ದಾಳಿ ಮಾಡಲು ವಾಹನಗಳ ಬಳಕೆ, ಉಗ್ರರ ಹೊಸ ತಂತ್ರ?
ಪ್ಯಾರೀಸ್, ಜುಲೈ 14 : ವಾಹನಗಳನ್ನು ಅಸ್ತ್ರಗಳಾಗಿ ಬಳಕೆ ಮಾಡಿಕೊಂಡು ದಾಳಿ ನಡೆಸಬೇಕು ಎಂಬುದು ಉಗ್ರರ ಹೊಸ ತಂತ್ರವಲ್ಲ. 2014ರಲ್ಲಿಯೇ ಐಎಸ್‌ಐಎಸ್ ಉಗ್ರ ಸಂಘಟನೆ ಈ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಸಂದೇಶವನ್ನು ಹಾಕಿತ್ತು.
ಫ್ರಾನ್ಸ್ ಮತ್ತು ಅಮೆರಿಕಗಳ ಮೇಲೆ ವಾಹನಗಳ ಮೂಲಕ ದಾಳಿ ಮಾಡಿ, ಜನರ ಮೇಲೆ ವಾಹನಗಳನ್ನು ಹತ್ತಿಸಿ ಅವರನ್ನು ಹತ್ಯೆ ಮಾಡಿ ಎಂದು ಐಎಸ್‌ಐಎಸ್ 2014ರಲ್ಲಿಯೇ ಕರೆ ಕೊಟ್ಟಿತ್ತು. ಗುರುವಾರ ನೀಸ್ ನಗರದ ಮೇಲೆ ನಡೆದ ದಾಳಿ ಇದೇ ಮಾದರಿಯದ್ದು ಎಂದು ಶಂಕಿಸಲಾಗಿದೆ. [ಫ್ರಾನ್ಸ್ ಮೇಲೆ ದಾಳಿ ಮಾಡಿದ್ದು ISIS]

ನೀಸ್ ನಗರದಲ್ಲಿ ಲಾರಿ ಹತ್ತಿಸಿ 80 ಜನರನ್ನು ಹತ್ಯೆ ಮಾಡಲಾಗಿದೆ. ಈ ದಾಳಿಯ ಹಿಂದೆ ಉಗ್ರರ ಕೈವಾಡವಿದೆ? ಎಂದು ಶಂಕಿಸಲಾಗಿದೆ. 31 ವರ್ಷ ವಯಸ್ಸಿನ ಲಾರಿ ಚಾಲಕ ಗುರುವಾರ ನೈಸ್ ನಗರದಲ್ಲಿಯೂ ಇದೇ ತಂತ್ರ ಅನುಸರಿಸಿ ಹತ್ಯಾಕಾಂಡ ಮಾಡಿದ್ದಾನೆ.[ಫ್ರಾನ್ಸ್ ನಲ್ಲಿ ಲಾರಿ ಹರಿಸಿ 77 ಜನರ ಭೀಕರ ಹತ್ಯೆ]
ಐಎಸ್‌ಐಎಸ್ ಮಾತ್ರವಲ್ಲ ಅಲ್‌ಖೈದಾ ಸಂಘಟನೆ ಸಹ ವಾಹನಗಳನ್ನು ಬಳಸಿಕೊಂಡು ವಿದೇಶಿಯರ ಮೇಲೆ ದಾಳಿ ಮಾಡಿ ಎಂದು ಕರೆ ನೀಡಿತ್ತು. 2014ರಲ್ಲಿ ಅಲ್‌ಖೈದಾ ಈ ಕುರಿತ ವಿಡಿಯೋವನ್ನು ಬಿಡುಗಡೆ ಮಾಡಿತ್ತು.












Click it and Unblock the Notifications