ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ವಶಕ್ಕೆ ಪಡೆದ ರಷ್ಯಾ
ವಾಶಿಂಗ್ಟನ್, ಫೆಬ್ರವರಿ 25: ಉಕ್ರೇನಿಯನ್ ಸೈನಿಕರೊಂದಿಗಿನ ಭೀಕರ ಯುದ್ಧದ ನಂತರ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ ಎಂದು ಉಕ್ರೇನಿಯನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ವಿಶ್ವದ ಅತ್ಯಂತ ಭೀಕರ ಪರಮಾಣು ದುರಂತದ ಸ್ಥಳವಾದ ಚೆರ್ನೋಬಿಲ್‌ನಲ್ಲಿರುವ ಸೌಲಭ್ಯಗಳ ಪ್ರಸ್ತುತ ಸ್ಥಿತಿಯು ಉಕ್ರೇನಿಯನ್ ಅಧಿಕಾರಿಗಳಿಗೆ ತಿಳಿದಿಲ್ಲ ಎಂದು ಸಲಹೆಗಾರ ಪೊಡೊಲ್ಯಾಕ್ ತಿಳಿಸಿದ್ದಾರೆ.
ಈ ದಿಕ್ಕಿನಲ್ಲಿ ರಷ್ಯನ್ನರ ನಡೆಸಿದ ಸಂಪೂರ್ಣ ಪ್ರಜ್ಞಾಶೂನ್ಯ ದಾಳಿಯ ನಂತರದಲ್ಲಿ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವು ಸುರಕ್ಷಿತವಾಗಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮೊದಲೇ ಚೆರ್ನೋಬಿಲ್ ಪರಮಾಣು ಸ್ಥಾವರವನ್ನು ವಶಪಡಿಸಿಕೊಳ್ಳಲು ರಷ್ಯಾದ ಪಡೆಗಳು ಪ್ರಯತ್ನಿಸುತ್ತಿವೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಘೋಷಿಸಿದ್ದರು.

ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ:
ಉಕ್ರೇನ್‌ನ ರಾಜಧಾನಿ ಕೀವ್‌ನಿಂದ ಉತ್ತರಕ್ಕೆ 130 ಕಿಲೋಮೀಟರ್ (80 ಮೈಲುಗಳು) ಸ್ಥಾವರವಿದೆ. ಕಳೆದ ಏಪ್ರಿಲ್ 1986ರಲ್ಲಿ ಪರಮಾಣು ರಿಯಾಕ್ಟರ್ ಸ್ಫೋಟಿಸಿತು, ಯುರೋಪ್‌ನಾದ್ಯಂತ ವಿಕಿರಣಶೀಲ ತ್ಯಾಜ್ಯವನ್ನು ಹೊರಹಾಕಿತು. ವಿಕಿರಣ ಸೋರಿಕೆ ತಡೆಗಟ್ಟಲು ಹಲವಾರು ವರ್ಷಗಳ ಹಿಂದೆ ಸ್ಫೋಟಗೊಂಡ ರಿಯಾಕ್ಟರ್ ಅನ್ನು ರಕ್ಷಣಾತ್ಮಕ ಉದ್ದೇಶದಿಂದ ಮುಚ್ಚಲಾಗಿತ್ತು.
ರಷ್ಯಾ ದಾಳಿಯಲ್ಲಿ 137 ಮಂದಿ ಸಾವು:
ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ದಾಳಿಯಿಂದ 10 ಸೇನಾ ಅಧಿಕಾರಿಗಳು ಸೇರಿದಂತೆ 137 ಜನರು ಸಾವನ್ನಪ್ಪಿದ್ದು, 316 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಮೃತರಲ್ಲಿ ಒಡೆಸಾ ಪ್ರದೇಶದ ಝಿಮಿನಿ ದ್ವೀಪದಲ್ಲಿ ಎಲ್ಲಾ ಗಡಿ ಯೋಧರು ಸೇರಿದ್ದಾರೆ, ಇದನ್ನು ರಷ್ಯನ್ನರು ವಶಪಡಿಸಿಕೊಂಡಿದ್ದಾರೆ. ಮಾಸ್ಕೋ ವಿರುದ್ಧ ಹೋರಾಡಲು ಕೀವ್ ಏಕಾಂಗಿಯಾಗಿ ಉಳಿದಿದೆ ಎಂದು ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.












Click it and Unblock the Notifications