ಶ್ರೀಲಂಕಾದ ಮೊದಲ ಉಪಗ್ರಹದ ಹೆಸರು 'ರಾವಣ-1'!

ಕೊಲಂಬೋ, ಜೂನ್ 20: ದ್ವೀಪ ರಾಷ್ಟ್ರ ಶ್ರೀಲಂಕಾ ತನ್ನ ಮೊದಲ ಉಪಗ್ರಹವನ್ನು ಗುರುವಾರ ಉಡಾವಣೆ ಮಾಡಿದೆ. ಅದಕ್ಕೆ ತನ್ನ 'ಹೀರೋ', ಹಿಂದೂ ಪುರಾಣ 'ರಾಮಾಯಣ'ದಲ್ಲಿ ಬರುವ ಖಳನಾಯಕ ರಾವಣನ ಹೆಸರಿಟ್ಟಿದೆ.

ಶ್ರೀಲಂಕಾದ ಇಬ್ಬರು ಸ್ಥಳೀಯ ಎಂಜಿನಿಯರ್‌ಗಳು ಈ ಉಪಗ್ರಹವನ್ನು ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಜಪಾನ್ ಮತ್ತು ನೇಪಾಳದ ಇತರೆ ಎರಡು ಉಪಗ್ರಹಗಳೊಂದಿಗೆ 'ರಾವಣ-1' ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

11.3 ಸೆಂ.ಮೀ. *10 ಸೆಂ.ಮೀ *10 ಸೆಂ.ಮೀ. ಅಳತೆ ಹಾಗೂ ಸುಮಾರು 1.05 ಕೆಜಿ ತೂಕವಿರುವ ಈ ಪುಟಾಣಿ ಉಪಗ್ರಹವನ್ನು ಸೋಮವಾರ ಶ್ರೀಲಂಕಾದ ಕಾಲಮಾನ ಮಧ್ಯಾಹ್ನ 3.45ಕ್ಕೆ ಉಡಾವಣೆ ಮಾಡಲಾಯಿತು.

Sri Lanka launched its first satellite Ravana-1

ಜಪಾನ್‌ನ ಕ್ಯೂಷು ತಾಂತ್ರಿಕ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ತಾರಿಂದು ದಯಾರತ್ನೆ ಮತ್ತು ದುಲಾನಿ ಚಮಿಕ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಿದ್ದಾರೆ.

ಶ್ರೀಲಂಕಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಚಿತ್ರಗಳನ್ನು ಸೆರೆಹಿಡಿಯುವುದು, ಸೇರಿದಂತೆ ಐದು ವಿವಿಧ ಯೋಜನೆಗಳನ್ನು ಈ ಉಪಗ್ರಹ ನಿಭಾಯಿಸುವ ನಿರೀಕ್ಷೆಯಿದೆ. ಇದು ಕನಿಷ್ಠ ಒಂದೂವರೆ ವರ್ಷದ ಜೀವಿತಾವಧಿ ಹೊಂದಿದ್ದು, ಐದು ವರ್ಷದವರೆಗೂ ಬದುಕಬಲ್ಲದು.

ಈ ಉಪಗ್ರಹವನ್ನು ಫೆಬ್ರವರಿ 18ರಂದು ಜಪಾನ್ ಬಾಹ್ಯಾಕಾಶ ಸಂಸ್ಥೆಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿತ್ತು. ಬಳಿಕ ಏಪ್ರಿಲ್‌ನಲ್ಲಿ ಐಎಸ್‌ಎಸ್‌ಗೆ ರವಾನಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+