ಪಾಕಿಸ್ತಾನ ಪತ್ರಿಕೆಗಳಲ್ಲಿ ಸುದ್ದಿಯಾದ ನಟಿ, ಮಾಜಿ ಸಂಸದೆ ರಮ್ಯಾ

Posted By:
Subscribe to Oneindia Kannada

ಬೆಂಗಳೂರು: 'ಪಾಕಿಸ್ತಾನ ಹೋಗೋದು ಎಂದರೆ ನರಕಕ್ಕೆ ಹೋದಂತೆ' ಎಂಬ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮಾತಿಗೆ, ಅಲ್ಲಿ ಪರಿಸ್ಥಿತಿ ಹಾಗಿಲ್ಲ ಎಂಬ ಹೇಳಿಕೆ ನೀಡಿ ರಾಷ್ಟ್ರದ್ರೋಹದ ಪ್ರಕರಣ ಎದುರಿಸುತ್ತಿರುವ ನಟಿ, ಮಾಜಿ ಸಂಸದೆ ರಮ್ಯಾ ಬಗ್ಗೆ ಪಾಕಿಸ್ತಾನದ ದಿ ಡಾನ್, ನೇಷನ್ ಇಂಗ್ಲಿಷ್ ಹಾಗೂ ಜಂಗ್ ಉರ್ದು ಪತ್ರಿಕೆಗಳು ಸುದ್ದಿ ಮಾಡಿವೆ.

ರಮ್ಯಾ ನೀಡಿದ ಹೇಳಿಕೆ, ಆ ನಂತರ ಆಕೆ ವಿರುದ್ಧ ದಾಖಲಾದ ಕೇಸಿನ ಬಗ್ಗೆ ವಿವರವಾಗಿ ಬರೆದಿರುವ ಡಾನ್ ಪತ್ರಿಕೆ, 'ಸೆಡಿಷನ್ ಕೇಸ್ ಎಗೇನ್ಸ್ಟ್ ಇಂಡಿಯನ್ ಆಕ್ಟ್ರೆಸ್ ಫಾರ್ ಪ್ರೈಸಿಂಗ್ ಪಾಕಿಸ್ತಾನ್' ಎಂದು ಶೀರ್ಷಿಕೆ ನೀಡಲಾಗಿದೆ. ಈ ವರದಿಗೆ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ 51 ಮಂದಿ ಕಾಮೆಂಟ್ ಸಹ ಮಾಡಿದ್ದಾರೆ.[ಪಾಕಿಸ್ತಾನ ನರಕವಲ್ಲ, ನನ್ನ ಹೇಳಿಕೆ ಬದ್ಧಳಾಗಿದ್ದೇನೆ: ರಮ್ಯಾ ಲೇಖನ]

Ramya news in Pakistan news papers

ಆಗಸ್ಟ್ 24ರಂದು ದೆಹಲಿಯಿಂದ ಈ ವರದಿ ಮಾಡಲಾಗಿದ್ದು, ಬಲಪಂಥೀಯ ವಕೀಲರೊಬ್ಬರು ರಮ್ಯಾ ವಿರುದ್ಧ ಸಿವಿಲ್ ದಾವೆ ಹೂಡಿದ್ದಾರೆ ಎಂದು ಬರೆಯಲಾಗಿದೆ. ಇನ್ನು ದಿ ನೇಷನ್ ಪತ್ರಿಕೆಯಲ್ಲಿ, 'ಇಂಡಿಯನ್ ಆಕ್ಟ್ರೆಸ್ ಫೇಸಸ್ ಸೆಡಿಷನ್ ಚಾರ್ಜಸ್ ಫಾರ್ "ಲೈಕಿಂಗ್' ಪಾಕಿಸ್ತಾನ್ ಎಂದು ಶೀರ್ಷಿಕೆ ನೀಡಲಾಗಿದೆ.[ನಾನು ದೇಶದ್ರೋಹಿಯಲ್ಲ, ನಾನು ಕ್ಷಮೆಯಾಚಿಸಲ್ಲ : ರಮ್ಯಾ]

ಹೆಚ್ಚಿನ ವಿವರಗಳಿರುವ ಈ ಪತ್ರಿಕೆಯಲ್ಲಿ ಕಟ್ನಮನೆ ವಿಠಲ ಗೌಡ ಅವರ ಹೆಸರನ್ನೂ ಬರೆದಿದ್ದು, ಆಗಸ್ಟ್ 27ರಂದು ಪ್ರಕರಣದ ಅರ್ಜಿ ವಿಚಾರಣೆಗೆ ಬರಲಿದೆ ಎಂದು ಸಹ ಬರೆಯಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Actress, Ex MP Ramya who is facing sedition case for pro Pakistan people statement news published in Pakistan news papers. Recent developments also published by newspapers.
Please Wait while comments are loading...