• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಲಂಕಾ ಸುಪ್ರೀಂ ಕೋರ್ಟ್ ನಿಂದ ಅಧ್ಯಕ್ಷರ ಆದೇಶಕ್ಕೆ ತಡೆ

|

ಸಂಸತ್ ವಿಸರ್ಜನೆಗೆ ಹಾಗೂ ಅವಧಿಗೂ ಮುನ್ನ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ನೀಡಿದ್ದ ಆದೇಶಕ್ಕೆ ಶ್ರೀಲಂಕಾದ ಸುಪ್ರೀಂ ಕೋರ್ಟ್ ಮಂಗಳವಾರದಂದು ತಡೆ ನೀಡಿದೆ. ಇದರಿಂದ ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ ಹೈ ಡ್ರಾಮಾಗೆ ಮತ್ತೊಂದು ಭಾರೀ ತಿರುವು ಸಿಕ್ಕಂತಾಗಿದೆ.

ಶ್ರೀಲಂಕಾದಲ್ಲಿ ಅವಧಿಗೆ ಮುನ್ನವೇ ಸಂಸತ್ ವಿಸರ್ಜನೆ: ಜ.5ರಂದು ಚುನಾವಣೆ

ಅಕ್ಟೋಬರ್ 26ನೇ ತಾರೀಕು ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ಅವರನ್ನು ಪದಚ್ಯುತಗೊಳಿಸಿದ ಶ್ರೀಲಂಕಾದ ಅಧ್ಯಕ್ಷ ಸಿರಿಸೇನ , ಆ ಸ್ಥಾನಕ್ಕೆ ಮಹಿಂದ ರಾಜಪಕ್ಸೆ ಅವರನ್ನು ನೇಮಿಸಿದ್ದರು. ಈ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದು ಸಾಂವಿಧಾನಿಕ ವಿರೋಧಿ ನಡೆ ಎಂದು ಸ್ಪೀಕರ್ ಕರು ಜಯಸೂರ್ಯ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.

ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ, ಮುಖ್ಯ ನ್ಯಾಯಮೂರ್ತಿ ನಳಿನ್ ಪೆರೇರಾ ನೇತೃತ್ವದ ಪೀಠವು ಐತಿಹಾಸಿಕ ಎನಿಸಿದ ಈ ತೀರ್ಪನ್ನು ನೀಡಿತು. ಈ ತೀರ್ಪಿನ ಬಗ್ಗೆ ಭಾರೀ ಕುತೂಹಲ ಇತ್ತು. ಈ ವೇಳೆ ಕೋರ್ಟ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಪೊಲೀಸರು, ಕಮ್ಯಾಂಡೋಗಳನ್ನು ಭದ್ರತೆಗಾಗಿ ನೀಯೋಜಿಸಲಾಗಿತ್ತು.

English summary
Sri Lanka’s Supreme Court Tuesday overturned President Maithripala Sirisena’s sacking of parliament and ordered a halt to preparations for snap elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X