ರಷ್ಯಾದ ಸೈನಿಕರಿಂದ ಅಪ್ರಾಪ್ತರ ಮೇಲೆ ಅತ್ಯಾಚಾರ: ಉಕ್ರೇನ್ ಸಂಸದೆ ಗಂಭೀರ ಆರೋಪ

ಉಕ್ರೇನ್ ಏಪ್ರಿಲ್ 5: ರಷ್ಯಾದ ಪಡೆಗಳು ಉಕ್ರೇನ್‌ನ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡುತ್ತಲೇ ಇವೆ. ಜೊತೆಗೆ ರಷ್ಯಾ ಉಕ್ರೇನ್‌ನೊಂದಿಗೆ ಶಾಂತಿ ಮಾತುಕತೆಗೆ ಒತ್ತಾಯಿಸಿ ರಷ್ಯಾ ಕದನ ವಿರಾಮ ಉಲ್ಲಂಘಿಸಿದೆ ಎಂದು ಉಕ್ರೇನ್ ಆರೋಪಿಸಿದೆ. ಹೀಗಾಗಿ ಉಕ್ರೇನಿಯನ್ ಸರ್ಕಾರ ಅಶಾಂತಿಗೆ ರಷ್ಯಾದ ಮಿಲಿಟರಿಯನ್ನು ದೂಷಿಸುತ್ತಿದೆ.

ಸದ್ಯ ರಷ್ಯಾದ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ರಷ್ಯಾದ ಸೈನಿಕರು 10 ವರ್ಷ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ಮೂಲಕ ಕಾಮುಕ ಕೃತ್ಯವೆಸಗಿದ್ದಾರೆ ಎಂದು ಉಕ್ರೇನ್ ಸಂಸತ್ತಿನ ಸದಸ್ಯೆ ಲೆಸಿಯಾ ವಾಸಿಲೆಂಕ್ ಸೋಮವಾರ ಟ್ವಿಟ್ ಮಾಡಿದ್ದಾರೆ. ಜೊತೆಗೆ ಮಹಿಳೆಯರ ದೇಹವನ್ನು ಕಾದ ಕಬ್ಬಿಣದಿಂದ ಸುಡುವ ಮೂಲಕ ಗುರುತು ಮಾಡಿದ್ದಾರೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. ಬಾಲಕಿಯರ ದೇಹಗಳ ಮೇಲೆ ಶಿಲುಬೆಗಳ ಆಕಾರದಲ್ಲಿ ಸುಟ್ಟಗಾಯಗಳು ಕಂಡುಬಂದಿವೆ ಎಂದು ಅವರು ಹೇಳಿದ್ದಾರೆ. ಜೊತೆಗೆ ರಷ್ಯಾವನ್ನು "ಅನೈತಿಕ ಅಪರಾಧಗಳ ರಾಷ್ಟ್ರ" ಎಂದು ಉಲ್ಲೇಖಿಸಿದ್ದಾರೆ.

ಮಾರ್ಚ್ 24 ರಂದು ಯುದ್ಧ ಪ್ರಾರಂಭ

ಮಾರ್ಚ್ 24 ರಂದು ಯುದ್ಧ ಪ್ರಾರಂಭ

ರಷ್ಯಾ ಅಧ್ಯಕ್ಷ ಪುಟಿನ್ ಅವರು ಕೆಲವು ದಿನಗಳಿಂದ ಕೆರಳಿದ ಉಕ್ರೇನ್ ವಿರುದ್ಧ ಸಮರ ಸಾರಿದ್ದಾರೆ. ಫೆಬ್ರವರಿ 24 ರಂದು, ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಯುದ್ಧವನ್ನು ಪ್ರಾರಂಭಿಸಿದವು. ಅಂದಿನಿಂದ, ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಯುದ್ಧವನ್ನು ನಡೆಸುತ್ತಿವೆ ಮತ್ತು ರಷ್ಯಾ ಉಕ್ರೇನ್ ವಿರುದ್ಧ ಯುದ್ಧವನ್ನು ಘೋಷಿಸಿದೆ.

ಕದನ ವಿರಾಮ ಉಲ್ಲಂಘನೆ

ಕದನ ವಿರಾಮ ಉಲ್ಲಂಘನೆ

ರಷ್ಯಾದ ಪಡೆಗಳು ಉಕ್ರೇನ್ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ ಅದು ಈವರೆಗೂ ಸಾಧ್ಯವಾಗಿಲ್ಲ. ಇದರ ನಡುವೆ ರಷ್ಯಾ ಕದನ ವಿರಾಮ ಉಲ್ಲಂಘಿಸಿದೆ ಎಂದು ಉಕ್ರೇನ್ ಆರೋಪಿಸಿದೆ. ಜೊತೆಗೆ ಆಯುಧ ರಹಿತ ನಾಗರೀಕರ ಮೇಲೆ ಹಲ್ಲೆ ಮಾಡಿ ಕೊಲ್ಲಲಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಆದರೆ ಈ ಆರೋಪವನ್ನು ರಷ್ಯಾ ತಳ್ಳಿ ಹಾಕಿದೆ. ಇದರ ಮಧ್ಯೆ ಉಕ್ರೇನ್ ರಷ್ಯಾದ ಮೇಲೆ ಮತ್ತೊಂದು ಗಂಭೀರ ಆರೋಪವನ್ನು ಮಾಡಿದೆ.

ಮನನೊಂದು ಟ್ವಿಟ್ ಮಾಡಿದ ಉಕ್ರೇನ್ ಸದಸ್ಯೆ

ಮನನೊಂದು ಟ್ವಿಟ್ ಮಾಡಿದ ಉಕ್ರೇನ್ ಸದಸ್ಯೆ

ಉಕ್ರೇನ್ ಸಂಸತ್ತಿನ ಸದಸ್ಯೆ ಲೆಸಿಯಾ ವಾಸಿಲೆಂಕ್ ಅವರು ಉಕ್ರೇನ್‌ನಲ್ಲಿ ಅಪ್ರಾಪ್ತ ಬಾಲಕಿಯರ ಮತ್ತು ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಿದ್ದಾರೆ ಎಂದು ಸಂವೇದನಾಶೀಲ ಆರೋಪಗಳನ್ನು ಮಾಡಿದ್ದಾರೆ. ಅತ್ಯಾಚಾರದ ಬಳಿಕ ದೇಹದ ಸೂಕ್ಷ್ಮ ಭಾಗಗಳನ್ನು ಕಾದ ಕಬ್ಬಿಣದಿಂದ ಸುಟ್ಟು ಗುರುತು ಮಾಡಲಾಗಿದೆ ಎಂದು ದೂರಿದ್ದಾರೆ.

ತನ್ನ ಟ್ವೀಟ್‌ನಲ್ಲಿ, "ರಷ್ಯಾದ ಸೈನಿಕರು ಲೂಟಿ ಮಾಡುತ್ತಾರೆ, ಅತ್ಯಾಚಾರ ಮಾಡುತ್ತಾರೆ ಮತ್ತು ನಂತರ ಮಹಿಳೆಯರನ್ನು ಕೊಲ್ಲುತ್ತಾರೆ. 10 ಯುವತಿಯರ ದೇಹದ ಮೇಲೆ ಸ್ವಸ್ತಿಕ ಆಕಾರದ ಸುಟ್ಟಗಾಯಗಳಿವೆ. ರಷ್ಯಾದ ಪುರುಷರು ಇದನ್ನು ಮಾಡಿದ್ದಾರೆ. ಇದೊಂದು ಅನೈತಿಕ ಅಪರಾಧಿಗಳ ರಾಷ್ಟ್ರ" ಎಂದು ಅವರು ಬರೆದಿದ್ದಾರೆ. "ಅತ್ಯಾಚಾರ ಮತ್ತು ಕೊಲ್ಲಲ್ಪಟ್ಟ ಮಹಿಳೆಯ ಚಿತ್ರಹಿಂಸೆಗೊಳಗಾದ ದೇಹ" ಎಂದು ಅವರು ಕೆಲ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ. ಇದರ ಬಳಿಕ "ನಾನು ಮೂಕಳಾಗಿದ್ದೇನೆ. ನನ್ನ ಮನಸ್ಸು ಕೋಪ, ಭಯ ಮತ್ತು ದ್ವೇಷದಿಂದ ಕೂಡಿದೆ" ಎಂದು ಉಕ್ರೇನ್ ಮಹಿಳಾ ಸಂಸದೆ ಟೀಕೆಗಳನ್ನು ಮಾಡಿದ್ದಾರೆ. ಆದರೆ ಈ ಬಗ್ಗೆ ರಷ್ಯಾ ಸರ್ಕಾರವಾಗಲಿ ಅಥವಾ ರಷ್ಯಾ ಸೇನೆಯಾಗಲಿ ಯಾವುದೇ ಹೇಳಿಕೆ ನೀಡಿಲ್ಲ.

ಮಹಿಳೆಯರ ದೇಹದ ಮೇಲೆ ಗುರುತು

ಉಕ್ರೇನ್ ಸಂಸತ್ತಿನ (MP) ಮಹಿಳಾ ಸದಸ್ಯೆ ಲೆಸಿಯಾ ವಾಸಿಲೆಂಕ್ ಅವರು ಉಕ್ರೇನಿಯನ್ ಅಪ್ರಾಪ್ತ ಬಾಲಕಿಯರ ಅತ್ಯಾಚಾರ, ಹತ್ಯೆ, ಮಹಿಳೆಯರ ಕಾಣೆ, ಮಹಿಳೆಯರ ದೇಹದ ಮೇಲೆ ರಷ್ಯಾದ ಸೈನಿಕರ ಸುಟ್ಟ ಗುರುತುಗಳು ರಷ್ಯಾದ ಅರಾಜಕತೆಯಂತೆಯನ್ನು ತೋರಿಸುತ್ತದೆ ಎಂದು ಸಂವೇದನಾಶೀಲ ಟೀಕೆಗಳನ್ನು ಮಾಡಿದ್ದಾರೆ. ಜೊತೆಗೆ ಅವರು ಅಪ್ರಾಪ್ತ ಬಾಲಕಿಯರ ಮತ್ತು ಮಹಿಳೆಯರನ್ನು ಅತ್ಯಾಚಾರ ಮತ್ತು ಕೊಲೆ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಆದಾಗ್ಯೂ ರಷ್ಯಾ ಸರ್ಕಾರ ಅಥವಾ ರಷ್ಯಾದ ಪಡೆಗಳು ಆರೋಪಗಳ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+