ಸಾಮಾಜಿಕ ಅಂತರ ಪಾಲನೆಗಾಗಿ ಚಮ್ಮಾರನ ಸೂಪರ್ ಸುಪ್ರೀಂ ಐಡಿಯಾ.!

ಬುಚಾರೆಸ್ಟ್, ಜೂನ್ 1: ಮಹಾಮಾರಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಸಾಮಾಜಿಕ ಅಂತರ ಬಹುದೊಡ್ಡ ಉಪಾಯ ಅಂತ ಗೊತ್ತಿದ್ದರೂ ಹಲವರು ಸಾಮಾಜಿಕ ಅಂತರ ಪಾಲಿಸುತ್ತಿಲ್ಲ.

ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಲಾಕ್ ಡೌನ್ ಸಡಿಲಗೊಂಡಿರುವುದರಿಂದ ವ್ಯಾಪಾರ-ವಹಿವಾಟು ಆರಂಭಗೊಂಡಿದೆ. ಹೀಗಾಗಿ, ಮಾರ್ಕೆಟ್ ಸೇರಿದಂತೆ ಅನೇಕ ಕಡೆ ಜನಜಂಗುಳಿ ಕಂಡುಬರುತ್ತಿದ್ದು, 'ಸಾಮಾಜಿಕ ಅಂತರ'ವನ್ನೇ ಜನ ಮರೆತು ಬಿಡುತ್ತಿದ್ದಾರೆ.

ಮನೆಯಿಂದ ಹೊರ ನಡೆದರೆ, ಜನರು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲು ರೊಮೇನಿಯಾದ ಚಮ್ಮಾರರೊಬ್ಬರು ಸೂಪರ್ ಸುಪ್ರೀಂ ಐಡಿಯಾ ಮಾಡಿದ್ದಾರೆ. ಅದೇನು ಅಂತ ನೀವೇ ನೋಡಿ.. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ...

ಏನದು ಸೂಪರ್ ಸುಪ್ರೀಂ ಐಡಿಯಾ.?

ಏನದು ಸೂಪರ್ ಸುಪ್ರೀಂ ಐಡಿಯಾ.?

ಲಾಕ್ ಡೌನ್ ಸಡಿಲಗೊಂಡಿರುವುದರಿಂದ ಕೊರೊನಾ ವೈರಸ್ ಸೋಂಕಿನಿಂದ ಪಾರಾಗಬೇಕು ಅಂದ್ರೆ ಸೋಷಿಯಲ್ ಡಿಸ್ಟೆನ್ಸ್ ಮೇನ್ಟೇನ್ ಮಾಡಲೇಬೇಕು. ಸಾಮಾಜಿಕ ಅಂತರ ಪಾಲನೆ ಆಗುವಂತೆ ಮಾಡಲು ರೊಮೇನಿಯಾದ ಶೂ ಮೇಕರ್ ಉದ್ದ ಮೂಗಿನ ಶೂಗಳನ್ನು ತಯಾರಿಸಿದ್ದಾರೆ.

ಚಿತ್ರಕೃಪೆ: ರಾಯಿಟರ್ಸ್

ಒಂದರಿಂದ ಒಂದುವರೆ ಮೀಟರ್ ಅಂತರ ಕಾಪಾಡಿಕೊಳ್ಳಬಹುದು

ಒಂದರಿಂದ ಒಂದುವರೆ ಮೀಟರ್ ಅಂತರ ಕಾಪಾಡಿಕೊಳ್ಳಬಹುದು

ಲೆದರ್ ಶೂ ಬಿಸಿನೆಸ್ ನಲ್ಲಿ 39 ವರ್ಷಗಳಿಂದ ಇರುವ ಗ್ರಿಗೋರ್ ಲಪ್ ಉದ್ದನೆಯ ಮೂಗಿನ ಬೂಟುಗಳನ್ನು ರೆಡಿ ಮಾಡಿದ್ದಾರೆ. ಯೂರೋಪಿಯನ್ ಸೈಝ್ 75 ನಲ್ಲಿ ಉದ್ದ ಮೂಗಿನ ಶೂಗಳು ಲಭ್ಯವಿದೆ. ಇವುಗಳನ್ನು ಧರಿಸಿದವರು ಕನಿಷ್ಟ ಅಂದರೂ ಇನ್ನೊಬ್ಬರಿಂದ ಒಂದರಿಂದ ಒಂದುವರೆ ಮೀಟರ್ ಅಂತರ ಕಾಪಾಡಿಕೊಳ್ಳುತ್ತಾರೆ.

ಚಿತ್ರಕೃಪೆ: ರಾಯಿಟರ್ಸ್

ಗ್ರಿಗೋರ್ ಲಪ್ ಹೇಳುವುದೇನು.?

ಗ್ರಿಗೋರ್ ಲಪ್ ಹೇಳುವುದೇನು.?

''ರಸ್ತೆಗಳಲ್ಲಿ ಜನ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಿಲ್ಲ. ನಾನು ಮಾರ್ಕೆಟ್ ಗೆ ಹೋದಾಗಲೂ ಜನ ಈ ಹಿಂದಿನಂತೆಯೇ ವರ್ತಿಸುತ್ತಿದ್ದರು. ಹೀಗಾಗಿ, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಈ ರೀತಿ ಉದ್ದ ಮೂಗಿನ ಶೂಗಳನ್ನು ರೆಡಿ ಮಾಡಿದ್ದೇನೆ'' ಅಂತಾರೆ ಗ್ರಿಗೋರ್ ಲಪ್.

ಚಿತ್ರಕೃಪೆ: ರಾಯಿಟರ್ಸ್

ಶೂಗಳ ಬೆಲೆ ಎಷ್ಟು.?

ಶೂಗಳ ಬೆಲೆ ಎಷ್ಟು.?

ಕೆಲವು ನಟರಿಗೆ ಮಾಡಿದ ಉದ್ದನೆಯ ಬೂಟಿನ ಮಾಡೆಲ್ ನಿಂದ ಪ್ರೇರಿತರಾಗಿ ಗ್ರಿಗೋರ್ ಲಪ್ ಉದ್ದ ಮೂಗಿನ ಶೂಗಳನ್ನು ತಯಾರಿಸಿದ್ದಾರೆ. ಈ ಶೂಗಳಿಗಾಗಿ ಈಗಾಗಲೇ ಐದು ಆರ್ಡರ್ ಗಳನ್ನು ಪಡೆದಿರುವ ಗ್ರಿಗೋರ್ ಲಪ್ ಗೆ ಒಂದು ಜೊತೆಯ ಶೂಗಳನ್ನು ತಯಾರಿಸಲು ಎರಡು ದಿನ ಬೇಕಾಗುತ್ತದೆ. ಅಂದ್ಹಾಗೆ, ಈ ಉದ್ದನೆಯ ಮೂಗಿನ ಶೂ ಬೆಲೆ $115.

ಚಿತ್ರಕೃಪೆ: ರಾಯಿಟರ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+