ಸಿಂಗಪುರದ ಬಜೆಟ್ಟಿನಲ್ಲಿ ನೌಕರರಿಗೆ ಭರ್ಜರಿ ಬೋನಸ್

ಸಿಂಗಪುರ, ಫೆಬ್ರವರಿ 20 : ಪ್ರತಿಯೊಬ್ಬ ನಾಯಕನೂ ತನ್ನ ರಾಜ್ಯ ಸಿಂಗಪುರದಂತೆ ಕಂಗೊಳಿಸಬೇಕು ಎಂದು ನಿರೀಕ್ಷಿಸುತ್ತಾನೆ. ಆದರೆ, ಅಭಿವೃದ್ಧಿಯ ವಿಷಯಕ್ಕೆ ಬಂದರೆ ಮಾತ್ರ ಸಿಂಗಪುರದ ಸಹವಾಸವೇ ಬೇಡ ಎಂದೂ ಹೇಳುತ್ತಾನೆ.

ಆದರೆ, ಭಾರತದಲ್ಲಿಯ ಪ್ರತಿಯೊಬ್ಬ ನೌಕರನೂ ತಾನು ಸಿಂಗಪುರದ ಪ್ರಜೆಯಂತಾಗಿದ್ದರೆ ಎಷ್ಟು ಚೆನ್ನಾಗಿತ್ತಲ್ವಾ ಎಂದು ಇಂದು ಅಂದುಕೊಂಡರೆ ಅಚ್ಚರಿಯಿಲ್ಲ. ಏಕೆಂದರೆ, ಅಂತಹದೊಂದು ಸಿಹಿ ಸುದ್ದಿಯನ್ನು ಸಿಂಗಪುರ ಸರಕಾರ ತನ್ನ ನೌಕರರಿಗೆ ನೀಡಿದೆ.

ಅದೇನೆಂದರೆ, 21 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನೌಕರನೂ ತನ್ನ ಸಂಬಳದ ಆಧಾರದ ಮೇಲೆ 100 ಸಿಂಗಪುರ ಡಾಲರ್ ನಿಂದ ಹಿಡಿದು 300 ಸಿಂಗಪುರ ಡಾಲರ್ ವರೆಗೆ ಬೋನಸ್ ಪಡೆಯಲಿದ್ದಾನೆ. ಇದನ್ನು ಸಿಂಗಪುರದ ಬಜೆಟ್ಟಿನಲ್ಲಿ ಘೋಷಿಸಲಾಗಿದೆ.

Singapore Budget 2018 : Adults above 21 years to get SG Bonus

ಇದಕ್ಕಾಗಿ 700 ಸಿಂಗಪುರ ಡಾಲರ್ ಅನ್ನು ಬೋನಸ್ ನೀಡಲು ಸರಕಾರ ಅನುಮೋದನೆ ನೀಡಿದ್ದು, ವಾರ್ಷಿಕ 28 ಸಾವಿರ ಡಾಲರ್ ಗಿಂತ ಕಡಿಮೆ ಸಂಬಳವಿರುವವರಿಗೆ 300 ಡಾಲರ್, 28 ಸಾವಿರದಿಂದ 1 ಲಕ್ಷ ಡಾಲರ್ ಇರುವವರಿಗೆ 200 ಡಾಲರ್ ಮತ್ತು 1 ಲಕ್ಷ ಡಾಲರ್ ಸಂಬಳವಿರುವವರು ಅಥವಾ ಒಂದಕ್ಕಿಂತ ಹೆಚ್ಚು ಸ್ಥಿರಾಸ್ತಿ ಇರುವವರಿಗೆ 100 ಡಾಲರ್ ಬೋನಸ್ ದೊರೆಯಲಿದೆ.

2020ರವರೆಗೆ ದೇಶದ ಖರ್ಚುವೆಚ್ಚವನ್ನು ನೋಡಿಕೊಳ್ಳುವಷ್ಟು ಸಂಪನ್ಮೂಲಗಳು ಇದ್ದು, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವೆಚ್ಚ ಮಾಡಬೇಕು. ಅಲ್ಲದೆ, ಮುಂದಿನ 2021ರಿಂದ 2030ರ ದಶಕದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಅಗತ್ಯಗಳನ್ನು ಪೂರೈಸುವಷ್ಟು ಸಂಪನ್ಮೂಲ ಇರುವುದಿಲ್ಲ ಎಂದು ಸಿಂಗಪುರದ ಹಣಕಾಸು ಸಚಿವ ಹೆಂಗ್ ಅವರು ಬಜೆಟ್ಟಿನಲ್ಲಿ ಎಚ್ಚರಿಸಿದ್ದಾರೆ.

ಆರೋಗ್ಯ, ಮೂಲಭೂತ ಸೌಕರ್ಯ ಮತ್ತು ಭದ್ರತೆಗಾಗಿ ಹೆಚ್ಚಿನ ಬಂಡವಾಳ ವ್ಯಯಿಸಬೇಕಾಗಿರುವುದರಿಂದ, ದೇಶದ ಹಣಕಾಸು ಸ್ಥಿತಿಯನ್ನು ಮತ್ತಷ್ಟು ಸುಭದ್ರಗೊಳಿಸುವ ಅಗತ್ಯವಿದೆ ಮತ್ತು ಅನಿರೀಕ್ಷಿತ ಸಂದರ್ಭಗಳಿಗೆ ಸಿದ್ಧರಾಗಿರಬೇಕಾಗಿದೆ ಎಂದೂ ಹಣಕಾಸು ಸಚಿವ ಹೆಂಗ್ ಸ್ವೀ ಕೀಟ್ ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+