ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ: 35 ವರ್ಷಗಳ ನಂತರ ಮೊದಲ ಬಾರಿಗೆ ಚಿತ್ರಪ್ರದರ್ಶನಕ್ಕೆ ಹಸಿರು ನಿಶಾನೆ

|
Google Oneindia Kannada News

ಸೌದಿ ಅರೆಬಿಯಾದಲ್ಲಿ 35 ವರ್ಷಗಳಿಂದ ಕಮರ್ಷಿಯಲ್ ಚಿತ್ರಗಳ ಮೇಲೆ ಹೇರಲಾಗಿದ್ದ ನಿರ್ಬಂಧ ನಿಯಮವನ್ನು ತೆರವುಗೊಳಸಲಾಗುವುದು ಎಂಬ ಮಹತ್ವದ ವಿಷಯವನ್ನು ಇಲ್ಲಿನ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.

ಟೈಮ್ಸ್ ವರ್ಷದ ವ್ಯಕ್ತಿ 2017: ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ಟೈಮ್ಸ್ ವರ್ಷದ ವ್ಯಕ್ತಿ 2017: ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್

35 ವರ್ಷಗಳಿಂದ ಕಮರ್ಶಿಯಲ್ ಚಿತ್ರಗಳ ಮೇಲೆ ನಿಷೇಧ ಹೇರಲಾಗಿತ್ತು. ಇದೀಗ ಸರ್ಕಾರದ ಹೊಸ ನಿರ್ಣಯದ ಪ್ರಕಾರ 2018 ರ ಮಾರ್ಚ್ ನಿಂದ ಇಲ್ಲಿನ ಥಿಯೇಟರ್ ಗಳಲ್ಲಿ ಮತ್ತೆ ಚಿತ್ರ ಪ್ರದರ್ಶನ ಆರಂಭವಾಗಲಿವೆ!

Saudi Arabia to lift ban of commercial movies after 35 years!

1980 ರಲ್ಲಿ ಕೆಲವು ಸಂಪ್ರದಾಯವಾದಿಗಳ ಒತ್ತಾಯಕ್ಕೆ ಮಣಿದು ಇಲ್ಲ ಚಿತ್ರ ಪ್ರದರ್ಶನವನ್ನೇ ನಿಲ್ಲಿದಲಾಗಿತ್ತು. ಈ ನಿಯಮವನ್ನು ಮೂರೂವರೆ ದಶಕಗಳಿಂದ ಪಾಲಿಸಿಕೊಂಡು ಬರಲಾಗುತ್ತಿತ್ತು. ಇದೀಗ ಅವುಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದು, ಸಾಮಾಜಿಕ ಪರಿವರ್ತನೆ ಮತ್ತು ಸುಧಾರಣೆಗೆ ಇಂಥ ನಿಯಮಗಳನ್ನು ತೆಗೆದುಕೊಳ್ಳಲೇಬೇಕಿದೆ ಎಂದು ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.

ಸೌದಿ ಅರೇಬಿಯಾದಲ್ಲಿ ಗಂಡನಿಂದ ಮುಂದೆ ನಡೆದಿದ್ದಕ್ಕೂ ವಿಚ್ಛೇದನ!ಸೌದಿ ಅರೇಬಿಯಾದಲ್ಲಿ ಗಂಡನಿಂದ ಮುಂದೆ ನಡೆದಿದ್ದಕ್ಕೂ ವಿಚ್ಛೇದನ!

ಮಹಿಳೆಯರು ವಾಹನ ಚಾಲನೆ ಮಾಡದಂತೆ ಇರುವ ನಿರ್ಬಂಧವನ್ನೂ ಶೀಘ್ರದಲ್ಲೇ ತೆಗೆದುಹಾಕಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಇಡೀ ಜಗತ್ತೂ ಹೊಸ ಕಾಲಕ್ಕೆ, ಬದಲಾವಣೆಗೆ, ಸುಧಾರಣೆಗೆ ಮೈಯೊಡ್ಡಿರುವ ಹೊತ್ತಲ್ಲಿ ಸೌದಿಯೂ ಇಂಥ ಪರಿವರ್ತನೆಗೆ ನಾಂದಿ ಹಾಡಿರುವುದು ಸ್ವಾಗತಾರ್ಹ ಕ್ರಮ ಅನ್ನಿಸಿದೆ.

English summary
Saudi Arabia, will lift ban on movie theatres. This is the bold move by crown prince Mohmmed bin Salman for social reform. After 35 years, thSaudi Government granted permission to commercial movie theatres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X