ಶ್ರೀಲಂಕಾ ಉಗ್ರ ದಾಳಿಯಲ್ಲಿ ಮೃತಪಟ್ಟವರು 253 ಮಂದಿ; 359 ಅಲ್ಲ
ಕೊಲಂಬೋ (ಶ್ರೀಲಂಕಾ), ಏಪ್ರಿಲ್ 26: ಶ್ರೀಲಂಕಾದಲ್ಲಿ ಏಪ್ರಿಲ್ 25ರಂದು ತಿಳಿಸಿರುವ ಮಾಹಿತಿ ಪ್ರಕಾರ, ಈಸ್ಟರ್ ಭಾನುವಾರದಂದು ನಡೆದ ಸರಣಿ ಭಯೋತ್ಪಾದನೆ ದಾಳಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 253ರಷ್ಟು ಸಂಖ್ಯೆಯಲ್ಲಿ ಸಾವು ಆಗಿರಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದಕ್ಕೂ ಮುನ್ನ ಅಧಿಕಾರಿಗಳು, ಒಂಬತ್ತು ಆತ್ಮಹತ್ಯಾ ಬಾಂಬರ್ ಗಳು ಎಂದಿದ್ದರು. ಸ್ಥಳೀಯ ಇಸ್ಲಾಮ್ ಮೂಲಭೂತವಾದಿ ಗುಂಪು ನ್ಯಾಷನಲ್ ತೌಹೀದ್ ಜಮಾತ್ ಕೈವಾಡ ಇದೆ ಎಂದು ತಿಳಿಸಿತ್ತು. ಈ ದುರ್ಘಟನೆಯಲ್ಲಿ 359 ಮಂದಿ ಸಾವನ್ನಪ್ಪಿ, 500ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದಾಗಿ ಮಾಹಿತಿ ನೀಡಲಾಗಿತ್ತು.
ಆದರೆ, ಅರೋಗ್ಯ ಸೇವೆಯ ಪ್ರಧಾನ ನಿರ್ದೇಶಕ ಅನಿಲ್ ಜಸಿಂಘೆ ಅವರ ಪ್ರಕಾರ, ತಪ್ಪಾದ ಲೆಕ್ಕಾಚಾರದ ಕಾರಣಕ್ಕೆ ಮೃತರ ಸಂಖ್ಯೆ ಹೆಚ್ಚಾಗಿ ತಿಳಿಸಲಾಗಿದೆ. ಅಂದಾಜಿನ ಪ್ರಕಾರ ಒಟ್ಟಾರೆಯಾಗಿ ಮೃತರ ಸಂಖ್ಯೆ 253 ಇರಬಹುದು, 359 ಅಲ್ಲ. ಇನ್ನು ಕನಿಷ್ಠ 485 ಮಂದಿ ಗಾಯಾಳುಗಳಾಗಿ ಆಸ್ಪತ್ರೆ ಸೇರಿದ್ದರು. ಅದರಲ್ಲಿ ಆರು ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಗುರುವಾರದ ಬೆಳಗ್ಗೆ 10 ಗಂಟೆ ಹೊತ್ತಿಗೆ ಆಸ್ಪತ್ರೆಯಲ್ಲಿನ ಗಾಯಾಳುಗಳ ಸಂಖ್ಯೆ 149ಕ್ಕೆ ಇಳಿಕೆ ಆಗಿದೆ. 6 ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಏಪ್ರಿಲ್ 22ನೇ ತಾರೀಕು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಅಂದಾಜು 280 ಮಂದಿ ಸಾವನ್ನಪ್ಪಿದ್ದರು. "ದೊಡ್ಡ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿದ್ದರಿಂದ ಲೆಕ್ಕ ಹಾಕುವುದು ಸಲೀಸಿರಲಿಲ್ಲ. ಆಗ ತಿಳಿಸಿದ ಸಂಖ್ಯೆ ಅಂದಾಜಿನದಾಗಿತ್ತು ಎಂದು ಜಸಿಂಘೆ ಹೇಳಿದ್ದಾರೆ.
ಮೂರು ಹೋಟೆಲ್ ಸ್ಫೋಟದಲ್ಲಿ ಮೃತಪಟ್ಟವರ ದೇಹಗಳು ಗುರುತಿಸಲು ಸಾಧ್ಯವಿಲ್ಲದಂತೆ ಆಗಿದ್ದವು. ಚರ್ಚ್ ಸ್ಫೋಟದಲ್ಲಿ ಮೃತಪಟ್ಟವರಿಗಿಂತ ಹೆಚ್ಚು ಹಾನಿಯಾಗಿತ್ತು ಎಂದಿದ್ದಾರೆ. ಇನ್ನು ವಿದೇಶಾಂಗ ಸಚಿವಾಲಯದ ಪ್ರಕಾರ ವಿದೇಶೀಯರು 40 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಭಾರತೀಯರು 11 ಮಂದಿ.












Click it and Unblock the Notifications