ಕೊಲಂಬಿಯಾದಲ್ಲಿ 160 ಪ್ರವಾಸಿಗರಿದ್ದ ದೋಣಿ ಮುಳುಗಡೆ
ಕೊಲಂಬಿಯಾ, ಜೂನ್ 26: ಈಶಾನ್ಯ ಕೊಲಂಬಿಯಾದಲ್ಲಿ ನಡೆದ ಭೀಕರ ದೋಣಿ ದುರಂತದಲ್ಲಿ 6 ಜನ ಸಾವಿಗೀಡಾಗಿದ್ದು 31 ಜನ ಕಣ್ಮರೆಯಾಗಿದ್ದಾರೆ.
ಸುಮಾರು 160 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಮೂರಂತಸ್ತಿನ ದೋಣಿ ಭಾನುವಾರ ಎಲ್ ಪೆನೊಲ್ ಜಲಾಶಯದಲ್ಲಿ ಮುಳುಗಡೆಯಾಗಿತ್ತು. ದೋಣಿಯಲ್ಲಿದ್ದ ಪ್ರಯಾಣಿಕರನ್ನು ಸ್ಥಳದಲ್ಲಿದ್ದ ಇತರ ಬೋಟ್ ನವರು, ಅಗ್ನಿಶಾಮಕ ದಳದವರು ಹಾಗೂ ಹೆಲಿಕಾಫ್ಟರ್ ಗಳ ಮೂಲಕ ರಕ್ಷಣೆ ಮಾಡಲಾಗಿತ್ತು.

ಹೀಗಿದ್ದೂ 6 ಜನ ಸಾವಿಗೀಡಾಗಿದ್ದಾರೆ. ಇನ್ನೂ 31 ಜನ ನಾಪತ್ತೆಯಾಗಿದ್ದಾರೆ. ಬೋಟ್ ಒಮ್ಮಿಂದೊಮ್ಮೆಲೇ ಮುಳುಗಿದ್ದರಿಂದ ಅಪಾರ ಸಾವು ನೋವು ಸಂಭವಿಸಿದೆ.
"ಅಂದಾಜು 160 ಜನರಲ್ಲಿ 122 ಜನ ದಡ ಮುಟ್ಟಿದ್ದಾರೆ ಅಥವಾ ರಕ್ಷಣೆ ಮಾಡಲಾಗಿದೆ. ಇನ್ನು 6 ಜನರ ಮೃತ ದೇಹ ಸಿಕ್ಕಿದ್ದು ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ," ಎಂದು ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುವೆಲ್ ಸ್ಯಾಂಟೋಸ್ ಹೇಳಿದ್ದಾರೆ.
ಇನ್ನು ಬೋಟ್ ಗೆ 160ಕ್ಕೂ ಹೆಚ್ಚಿನ ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಇತ್ತು ಎನ್ನಲಾಗಿದ್ದು ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.












Click it and Unblock the Notifications