• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮಸೇತು ಮಾನವ ನಿರ್ಮಿತ : ಅಮೆರಿಕದ ವಿಜ್ಞಾನ ಚಾನೆಲ್ ಪ್ರೋಮೋ

|

ನವದೆಹಲಿ, ಡಿಸೆಂಬರ್ 13: ರಾಮಾಯಣದಲ್ಲಿ ಪ್ರಸ್ತಾವ ಆಗಿರುವ, ಭಾರತ-ಶ್ರೀಲಂಕಾ ಮಧ್ಯೆ ಇರುವ 'ರಾಮಸೇತು' ಮಾನವ ನಿರ್ಮಿತ ಎಂದು ವಿಜ್ಞಾನ ಚಾನೆಲ್ ವೊಂದು ಕಾರ್ಯಕ್ರಮ ಪ್ರಸಾರ ಮಾಡಿದೆ. ಈ ಬಗ್ಗೆ ವಾಹಿನಿ ಪ್ರೋಮೊ ಬಿಡುಗಡೆ ಮಾಡಿದೆ. ಇದನ್ನು ಆಡಮ್ ಸೇತುವೆ ಎಂದು ಕೂಡ ಕರೆಯಲಾಗುತ್ತದೆ ಎನ್ನಲಾಗಿದೆ.

ಈ ಸೇತುವೆ ಸಹಜವಾಗಿ ನಿರ್ಮಾಣ ಆಗಿರುವಂಥದ್ದಲ್ಲ. ಇದು ಮನುಷ್ಯರೇ ನಿರ್ಮಾಣ ಮಾಡಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. "ಪ್ರಾಚೀನ ಹಿಂದೂ ನಂಬಿಕೆಗಳ ಪ್ರಕಾರ ಭಾರತ- ಶ್ರೀಲಂಕಾ ಮಧ್ಯ್ ಸೇತುವೆ ನಿರ್ಮಿಸಲಾಗಿದೆ ಎಂಬುದು ನಿಜವೇ? ವೈಜ್ಞಾನಿಕ ವಿಶ್ಲೇಷಣೆಗಳು ನಿಜ ಎಂಬುದನ್ನು ಸಾರುತ್ತಿವೆ" ಎಂದು ತಿಳಿಸಲಾಗಿದೆ.

ನಾಸಾದ ಉಪಗ್ರಹದಲ್ಲಿ ಸೆರೆಯಾಗಿರುವ ಫೋಟೋದ ಆಧಾರದಲ್ಲಿ ನಡೆಸಿದ ತನಿಖೆಯಲ್ಲಿ ಮೂವತ್ತು ಮೈಲು ಉದ್ದದ ಕಲ್ಲಿನ ಸಾಲೊಂದು ಭಾರತ- ಶ್ರೀಲಂಕಾ ಮಧ್ಯೆ ಇರುವುದು ಖಾತ್ರಿಯಾಗಿದೆ. ಏಳು ಸಾವಿರ ವರ್ಷಗಳ ಹಳೆಯ ಕಲ್ಲುಗಳು ನಾಲ್ಕು ಸಾವಿರ ವರ್ಷಗಳ ಮರಳಿನ ಮೇಲೆ ನಿಂತಿದೆ. ಬೇರೆಡೆಯಿಂದ ತಂದ ಕಲ್ಲನ್ನು ಇಲ್ಲಿನ ಮರಳಿನ ಮೇಲೆ ಇಡಲಾಗಿದೆ ಎಂದು ಜಿಯಾಲಜಿಸ್ಟ್ ಡಾ. ಆಲನ್ ಲೆಸ್ಟರ್ ಅಭಿಪ್ರಾಯ ಪಡುತ್ತಾರೆ.

English summary
Hindu mythology reference of Ram Setu man made, not created by nature claim by US science tv channel. This channel investigates on the basis of NASA satellite image and telecast the promo about findings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X