War Cost: ಉಕ್ರೇನ್ ವಿರುದ್ಧ ಯುದ್ಧಕ್ಕಾಗಿ ರಷ್ಯಾ ಖರ್ಚು ಮಾಡುತ್ತಿರುವ ಹಣ ಎಷ್ಟು?
ಮಾಸ್ಕೋ, ಮಾರ್ಚ್ 12: ತನಗೆ ಮುನಿವವರ ಕಂಡು ತಾ ಮುನಿಯಲೇಕಯ್ಯಾ, ಎನಗಾದ ಆಗೇನು ಅವರಿಗಾದ ಚೇಗೇನು. ತನುವಿನ ಕೋಪ ಹಿರಿತನದ ಕೇಡು, ಮನದ ಕೋಪ ಅರಿವಿನ ಗೇಡು. ಮನೆಯೊಳಗಿನ ಕಿಚ್ಚು ಮನೆಯ ಸುಟ್ಟಲ್ಲದೇ ನೆರೆ ಮನೆಯ ಸುಡದು ಕೂಡಲ ಸಂಗಮ ದೇವ. ಬಸವಣ್ಣನವರ ಇದೊಂದು ವಚನ ಇಂದಿನ ರಷ್ಯಾದ ದುಸ್ಥಿತಿಗೆ ಹೇಳಿ ಮಾಡಿಸಿದಂತಿದೆ.
ಕಳೆದ 17 ದಿನಗಳಿಂದ ಉಕ್ರೇನ್ ಮೇಲೆ ಬಾಂಬ್, ಶೆಲ್ ದಾಳಿ ನಡೆಸುತ್ತಿರುವ ರಷ್ಯಾ ಎದುರಿಸುತ್ತಿರುವ ಆರ್ಥಿಕ ಹೊಡೆತ ಅಷ್ಟಿಷ್ಟು ಅಲ್ಲ. ಜಾಗತಿಕ ಮಟ್ಟದಲ್ಲಿ ತೀವ್ರ ಕೆಂಗಣ್ಣಿಗೆ ಗುರಿಯಾಗಿರುವ ವ್ಲಾಡಿಮಿರ್ ಪುಟಿನ್, ತನ್ನ ರಾಷ್ಟ್ರವನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದ್ದಾರೆ. ದೇಶದ ಮಿಲಿಟರಿ ಪಡೆಯ ಮೇಲೆ ಕೋಟಿ ಕೋಟಿ ರೂಪಾಯಿ ಸುರಿಯುವ ರಷ್ಯಾ, ಈಗ ಎಲ್ಲ ಮಿಸೈಲ್, ಬಾಂಬ್ ಹಾಗೂ ಶಸ್ತ್ರಾಸ್ತ್ರಗಳನ್ನು ಉಕ್ರೇನ್ ಮೇಲೆ ಪ್ರಯೋಗಿಸುವುದರ ಮೂಲಕ ಸೇನೆ ಹಾಗೂ ಹಣಕಾಸಿನ ಖಜಾನೆಯನ್ನು ಖಾಲಿ ಮಾಡಿಕೊಳ್ಳುತ್ತಿದೆ.
ಫೆಬ್ರವರಿ 24ರಂದು ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ್ದು, ಉಭಯ ರಾಷ್ಟ್ರಗಳ ನಡುವಿನ ಕದನ ಶನಿವಾರ 17ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಉಕ್ರೇನ್ ಜೊತೆಗಿನ ಯುದ್ಧಕ್ಕಾಗಿ ರಷ್ಯಾ ಖರ್ಚು ಮಾಡುತ್ತಿರುವ ಹಣ ಎಷ್ಟು ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈಗಾಗಲೇ ಹಲವು ಜಾಗತಿಕ ಕಂಪನಿಗಳು ರಷ್ಯಾದಲ್ಲಿ ಬಾಗಿಲು ಮುಚ್ಚಿವೆ. ಯುಎಸ್, ಇಂಗ್ಲೆಂಡ್ ಸೇರಿದಂತೆ ದೊಡ್ಡ ದೊಡ್ಡ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರುತ್ತಿವೆ. ಇದರ ಮಧ್ಯೆ ಮುಂದುವರಿದಿರುವ ಯುದ್ಧದಿಂದ ರಷ್ಯಾಗೆ ಏನೆಲ್ಲಾ ನಷ್ಟವಾಗಲಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ರಷ್ಯಾದಲ್ಲಿ ಷೇರು ಮಾರುಕಟ್ಟೆಯೇ ಬಂದ್!
ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾ ತನಗೆ ತಾನೇ ಆರ್ಥಿಕ ಪೆಟ್ಟು ಕೊಟ್ಟುಕೊಂಡಿದೆ. ದೇಶದಲ್ಲಿ ಈಗಾಗಲೇ ಬಡ್ಡಿದರ ಡಬಲ್ ಆಗಿದೆ. ಷೇರು ಮಾರುಕಟ್ಟೆ ಬಾಗಿಲು ಮುಚ್ಚಿದೆ. ರೂಬಲ್ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಯುದ್ಧದಿಂದಾಗಿ ರಷ್ಯಾದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ರಾಷ್ಟ್ರಗಳು ಹೇರಿರುವ ನಿರ್ಬಂಧಗಳಿಂದ ವೆಚ್ಚದ ಪ್ರಮಾಣ ಹೆಚ್ಚಾಗಿದೆ. ರಷ್ಯಾದ ನಾಗರಿಕರು, ಈಗ IKEA, McDonald's ಅಥವಾ Starbucks ನಲ್ಲಿ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ, ಅವರು ಹೊಂದಿರುವ ಯಾವುದೇ ಹಣವನ್ನು ವಿದೇಶಿ ಕರೆನ್ಸಿಗೆ ಪರಿವರ್ತಿಸಲು ಅನುಮತಿ ನೀಡಲಾಗುತ್ತಿಲ್ಲ.

ಮುಂದಿನ ವರ್ಷದ ವೇಳೆಗೆ ರಷ್ಯಾ ಆರ್ಥಿಕತೆಯಲ್ಲಿ ಶೇ.7ರಷ್ಟು ಕುಸಿತ
ರಷ್ಯಾ ಆಕ್ರಮಣ ಮಾಡುವುದಕ್ಕೂ ಪೂರ್ವದಲ್ಲಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು. ಅದನ್ನೇ ಯಥಾವತ್ತಾಗಿ ಕಾಯ್ದುಕೊಂಡು ಹೋಗಿದ್ದರೆ, ಮುಂದಿನ ವರ್ಷದ ವೇಳೆಗೆ ದೇಶದ ಆರ್ಥಿಕತೆಯಲ್ಲಿ ಶೇ.2ರಷ್ಟು ಏಳಿಗೆ ಕಂಡುಕೊಳ್ಳಬಹುದಾಗಿತ್ತು. ಆದರೆ ಯುದ್ಧದಿಂದಾಗಿ ಮುಂದಿನ ವರ್ಷದ ವೇಳೆಗೆ ರಷ್ಯಾದ ಆರ್ಥಿಕತೆಯು ಶೇ.7ರಷ್ಟು ಕುಸಿತ ಕಾಣಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಇತರು ಹೇಳುವಂತೆ ಅದೇ ಆರ್ಥಿಕತೆ ಕುಸಿತದ ಪ್ರಮಾಣವು ಶೇ.7ರ ಬದಲಿಗೆ ಶೇ.15ರಷ್ಟು ಆಗಬಹುದು.

1998ರ ಬಳಿ ರಷ್ಯಾದ ಷೇರುಪೇಟೆಯಲ್ಲಿ ಅತಿದೊಡ್ಡ ಕುಸಿತ
ರಷ್ಯಾದ ಷೇರು ಪೇಟೆಯಲ್ಲಿ 1998ರಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಕುಸಿತ ಕಂಡು ಬಂದಿತ್ತು. ಆದರೀಗ ಅದನ್ನೂ ಮೀರಿಸುವಷ್ಟರ ಮಟ್ಟಿಗೆ ದೇಶದ ಷೇರು ಪೇಟೆಯು ಕುಸಿದಿದೆ. ಕಳೆದೊಂದು ದಶಕದಲ್ಲಿ ಯಾವುದೇ ಬೆಳವಣಿಗೆಗಳನ್ನು ಕಾಣದಿರುವುದು ಆರ್ಥಿಕತೆಗೆ ಆಘಾತವನ್ನು ನೀಡಿದೆ. ಇಂಧನ ಮತ್ತು ಗ್ಯಾಸ್ ಅನ್ನು ರಫ್ತು ಮಾಡುವುದರ ಹೊರತಾಗಿ ಬೇರೆ ಮಾರ್ಗವನ್ನು ಕಂಡುಕೊಳ್ಳುವಲ್ಲಿಯೂ ವಿಫಲವಾಗಿದೆ. ಇದರ ಮಧ್ಯೆ ಯುರೋಪಿಯನ್ ಒಕ್ಕೂಟವು ರಷ್ಯಾದ ಮೇಲೆ ತನ್ನ ಶಕ್ತಿಯ ಅವಲಂಬನೆಯನ್ನು ಕಡಿಮೆ ಮಾಡಲು ಯೋಜನೆ ಹಾಕಿಕೊಳ್ಳುತ್ತಿವೆ, ಆದರೆ ಯುಎಸ್ ಮತ್ತು ಯುಕೆ ಈಗಾಗಲೇ ರಷ್ಯಾದಿಂದ ಇಂಧನ ಮತ್ತು ಗ್ಯಾಸ್ ಆಮದನ್ನು ಹಂತಹಂತವಾಗಿ ನಿಲ್ಲಿಸುವುದಕ್ಕೆ ಶುರು ಮಾಡಿವೆ.

ಪ್ರಮುಖ ಪಾಲುದಾರರನ್ನೇ ಕಳೆದುಕೊಳ್ಳುತ್ತಾ ರಷ್ಯಾ?
ರಷ್ಯಾದ ಮೇಲಿನ ನಿರ್ಬಂಧವನ್ನು ಇದೇ ರೀತಿ ಮುಂದುವರಿಸಿದರೆ ಅದು ದೀರ್ಘಾವಧಿಯಲ್ಲಿ ಭೀಕರ ಪರಿಣಾಮವನ್ನು ಬೀರುತ್ತದೆ. ಚೀನಾ ಮತ್ತು ಬೆಲಾರಸ್ ಹೊರತುಪಡಿಸಿದ ಜಗತ್ತಿನ ತನ್ನ ಪ್ರಮುಖ ವ್ಯಾಪಾರಿ ಪಾಲುದಾರರನ್ನು ರಷ್ಯಾ ಕಳೆದುಕೊಳ್ಳುತ್ತದೆ. ರೇಟಿಂಗ್ ಏಜೆನ್ಸಿಗಳು ಈಗ ರಷ್ಯಾ ಶೀಘ್ರದಲ್ಲೇ ತನ್ನ ಸಾಲಗಾರರಿಗೆ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಊಹಿಸುತ್ತವೆ. ಇದರಿಂದ ಮತ್ತೊಮ್ಮೆ ಆರ್ಥಿಕತೆಯ ಮೇಲೆ ದೀರ್ಘಾವಧಿಯ ಪರಿಣಾಮ ಬೀರುತ್ತದೆ. ಇದರಿಂದ ಜಾಗತಿಕ ಮಟ್ಟದಲ್ಲಿ ರಷ್ಯಾ ಸಾಲಗಾರನಾಗಿ ಅಪಖ್ಯಾತಿ ಸಂಪಾದಿಸಬೇಕಾಗುತ್ತದೆ. ಭವಿಷ್ಯದಲ್ಲಿ ಇದರಿಂದ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದೂ ಸಹ ಕಷ್ಟಕರವಾಗುತ್ತದೆ. ತದನಂತರ ಚೀನಾದ ಮೇಲೆ ಸಂಪೂರ್ಣವಾಗಿ ಅವಲಂಬಿಸಬೇಕಾಗುತ್ತದೆ.

ಉಕ್ರೇನ್ ಗೆದ್ದುಕೊಂಡರೂ ರಷ್ಯಾಗೆ ಆಪತ್ತು ತಪ್ಪಿದ್ದಲ್ಲ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಠದಿಂದ ಉಕ್ರೇನ್ ನೆಲವನ್ನು ಗೆದ್ದುಕೊಂಡಷ್ಟು ಆಪತ್ತು ಹೆಚ್ಚಾಗುತ್ತದೆ. ರಷ್ಯಾದ ಮೇಲಿನ ಆರ್ಥಿಕ ಹೊರೆ ಇಮ್ಮಡಿಯಾಗುತ್ತದೆ. ಏಕೆಂದರೆ ರಷ್ಯಾ ಗೆದ್ದುಕೊಂಡ ಉಕ್ರೇನ್ ಅನ್ನು ಮರುಸ್ಥಾಪಿಸಬೇಕಾಗುತ್ತದೆ. ಮೂಲ ಸೌಕರ್ಯಗಳು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಪುನರ್ ಸ್ಥಾಪನೆ ಮಾಡಬೇಕಾಗುತ್ತದೆ. ಇದರ ಜೊತೆಗೆ ಉಕ್ರೇನಿಯನ್ ಪ್ರಜೆಗಳು ಹೆಚ್ಚು ಹೆಚ್ಚು ಯುರೋಪಿಯನ್ ಪರವಾಗಿದ್ದು, ಇಂತಹ ಪ್ರತಿಕೂಲ ವಾತಾವರಣದಲ್ಲಿ ಶಾಂತಿ ಕಾಪಾಡುವುದು ಮುಖ್ಯವಾಗಿರುತ್ತದೆ. ಅದಕ್ಕಾಗಿ ಪುಟಿನ್ ರಷ್ಯಾದ ಬಜೆಟ್ ನಿಂದದ ಬಹುಪಾಲು ಸಂಪನ್ಮೂಲವನ್ನು ಉಕ್ರೇನ್ ಗಾಗಿ ತೆಗೆದಿಡಬೇಕಾಗುತ್ತದೆ.

ಈ ಹಿಂದೆ ಎರಡು ಯುದ್ಧಗಳು ರಷ್ಯಾಗೆ ಪೆಟ್ಟು ಕೊಟ್ಟಿದ್ದೆಷ್ಟು?
ಜಾಗತಿಕ ಮಟ್ಟದಲ್ಲಿ ರಷ್ಯಾ ಯುದ್ಧಕ್ಕಾಗಿ ಎಷ್ಟು ಹಣವನ್ನು ಖರ್ಚು ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಒಮ್ಮೆ ಹಿಂತಿರುಗಿ ನೋಡಬೇಕು. ಕಳೆದ 1999 ಮತ್ತು 2000ರಲ್ಲಿ ಗ್ರೋಜ್ನಿ ಮತ್ತು ಚೆಚೆನ್ಯಾ ನಾಶದ ನಂತರ ಅದನ್ನು ಪುನರ್ ಸ್ಥಾಪಿಸುವುದಕ್ಕೆ ಹಾಗೂ ಆ ದೇಶದಲ್ಲಿ ತನ್ನ ಆಡಳಿತವನ್ನು ಉಳಿಸಿಕೊಳ್ಳಲು ರಷ್ಯಾ ವರ್ಷಕ್ಕೆ 3.8 ಶತಕೋಟಿ ಯುಎಸ್ ಡಾಲರ್(£2.9 ಶತಕೋಟಿ) ಖರ್ಚು ಮಾಡಿತ್ತು.

ಉಕ್ರೇನ್ ಮೇಲೆ ಯುದ್ಧಕ್ಕೆ ರಷ್ಯಾ ಖರ್ಚು ಮಾಡುತ್ತಿರುವುದೆಷ್ಟು?
ರಷ್ಯಾ ಈ ಹಿಂದೆ ನಡೆಸಿದ ಚೆಚೆನ್ಯಾ ಯುದ್ಧಕ್ಕಿಂತ ಉಕ್ರೇನ್ ಭಿನ್ನವಾಗಿದೆ. ಏಕೆಂದರೆ 40 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಉಕ್ರೇನ್, ಚೆಚೆನ್ಯಾಕ್ಕಿಂದ 40 ಪಟ್ಟು ಮತ್ತು ಕ್ರಿಮಿಯನ್ ಪರ್ಯಾಯ ದ್ವೀಪಕ್ಕಿಂತ 20 ಪಟ್ಟು ಹೆಚ್ಚಾಗಿದೆ. ಪ್ರದೇಶವಾರು ನೋಡುವುದಾದರೆ, ಯುರೋಪಿನ ಎರಡನೇ ಅತಿದೊಡ್ಡ ದೇಶ (ರಷ್ಯಾದ ನಂತರ) ಉಕ್ರೇನ್ ಆಗಿದೆ. ರಷ್ಯಾದ ಪಾಲಿಗೆ ಇದನ್ನು ಉಳಿಸಿಕೊಳ್ಳಲು ಬಹಳ ದುಬಾರಿ ಆಗುತ್ತದೆ.
ಇಂದು ರಷ್ಯಾದ ಮಿಲಿಟರಿ ನಷ್ಟಗಳು ರಹಸ್ಯವಾಗಿ ಉಳಿದಿದ್ದರೂ ಉಕ್ರೇನಿಯನ್ನರು ಅದನ್ನು ಅಂದಾಜು ಹಾಕುತ್ತಿದ್ದಾರೆ. ಯುದ್ಧದ ಮೊದಲ ಎರಡು ದಿನಗಳಲ್ಲಿ ರಷ್ಯಾದ ಟ್ಯಾಂಕ್‌ಗಳು, ವಿಮಾನಗಳು ಮತ್ತು ಶಸ್ತ್ರಾಸ್ತ್ರಗಳ ನಾಶದಿಂದ ಪುಟಿನ್‌ಗೆ ಸುಮಾರು US $ 5 ಬಿಲಿಯನ್‌ಗಳಷ್ಟು ನಷ್ಟವಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಉಕ್ರೇನ್‌ನಲ್ಲಿ ಇಲ್ಲಿಯವರೆಗೆ, ಸುಮಾರು 12,000 ರಷ್ಯಾದ ಸೈನಿಕರನ್ನು ಹತ್ಯೆಗೈದಿರುವ ಬಗ್ಗೆ ಅಂದಾಜಿಸಲಾಗಿದೆ. ಅಫ್ಘಾನಿಸ್ತಾನದ ಸೋವಿಯತ್ ಆಕ್ರಮಣದ ಸಮಯದಲ್ಲಿ ಹೋಲಿಸಿದರೆ ಸುಮಾರು 15,000 ಸೈನಿಕರು ಅಂದು ಸತ್ತಿದ್ದರು. ಮೊದಲ ಚೆಚೆನ್ ಯುದ್ಧದ ಸಮಯದಲ್ಲಿ 8,000 ಯೋಧರು ಪ್ರಾಣ ಬಿಟ್ಟಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications