RBI: ದೇಶ ವಿಭಜನನೆಯಾದ ಮೇಲೂ ಪಾಕಿಸ್ತಾನದ ಕೇಂದ್ರ ಬ್ಯಾಂಕ್ ಆಗಿ ಸೇವೆ ಸಲ್ಲಿಸಿತ್ತು ಭಾರತದ ಆರ್‌ಬಿಐ, ಇಲ್ಲಿದೆ ರೋಚಕ ಮಾಹಿತಿ

RBI: ಆಗಸ್ಟ್ 1947 ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವ ವರ್ಷ ಮಾತ್ರ ಅಲ್ಲ, ಅಖಂಡ ಭಾರತ ಎರಡು ದೇಶಗಳಾಗಿ ವಿಭಜನೆಯಾಗಿರುವ ವರ್ಷ ಕೂಡಾ. ಅಲ್ಲಿಯವರೆಗೆ ಪಾಕಿಸ್ತಾನ ಭಾರತದ ಭಾಗವೇ ಆಗಿತ್ತು. ನಂತರ ವಿಭಜನೆಯಾಗಿ ಎರಡು ದೇಶಗಳಾಗಿ ರೂಪುಗೊಂಡಿತು. ಪಾಕಿಸ್ತಾನ ಪ್ರತ್ಯೇಕ ದೇಶವಾಗಿಯೇನೋ ವಿಭಜನೆಯಾಯಿತು. ಆದರೆ ತಕ್ಷಣ ಪ್ರತ್ಯೇಕ ಹಣಕಾಸು ವ್ಯವಸ್ಥೆ ಜಾರಿಗೆ ತರುವುದು ಸಾಧ್ಯವಾಗಲಿಲ್ಲ.

ಸುಮಾರು 11 ತಿಂಗಳುಗಳ ಕಾಲ, ಭಾರತೀಯ ರಿಸರ್ವ್ ಬ್ಯಾಂಕ್ ಪಾಕಿಸ್ತಾನದ ಕೇಂದ್ರ ಬ್ಯಾಂಕ್ ಆಗಿಯೂ ಕಾರ್ಯನಿರ್ವಹಿಸಿತು. ಹೊಸ ದೇಶವು ತನ್ನದೇ ಆದ ಸಂಸ್ಥೆಯನ್ನು ನಿರ್ಮಿಸುವ ಹೊತ್ತಿನಲ್ಲಿ ಆರ್‌ಬಿಐ ಪಾಕಿಸ್ತಾನದ ಸರ್ಕಾರಿ-ಬ್ಯಾಂಕಿಂಗ್ ಮತ್ತು ಕರೆನ್ಸಿ ವ್ಯವಸ್ಥೆಗಳನ್ನು ನಿರ್ವಹಿಸಿತು.

RBI

ಪಾಕಿಸ್ತಾನಕ್ಕೆ ಆರ್‌ಬಿಐ ಅವಶ್ಯಕತೆ ಯಾಕಿತ್ತು?

1935 ರಲ್ಲಿ ಅವಿಭಜಿತ ಭಾರತದ ಕೇಂದ್ರ ಬ್ಯಾಂಕ್ ಆಗಿ RBI ಸ್ಥಾಪನೆಯಾಯಿತು. 1947 ರ ಹೊತ್ತಿಗೆ, ದೇಶ ವಿಭಜನೆಯಾದ ನಂತರ ಕರೆನ್ಸಿ ಚಲಾವಣೆಯನ್ನು ಮುಂದುವರಿಸಲು ಅಗತ್ಯವಾದ ಕಚೇರಿಗಳು, ಸಿಬ್ಬಂದಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಅದು ಹೊಂದಿತ್ತು. ಕರಾಚಿ ಮತ್ತು ಲಾಹೋರ್‌ನಲ್ಲಿದ್ದ ಕಚೇರಿಗಳು ವಿಭಜನೆಯ ನಂತರ ಪಾಕಿಸ್ತಾನದ ಭಾಗವಾದವು.

ಪಾಕಿಸ್ತಾನಕ್ಕೆ ಬೇಕಾಗಿತ್ತು ಸಮಯಾವಕಾಶ

ಈ ಮಧ್ಯೆ, ಪಾಕಿಸ್ತಾನಕ್ಕೆ ಕೇಂದ್ರ ಬ್ಯಾಂಕ್ ರಚಿಸಲು, ಅಗತ್ಯ ಕಾನೂನುಗಳನ್ನು ಜಾರಿಗೆ ತರಲು, ತರಬೇತಿ ಪಡೆದ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮತ್ತು ವಾಣಿಜ್ಯ ಬ್ಯಾಂಕ್‌ಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಸಮಯ ಬೇಕಾಗಿತ್ತು. ಇವೆಲ್ಲವೂ ತಕ್ಷಣಕ್ಕೆ ಆಗುವ ಕೆಲಸಗಳಾಗಿರಲಿಲ್ಲ. ಆ ಕೆಲಸ ಪೂರ್ಣಗೊಳ್ಳುವವರೆಗೆ ಸರ್ಕಾರಿ ಖಾತೆಗಳು ಮತ್ತು ಕರೆನ್ಸಿ ಪೂರೈಕೆಯನ್ನು ಸ್ಥಗಿತಗೊಳಿಸುವುದು ಕೂಡಾ ಸಾಧ್ಯವಿರಲಿಲ್ಲ. ಹಾಗಾಗಿ ಪಾಕಿಸ್ತಾನ್‌ ಆರ್ಡರ್‌ 1947 ರ ಅಡಿಯಲ್ಲಿ ಒಂದು ಸಿಸ್ಟಮ್‌ ಅನ್ನು ಜಾರಿಗೆ ತರಲಾಯಿತು. ಇದರ ಪ್ರಕಾರ ಈ ಅವಧಿಯಲ್ಲಿ ಆರ್‌ಬಿಐ ಪಾಕಿಸ್ತಾನ ಸರ್ಕಾರಕ್ಕೆ ಬ್ಯಾಂಕರ್ ಆಗಿ ಸೇವೆ ನೀಡುವುದನ್ನು ಮುಂದುವರೆಸಿತು. ಜೂನ್ 1948 ರವರೆಗೆ ಆರ್‌ಬಿಐನ ಪಾಕಿಸ್ತಾನದ ಕೇಂದ್ರ ಬ್ಯಾಂಕ್ ಆಗಿಯೂ ಕಾರ್ಯನಿರ್ವಹಿಸಿತ್ತು.

ಇನ್ನೊಂದು ಮುಖ್ಯ ಅಂಶ ಎಂದರೆ ಆ ಸಮಯದಲ್ಲಿ ಆರ್‌ಬಿಐ ರಾಷ್ಟ್ರೀಕರಣವಾಗಿರಲಿಲ್ಲ. 1949 ರಲ್ಲಿ ಇದನ್ನು ರಾಷ್ಟ್ರೀಕರಣಗೊಳಿಸಲಾಯಿತು.

ಪಾಕಿಸ್ತಾನಕ್ಕಾಗಿ ಗುರುತಿಸಲಾದ ಭಾರತೀಯ ನೋಟುಗಳು

ಪಾಕಿಸ್ತಾನ ಹೊಸ ದೇಶವಾಗಿ ರೂಪುಗೊಂಡ ನಂತರವೂ ಆರಂಭದಲ್ಲಿ ಅದಕ್ಕೆ ಅದರದ್ದೇ ಆದ ಕರೆನ್ಸಿ ಇರಲಿಲ್ಲ. ಅದು ಭಾರತೀಯ ಕರೆನ್ಸಿ ಚಲಾವಣೆಯಲ್ಲಿ ಇರಿಸಿಕೊಂಡಿತ್ತು.

ಪಾಕಿಸ್ತಾನದ ನೋಟುಗಳನ್ನು ನಂತರ ಅಸ್ತಿತ್ವಕ್ಕೆ ಬಂತು. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಬ್ಯಾಂಕ್‌ ನೋಟ್ ಇತಿಹಾಸದ ಪ್ರಕಾರ, ಮೊದಲು ಇಲ್ಲಿ 1 ಮತ್ತು 2, 5, 10 ಮತ್ತು 100 ರೂ. ಮೌಲ್ಯದ ನೋಟುಗಊ ಅಸ್ತಿತ್ವಕ್ಕೆ ಬಂದವು.

ಈ ನೋಟಿನ ಮೇಲ್ಭಾಗದಲ್ಲಿ ಪಾಕಿಸ್ತಾನ ಸರ್ಕಾರ ಎಂದು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿತ್ತು. ವಾಟರ್‌ಮಾರ್ಕ್ ಪ್ರದೇಶದ ಬಳಿ ಉರ್ದುವಿನಲ್ಲಿ 'ಹಕುಮತ್-ಇ-ಪಾಕಿಸ್ತಾನ' ಎಂದು ಬರೆಯಲಾಗಿತ್ತು. ನೋಟು ನೋಡುವುದಕ್ಕೆ ಭಾರತೀಯ ವಿನ್ಯಾಸವನ್ನೇ ಹೊಂದಿತ್ತು. ಈ ನೋಟುಗಳು ಪಾಕಿಸ್ತಾನಕ್ಕಾಗಿ ಅಸ್ತಿತ್ವಕ್ಕೆ ಬಂದವಾಗಿದ್ದವು.ಆದರೆ ಭಾರತದ ಹಣಕಾಸು ವ್ಯವಸ್ಥೆಯಿಂದಲೇ ಹೊರ ಹೊಮ್ಮಿದ ನೋಟುಗಳಾಗಿತ್ತು.

ಪಾಕಿಸ್ತಾನ ತನ್ನ ಕರೆನ್ಸಿಯನ್ನು ಹೇಗೆ ನಿಯಂತ್ರಣಕ್ಕೆ ತೆಗೆದುಕೊಂಡಿತು

ಸ್ವಾತಂತ್ರ್ಯ ಬಂದ ಕೆಲವೇ ತಿಂಗಳುಗಳಲ್ಲಿ ಪಾಕಿಸ್ತಾನ ತನ್ನದೇ ಆದ ಹಣಕಾಸು ಪ್ರಾಧಿಕಾರವನ್ನು ನಿರ್ಮಿಸಲು ಪ್ರಾರಂಭಿಸಿತು.

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಸ್ಥಾಪನೆಗೆ ಮೇ 12, 1948 ರಂದು ಆದೇಶ ಹೊರಡಿಸಲಾಯಿತು. ಇದು ದೇಶದ ಕೇಂದ್ರ ಬ್ಯಾಂಕ್‌ಗೆ ಕಾನೂನು ಅಡಿಪಾಯವನ್ನು ಸ್ಥಾಪಿಸಿತು. ಜುಲೈ 1, 1948 ರಂದು ಕರಾಚಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಪ್ರಾರಂಭವಾಯಿತು. ಜಾಹಿದ್ ಹುಸೇನ್ ಅದರ ಮೊದಲ ಗವರ್ನರ್ ಆಗಿ ನೇಮಕಗೊಂಡರು. ಪಾಕಿಸ್ತಾನದಲ್ಲಿ ಆರ್‌ಬಿಐನ ಜವಾಬ್ದಾರಿ ಜೂನ್ 30 ರಂದು ಮುಕ್ತಾಯಗೊಂಡಿತು.

ಸರ್ಕಾರವು ಅಕ್ಟೋಬರ್ 1, 1948 ರಂದು ತುರ್ತು ಪರಿಸ್ಥಿತಿಯಲ್ಲಿ 5, 10 ಮತ್ತು 100 ರೂ. ನೋಟುಗಳನ್ನು ಪರಿಚಯಿಸಿತು. ಇವುಗಳನ್ನು ಬ್ರಿಟಿಷ್ ಬ್ಯಾಂಕ್ನೋಟು ತಯಾರಕ ಥಾಮಸ್ ಡಿ ಲಾ ರೂ. ಮುದ್ರಿಸಿದರು.

ಮಾರ್ಚ್ 1, 1949 ರಂದು, ಸ್ಟೇಟ್ ಬ್ಯಾಂಕ್ 2 ರೂ. ನೋಟನ್ನು 1 ರೂ. ನೋಟಿನ ಜೊತೆಗೆ ಪರಿಚಯಿಸಿತು. 2 ರೂ. ನೋಟಿನ ಮೇಲೆ ಇಂಗ್ಲಿಷ್, ಉರ್ದು ಮತ್ತು ಬಂಗಾಳಿ ಭಾಷೆಗಳಲ್ಲಿ ಬರೆಯಲಾಗಿತ್ತು. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಪ್ರಾರಂಭವಾದ ನಂತರವೂ ಭಾರತೀಯ ಮತ್ತು ಪಾಕಿಸ್ತಾನಿ ರೂಪಾಯಿಗಳು ಮೌಲ್ಯದಲ್ಲಿ ಸಮಾನವಾಗಿ ಉಳಿದವು.ಸೆಪ್ಟೆಂಬರ್ 1949ವರೆಗೆ ಈ ಮೌಲ್ಯ ಒಂದೇ ಆಗಿತ್ತು.

ಭಾರತವು ಸ್ಟರ್ಲಿಂಗ್ ಜೊತೆಗೆ ರೂಪಾಯಿ ಮೌಲ್ಯವನ್ನು ಕಡಿಮೆ ಮಾಡಿತು. ಪಾಕಿಸ್ತಾನವು ಅದನ್ನು ಒಪ್ಪಲಿಲ್ಲ. ಇಲ್ಲಿಗೆ ಎರಡು ಕರೆನ್ಸಿಗಳ ನಡುವಿನ ವಿನಿಮಯ ಸಂಬಂಧ ಬದಲಾಯಿತು.ದ್ವಿಪಕ್ಷೀಯ ವ್ಯಾಪಾರದಲ್ಲಿ ದೀರ್ಘಕಾಲದ ಸಮಸ್ಯೆ ಉಂಟುಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+