ಟಿಪ್ಪು ಸುಲ್ತಾನ್ ಖಡ್ಗ ಭಾರಿ ಬೆಲೆ ಹರಾಜು

Sword of Tipu sold for 98,500 pounds
ಲಂಡನ್, ಅ.11: ಮೈಸೂರು ಹುಲಿ ಎಂದೇ ಖ್ಯಾತಿಗಳಿಸಿರುವ ಟಿಪ್ಪುಸುಲ್ತಾನ್ ಅವರಿಗೆ ಸೇರಿದ್ದ ಅನೇಕ ಮಹತ್ವದ ವಸ್ತುಗಳನ್ನು ಹರಾಜು ಹಾಕಲಾಗಿದೆ. ಈ ಹರಾಜಿನಲ್ಲಿ ಒಟ್ಟಾರೆಯಾಗಿ 3.86 ಕೋಟಿ ರು ಸಂಗ್ರಹವಾಗಿದೆ. ಈ ವಸ್ತುಗಳಲ್ಲಿ ಟಿಪ್ಪುಗೆ ಸೇರಿದ್ದ ಖಡ್ಗ ಪ್ರಮುಖವಾಗಿದ್ದು, ಖಡ್ಗ 97 ಲಕ್ಷ ರು ಗೆ ಹರಾಜಾಗಿದೆ. ಟೆಲಿಫೋನ್ ಮೂಲಕ ಓರ್ವ ಅಜ್ಞಾತ ಬಿಡ್ಡರ್ ಈ ಖಡ್ಗವನ್ನು ಖರೀದಿಸಿದ್ದಾರೆ ಎಂದು ಹರಾಜು ಸಂಸ್ಥೆ ತಿಳಿಸಿದೆ.

ಟಿಪ್ಪುಸುಲ್ತಾನ್ ಕಾಲದ 11 ಅಪೂರ್ವ ಕಲಾಕೃತಿಗಳನ್ನೂ ಈ ಖಡ್ಗದ ಜೊತೆಗೆ ಹರಾಜು ಹಾಕಲಾಗಿದೆ. ಇದರ ಜೊತೆಗೆ 11 ಬೋರ್ ಬೆಳ್ಳಿ ಲೇಪಿತ ಡಕ್ ಗನ್ ಅನ್ನೂ ಹರಾಜು ಹಾಕಲಾಗಿದೆ. ಟಿಪ್ಪುವಿನ ಈ ವಸ್ತುಗಳ ಜೊತೆಗೆ ಭಾರತದ ಅಮೂಲ್ಯ ಕಲಾಕೃತಿಗಳನ್ನೂ ಹರಾಜಿಗೆ ಹಾಕಲಾಗಿದೆ. ಇವುಗಳು 18.25 ಕೋಟಿ ರು ಗೆ ಹರಾಜಾಗಿವೆ. ಇವು ಭಾರತದ ಹಲವಾರು ರಾಜರಿಗೆ ಸೇರಿದ ಕಲಾಕೃತಿಗಳಾಗಿವೆ.

ಚಿನ್ನ ಲೇಪಿತ ಟ್ರೇ ಮತ್ತು ಕ್ಯಾಸ್ಕೆಟ್ 6.58 ಕೋಟಿ ರುಗೆ ಹರಾಜಾಗಿದೆ. ಭಾರತಕ್ಕೆ ಸೇರಿದ 90 ರೀತಿಯ ಕಲಾಕೃತಿಗಳು, ಅಪೂರ್ವ ವಸ್ತುಗಳನ್ನು ಕಳೆದ ವಾರ ಹರಾಜಿಗೆ ಹಾಕಲಾಗಿದೆ.

ಇಂಪೀರಿಯಲ್ ಇಂಡಿಯಾ ಕಲೆಕ್ಷನ್ ಎಂಬ ಹೆಸರಿನಲ್ಲಿ ನಡೆದ ಈ ಹರಾಜಿನಲ್ಲಿ ಮೊಘಲರ ಕಾಲದ ಚಿನ್ನದಿಂದ ಅಲಂಕರಿಸಿದ ಟ್ರೇ, ರಾಮ ಮತ್ತು ಸೀತೆಯ ಚಿಕಣಿ ಕಲಾಕೃತಿ ಸಹಿತ 90ಕ್ಕೂ ಹೆಚ್ಚು ಪುರಾತನ ವಸ್ತುಗಳು ಹರಾಜಾಗಿದೆ.

ಈ ಪೈಕಿ ಟಿಪ್ಪುವಿನ ಖಡ್ಗ ಮುಖ್ಯ ಆಕರ್ಷಣೆ. ಸುಮಾರು 500 ವರ್ಷ ಹಿಂದಿನ ವಸ್ತುಗಳನ್ನು ಸೊದೆಬಿ ಹರಾಜು ಮಾಡಿದೆ. ಟಿಪ್ಪುವಿನ ಖಡ್ಗಕ್ಕೆ ಬ್ರಿಟಿಷರ ಕಾಲದ ಅಲಗನ್ನು ಅಳವಡಿಸಲಾಗಿದೆ ಹಾಗೂ ಅದರಲ್ಲಿ ಟಿಪ್ಪುವಿನ 'ಬುಬ್ರಿ' (ಹುಲಿಯ ಪಂಜ)ರಾಜಮುದ್ರೆಯಿದೆ. ಇದು 80,000ದಿಂದ 1,20,000 ಪೌಂಡಿಗೆ ಹರಾಜಾಗುವ ನಿರೀಕ್ಷೆಯಿತ್ತು. ಒಟ್ಟಾರೆ 66,2500 ಪೌಂಡ್ಸ್ ಸಿಕ್ಕಿದೆ. ಟಿಪ್ಪು ಖಡ್ಗ 98, 500ಪೌಂಡ್ ಗೆ ಹರಾಜಾಗಿದೆ ಎಂದು ಹರಾಜು ಸಂಸ್ಥೆ ನಿರ್ದೇಶಕ ಬೆನೆಡಿಕ್ಟ್ ಕಾರ್ಟರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+