ್ಕೆ ಬರುತ್ತಾನೆ!
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications