Ukraine War: ರಷ್ಯಾ & ಉಕ್ರೇನ್ ಯುದ್ಧ ಶೀಘ್ರದಲ್ಲೇ ಅಂತ್ಯ? ಮುನ್ಸೂಚನೆ ನೀಡಿದ ಪುಟಿನ್!
ರಷ್ಯಾ & ಉಕ್ರೇನ್ ನಡುವೆ ಘೋರವಾಗಿ ಯುದ್ಧ ನಡೆಯುತ್ತಿರುವ ಸಮಯದಲ್ಲೇ, ಯುದ್ಧ ನಿಲ್ಲಿಸಲು ಭಾರತ ಮತ್ತು ಅಮೆರಿಕ ಸೇರಿದಂತೆ ಜಗತ್ತಿನ ಹಲವು ದೇಶಗಳು ಪ್ರಯತ್ನವನ್ನು ಮುಂದುವರಿಸಿದ್ದವು. ಆದರೆ ಯುದ್ಧ ನಿಲ್ಲಿಸಲು ಸಾಕಷ್ಟು ಸವಾಲು ಎದುರಾಗಿದ್ದ ಹಿನ್ನೆಲೆ ಉಕ್ರೇನ್ ನೆಲದಲ್ಲಿ ಪರದಾಟ ಮುಂದುವರಿದಿತ್ತು. ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಚಿಂತೆ ಮತ್ತಷ್ಟು ಜಾಸ್ತಿಯಾಗಿತ್ತು. ಈ ಸಮಯದಲ್ಲೇ, ರಷ್ಯಾ & ಉಕ್ರೇನ್ ಯುದ್ಧ ಶೀಘ್ರದಲ್ಲೇ ಅಂತ್ಯ? ಮುನ್ಸೂಚನೆ ನೀಡಿದ ಪುಟಿನ್ ಹೇಳಿದ್ದೇನು?
ಉಕ್ರೇನ್ ವಿರುದ್ಧ ರಷ್ಯಾ ಸುಲಭವಾಗಿ ಯುದ್ಧ ಆರಂಭಿಸಿತ್ತು, ಆದರೆ ಇದೇ ಯುದ್ಧ ಇಡೀ ಜಗತ್ತಿನ ನೆಮ್ಮದಿ ಹಾಳು ಮಾಡಿದೆ. ಅಲ್ಲದೆ ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ ಭಾರಿ ದೊಡ್ಡ ಮಟ್ಟದಲ್ಲಿ ಸಾವು & ನೋವು ಕೂಡ ಸಂಭವಿಸಿದೆ. ಹೀಗಾಗಿ ಆದಷ್ಟು ಬೇಗನೇ ಈ ರಷ್ಯಾ & ಉಕ್ರೇನ್ ಯುದ್ಧವನ್ನ ನಿಲ್ಲಿಸಬೇಕು ಎಂಬ ಒತ್ತಡ ಕೂಡ ಹೇರಲಾಗಿತ್ತು. ಇಷ್ಟೆಲ್ಲದರ ನಡುವೆ ದಿಢೀರ್ ರಷ್ಯಾ ತನ್ನ ಹಠ ಬಿಟ್ಟು ಸಂಧಾನ ಮಾತುಕತೆಗೆ ಸಿದ್ಧ ಎನ್ನುವ ಮೆಸೇಜ್ ಕೊಟ್ಟಿದೆ. ಹಾಗಾದ್ರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾದರೂ ಏನು? ಮುಂದೆ ಓದಿ.

ಸಂಧಾನಕ್ಕೆ ಸಿದ್ಧ ಎಂದ ರಷ್ಯಾ!
ಹೌದು, ಉಕ್ರೇನ್ ವಿರುದ್ಧ ಇಷ್ಟು ದಿನ ಸಿಕ್ಕಾಪಟ್ಟೆ ಆಕ್ರೋಶ ಹೊರ ಹಾಕುತ್ತಿದ್ದ ರಷ್ಯಾ ಈಗ ಮನಸ್ಸು ಬದಲಾಯಿಸಿದೆ. ಅದರಲ್ಲೂ ಉಕ್ರೇನ್ ಅಧ್ಯಕ್ಷನ ಮುಖ ಕಂಡರೆ ಕೊತ ಕೊತನೆ ಕುದಿಯುತ್ತಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ತಮ್ಮ ಮನಸ್ಸು ಬದಲಾಯಿಸಿದ್ದಾರೆ. ಹೀಗಾಗಿ ಹೊಸ ಮನ್ವಂತರ ಆರಂಭವಾಗಿದ್ದು, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಇದೀಗ ಮಹತ್ವದ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ. ಹಾಗಾದ್ರೆ ನೇರ ಸಂಧಾನ ಸಭೆಗೆ ಇದೀಗ ರಷ್ಯಾ ಇಟ್ಟಿರುವ ಬೇಡಿಕೆ ಏನು?
ರಷ್ಯಾ ಅಧ್ಯಕ್ಷರಿಂದ ಅಧಿಕೃತ ಆಹ್ವಾನ!
ಅಂದಹಾಗೆ ಈ ಬಗ್ಗೆ ಮಾತನಾಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು, ಯುದ್ಧ ನಿಲ್ಲಿಸಲು ನೇರ ಮಾತುಕತೆ ಪ್ರಸ್ತಾಪ ಮಾಡಿದ್ದಾರೆ. ಜನರು ವಾಸ ಇರುವ ಅಂದ್ರೆ ನಾಗರಿಕ ಪ್ರದೇಶಗಳ ಮೇಲೆ ಅಟ್ಯಾಕ್ ಮಾಡದೇ ಇರಲು ಉಕ್ರೇನ್ ಜೊತೆಯಲ್ಲಿ ಮಾತುಕತೆ ನಡೆಸಿ, ತೀರ್ಮಾನ ಕೈಗೊಳ್ಳಲು ಪುಟಿನ್ ಸಿದ್ಧರಾಗಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರರು ಮಾಹಿತಿಯನ್ನ ನೀಡಿದ್ದಾರೆ. ಈ ಮೂಲಕ ರಷ್ಯಾ ಅಧ್ಯಕ್ಷರ ಕಚೇರಿ ಮೊದಲ ಬಾರಿಗೆ ನೇರ ಸಂಧಾನ ಚರ್ಚೆ ಬಗ್ಗೆ ಪ್ರಸ್ತಾಪ ಮಾಡಿದೆ. ಮತ್ತೊಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಇದು ಪರಿಸ್ಥಿತಿಯನ್ನ ಹಿಡಿತಕ್ಕೆ ತರಲು ಸಹಕಾರಿ ಆಗುತ್ತಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.












Click it and Unblock the Notifications