ಶೂಟಿಂಗ್ ವೇಳೆ ಅವಘಡ: ಬಾಲಿವುಡ್ ನಟ ಶಾರುಖ್ ಖಾನ್ ಮೂಗಿಗೆ ಗಾಯ, ಶಸ್ತ್ರಚಿಕಿತ್ಸೆ
ಲಾಸ್ ಏಂಜಲೀಸ್, ಜುಲೈ. 04: ಬಾಲಿವುಡ್ ನಟ ಶಾರುಖ್ ಖಾನ್ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ತಮ್ಮ ಪ್ರಾಜೆಕ್ಟ್ ಒಂದರ ಸೆಟ್‌ನಲ್ಲಿ ಮಂಗಳವಾರ ಅಪಘಾತಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಮೂಗಿಗೆ ಗಾಯವಾಗಿದ್ದು, ಶಾರುಖ್ ಖಾನ್ ಅವರಿಗೆ ಯುಎಸ್‌ನಲ್ಲಿಯೇ ಶಸ್ತ್ರಚಿಕಿತ್ಸೆ ನಡೆದಿದೆ.
ಮೂಲಗಳ ಪ್ರಕಾರ, ಅವರ ಮೂಗಿಗೆ ಗಾಯವಾಗಿತ್ತು ಮತ್ತು ಸ್ವಲ್ಪ ರಕ್ತಸ್ರಾವವಾಗಿತ್ತು. ಆದರೆ ಗಾಯ ಗಂಭೀರ ಸ್ವರೂಪವನ್ನು ಹೊಂದಿಲ್ಲದ ಕಾರಣ, ಅವರು ತಮ್ಮ ಚಿತ್ರೀಕರಣವನ್ನು ನಿಲ್ಲಿಸಬೇಕಾಗಿಲ್ಲ. ನಂತರ, ಎಸ್‌ಆರ್‌ಕೆ ಅವರ ಮೂಗಿಗೆ ಬ್ಯಾಂಡೇಜ್ ಧರಿಸಿದ್ದರು. ಸೂಪರ್‌ಸ್ಟಾರ್ ಪ್ರಸ್ತುತ ಯುಎಸ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಅಪಘಾತದ ಬಗ್ಗೆ ಶಾರುಖ್ ಶಾನ್ ಅಥವಾ ಅವರ ತಂಡ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಮೂಲಗಳು, "ಚಿಂತಿತರಾಗುವಂತೆ ಇಲ್ಲ. ರಕ್ತಸ್ರಾವವನ್ನು ನಿಲ್ಲಿಸಲು ಶಾರುಖ್ ಖಾನ್ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಎಂದು ಅವರ ತಂಡಕ್ಕೆ ವೈದ್ಯರು ತಿಳಿಸಿದ್ದಾರೆ. ನಂತರ, ಶಾರುಖ್ ಖಾನ್ ಅವರ ಮೂಗಿನ ಮೇಲೆ ಬ್ಯಾಂಡೇಜ್ ಅನ್ನು ಹಾಕಲಾಗಿದೆ. ಅವರು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದೆ.
ಶಾರುಖ್ ಶಾನ್ ಗಾಯಗೊಂಡಿರುವುದು ಹೊಸದೇನಲ್ಲ. ಅವರ ಸುಮಾರು 31 ವರ್ಷಗಳ ಬಾಲಿವುಡ್ ವೃತ್ತಿಜೀವನದಲ್ಲಿ, ಅವರು ಹಲವಾರು ಬಾರಿ ಗಾಯಗೊಂಡಿದ್ದಾರೆ. 2017 ರಲ್ಲಿ, ಅವರು ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರಾಯೀಸ್ ಚಿತ್ರೀಕರಣದ ವೇಳೆ ಮೊಣಕಾಲಿಗೆ ಗಾಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2013 ರಲ್ಲಿ, ಚೆನ್ನೈ ಎಕ್ಸ್‌ಪ್ರೆಸ್ ಚಿತ್ರೀಕರಣ ಮುಗಿದ ನಂತರ ಶಾರುಖ್ ತಮ್ಮ ಎಂಟನೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಾರುಖ್ ಖಾನ್ 2009 ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಈ ವರ್ಷದ ಆರಂಭದಲ್ಲಿ, ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಸಿದ್ಧಾರ್ಥ್ ಆನಂದ್ ಅವರ ಬ್ಲಾಕ್‌ಬಸ್ಟರ್ ಆಕ್ಷನ್ ಥ್ರಿಲ್ಲರ್ ಪಠಾಣ್‌ನೊಂದಿಗೆ ನಾಲ್ಕು ವರ್ಷಗಳ ವಿರಾಮದ ನಂತರ ಶಾರುಖ್ ಶಾಬ್ ಭರ್ಜರು ಯಶಸ್ಸು ಗಳಿಸಿದ್ದಾರೆ. ಅವರು ಮುಂದಿನ ಆಕ್ಷನ್-ಥ್ರಿಲ್ಲರ್ ಜವಾನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಸೆಪ್ಟೆಂಬರ್ 7 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.
ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಹೈ ಆಕ್ಷನ್ ಸೀಕ್ವೆನ್ಸ್‌ಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಶಾರುಖ್ ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಆ್ಯಕ್ಷನ್ ಅನ್ನು ನಿರ್ಮಿಸಿದೆ. ಅವರು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಮುಂದಿನ ಚಿತ್ರದಲ್ಲಿ ನಟಿ ತಾಪ್ಸಿ ಪನ್ನು ಜೊತೆ ತೆರೆ ಹಂಚಿಕೊಂಡಿದ್ದಾರೆ.












Click it and Unblock the Notifications