2036ರವರೆಗೂ ವ್ಲಾಡಿಮಿರ್ ಪುಟಿನ್ ರಷ್ಯಾ ಅಧ್ಯಕ್ಷ:ಏನಿದು ಸಾಂವಿಧಾನಿಕ ತಿದ್ದುಪಡಿ

ಮಾಸ್ಕೋ, ಜುಲೈ 2: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2036ರವರೆಗೂ ಅಧಿಕಾರದ ಗದ್ದುಗೆಯಲ್ಲಿರುವಂತೆ ರಷ್ಯಾ ಜನರು ಮತ ಚಲಾಯಿಸುವ ಮೂಲಕ ಹಾದಿಯನ್ನು ಸುಗಮಗೊಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ರಷ್ಯಾದಲ್ಲಿ ಸುಮಾರು 1 ವಾರಗಳಿಂದ ಈ ಕುರಿತು ಜನಾಭಿಪ್ರಾಯ ಸಂಗ್ರಹವಾಗಿದ್ದು, ಜನಾಭಿಪ್ರಾಯದಲ್ಲಿ ಪಾಲ್ಗೊಂಡಿರುವ ಸುಮಾರು ಶೇ.77ರಷ್ಟು ಜನರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

Recommended Video

      Facebook brings a new Update to reduce sharing of Fake news | Oneindia Kannada

      ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧ್ಯಕ್ಷ ಸ್ಥಾನದ ಅಧಿಕಾರದ ಅವಧಿ 2024ಕ್ಕೆ ಕೊನೆಗೊಳ್ಳಬೇಕಾಗಿತ್ತು. ಆದರೆ ಪುಟಿನ್ ಅಧಿಕಾರದಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಮತ್ತೆ 12 ವರ್ಷಗಳವರೆಗೆ ನಿರಾತಂಕವಾಗಿ ಅಧಿಕಾರ ಚಲಾಯಿಸುವ ಅಧಿಕಾರಕ್ಕೆ ರಷ್ಯಾ ಸಂಸತ್ತು ಇತ್ತೀಚೆಗೆ ಹಸಿರು ನಿಶಾನೆ ತೋರಿಸಿತ್ತು.

      ರಷ್ಯಾದಲ್ಲಿ 1993ರ ಸಂವಿಧಾನದ ಪ್ರಸ್ತಾವಿತ ತಿದ್ದುಪಡಿ ಮಸೂದೆಯಲ್ಲಿ ಮಾಡಿರುವ ಬದಲಾವಣೆಗಳ ಕುರಿತು ಜನವರಿಯಲ್ಲಿ ಬಹಿರಂಗವಾಗಿತ್ತು. ಸಂವಿಧಾನಿಕ ತಿದ್ದುಪಡಿಗೆ ರಷ್ಯಾ ಸಂಸತ್ತು ಗ್ರೀನ್ ಸಿಗ್ನಲ್ ನೀಡಿದ ಬಳಿಕ ಇದೀಗ ಪುಟಿನ್ ಅವರು ಜನಾಭಿಪ್ರಾಯ ಸಂಗ್ರಹದಲ್ಲೂ ಮೇಲುಗೈ ಸಾಧಿಸಿದ್ದಾರೆ.

      Referendum In Russia Passes, Allowing Putin To Remain President Until 2036

      ಆರಂಭಿಕ ಫಲಿತಾಂಶದ ಪ್ರಕಾರ ಕೆಜಿಬಿ ಮಾಜಿ ಅಧಿಕಾರಿ ಪುಟಿನ್ ಎರಡು ದಶಕಕ್ಕೂ ಹೆಚ್ಚು ಕಾಲ ಅಧ್ಯಕ್ಷರಾಗಿ/ಪ್ರಧಾನಿಯಾಗಿ ಅಧಿಕಾರ ಚಲಾಯಿಸಿದಂತಾಗಿದೆ. ಅಂದರೆ ಪುಟಿನ್ ಮತ್ತೆ 16 ವರ್ಷಕ್ಕೂ ಹೆಚ್ಚು ಕಾಲ ರಷ್ಯಾದ ಅಧ್ಯಕ್ಷಗಾದಿಯಲ್ಲಿ ಮುಂದುವರಿದಂತಾಗಿದೆ. ಪೂರ್ಣ ಫಲಿತಾಂಶ ಇನ್ನಷ್ಟೇ ಘೋಷಣೆಯಾಗಬೇಕಾಗಿದೆ ಎಂದು ವರದಿ ಹೇಳಿದೆ.

      ರಷ್ಯಾದ 383 ಸಂಸದರು ಸಂಧಾನದ ತಿದ್ದುಪಡಿ ಪರವಾಗಿ ಮತ ಚಲಾಯಿಸಿದ್ದು, 43 ಸಂಸದರು ಮತದಾನಕ್ಕೆ ಗೈರಾಗಿದ್ದಾರೆ. ಸಂಸತ್ ಮೇಲ್ಮನೆಯೂ ತಿದ್ದುಪಡಿಗೆ ಒಪ್ಪಿಗೆ ನೀಡಿದ್ದು, ನಿಗದಿಯಂತೆ ತಿದ್ದುಪಡಿಗೆ ಏಪ್ರಿಲ್ 22 ರಂದು ದೇಶದಾದ್ಯಂತ ಸಾರ್ವತ್ರಿಕ ಮತದಾನ ನಡೆಯಬೇಕಾಗಿತ್ತು. ಆದರೆ, ಕೊರೋನಾ ಹಿನ್ನಲೆಯಲ್ಲಿ ಜು.1 ರಂದು ನಡೆದಿರುವುದಾಗಿ ವರದಿ ತಿಳಿಸಿದೆ.

      ನಿಗದಿಯಂತೆ ಉದ್ದೇಶಿತ ತಿದ್ದುಪಡಿಗೆ ಏಪ್ರಿಲ್ 22ರಂದು ದೇಶಾದ್ಯಂತ ಸಾರ್ವತ್ರಿಕ ಮತದಾನ ನಡೆಯಬೇಕಾಗಿತ್ತು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ಜುಲೈ 1ರಂದು ನಡೆದಿರುವುದಾಗಿ ವರದಿ ತಿಳಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+