ರಷ್ಯಾದಲ್ಲಿ ಫೇಸ್‌ಬುಕ್, ಟ್ವಿಟರ್ ಮತ್ತು ಯೂಟ್ಯೂಬ್ ಮೇಲೆ ನಿಷೇಧ
ಮಾಸ್ಕೋ, ಮಾರ್ಚ್ 5: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ 10ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ರಷ್ಯಾದಲ್ಲಿ ಫೇಸ್‌ಬುಕ್ ಅನ್ನು ನಿಷೇಧಿಸಿದ ಸುದ್ದಿಯ ಬೆನ್ನಲ್ಲೇ ಟ್ವಿಟರ್ ಮತ್ತು ಯೂಟ್ಯೂಬ್‌ಗೆ ನಿರ್ಬಂಧ ವಿಧಿಸಿದೆ ಎಂದು ವರದಿಯಾಗಿದೆ.
ರಷ್ಯಾದ ಮಾಧ್ಯಮ ವಾಚ್‌ಡಾಗ್ ರೋಸ್ಕೊಮ್ನಾಡ್ಜೋರ್ ಟ್ವಿಟರ್‌ಗೆ ಪ್ರವೇಶವನ್ನು ನಿರ್ಬಂಧಿಸಿದೆ ಎಂದು ಟಾಸ್ ಸುದ್ದಿ ಸಂಸ್ಥೆ ಹೇಳುತ್ತದೆ ಮತ್ತು ಈ ಸೇವೆಯನ್ನು ಮೊದಲೇ ನಿರ್ಬಂಧಿಸಲಾಗಿದೆ ಎಂದು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ಹೇಳಿದೆ.
ರಷ್ಯಾ ತನ್ನ ಆಕ್ರಮಣವನ್ನು ಪ್ರಾರಂಭಿಸಿದ ಫೆಬ್ರವರಿ 24 ರಂದು ಪ್ರಾಸಿಕ್ಯೂಟರ್ ಜನರಲ್ ಕಚೇರಿಯ ನಿರ್ಧಾರದ ಆಧಾರದ ಮೇಲೆ ಟ್ವಿಟರ್‌ಗೆ ಅನುಮತಿಯನ್ನು ಸೀಮಿತಗೊಳಿಸಲಾಗಿದೆ ಎಂಬ ಸಂದೇಶವು ನಿಯಂತ್ರಕರ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ.
ಯೂಟ್ಯೂಬ್, ಟ್ವಿಟರ್ ಮತ್ತು ಫೇಸ್‌ಬುಕ್ ರಷ್ಯಾದಲ್ಲಿ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾಗಿದ್ದು, ದೇಶಾದ್ಯಂತ ಹತ್ತಾರು ಸಾವಿರ ಬಳಕೆದಾರರನ್ನು ಹೊಂದಿದೆ.

Instagram ಮತ್ತು WhatsApp ಮೇಲೆ ನಿರ್ಬಂಧವಿಲ್ಲ:
ಫೇಸ್‌ಬುಕ್‌ನ ಪೋಷಕ ಕಂಪನಿ ಮೆಟಾ ಹೇಳುವಂತೆ Instagram ಮತ್ತು WhatsApp ಮೇಲೆ ಯಾವುದೇ ರೀತಿ ನಿರ್ಬಂಧಗಳನ್ನು ಹೇರಿಲ್ಲ. ಅವುಗಳು ಎಂದಿನಂತೆ ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ.
ರಷ್ಯಾ ಕ್ರಮಕ್ಕೆ ಫೇಸ್‌ಬುಕ್‌ನ ವಿರೋಧ:
ಸಾಮಾಜಿಕ ಮಾಧ್ಯಮ ನೆಟ್‌ವರ್ಕ್ ಅನ್ನು ನಿರ್ಬಂಧಿಸುವ ರಷ್ಯಾದ ಕ್ರಮವು ಲಕ್ಷಾಂತರ ಜನರನ್ನು ವಿಶ್ವಾಸಾರ್ಹ ಮಾಹಿತಿ ಮತ್ತು ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆಯಿಂದ ದೂರ ತಳ್ಳುತ್ತದೆ ಎಂದು ಫೇಸ್‌ಬುಕ್ ಹೇಳಿದೆ.
"ಶೀಘ್ರದಲ್ಲೇ ಲಕ್ಷಾಂತರ ಸಾಮಾನ್ಯ ರಷ್ಯನ್ನರು ತಮ್ಮನ್ನು ವಿಶ್ವಾಸಾರ್ಹ ಮಾಹಿತಿಯ ಸಂಪರ್ಕ ಕೊಂಡಿಯನ್ನು ಕಡಿತಗೊಳಿಸಲಾಗುತ್ತದೆ. ಜನರು ಮಾತನಾಡದೇ ಮೌನವಾಗುತ್ತಾರೆ," ಎಂದು ಫೇಸ್‌ಬುಕ್‌ನ ಪೋಷಕ ಮೆಟಾದಲ್ಲಿ ಜಾಗತಿಕ ವ್ಯವಹಾರಗಳ ಉಪಾಧ್ಯಕ್ಷ ನಿಕ್ ಕ್ಲೆಗ್ ಹೇಳಿದ್ದಾರೆ. "ನಮ್ಮ ಸೇವೆಗಳನ್ನು ಪುನಃಸ್ಥಾಪಿಸಲು ನಾವು ಎಲ್ಲ ಎಲ್ಲ ರೀತಿಯ ಪ್ರಯತ್ನವನ್ನು ಮುಂದುವರಿಸುತ್ತೇವೆ. ಆದ್ದರಿಂದ ಅವರ ಭದ್ರತೆ ಮತ್ತು ಸುರಕ್ಷಿತಯನ್ನು ಹೇಳುವ ಕ್ರಿಯೆಗೆ ಜನರು ಲಭ್ಯವಿರುತ್ತಾರೆ," ಎಂದಿದ್ದಾರೆ.












Click it and Unblock the Notifications